ಭಾರತದಲ್ಲಿ ಹೃದಯ ಸಮಸ್ಯೆ ಸಾಮಾನ್ಯವಾಗಿದೆ. ಯುರೋಪ್, ಚೀನಾ ದೇಶಕ್ಕಿಂತ ನಮ್ಮಲ್ಲೇ ಹೆಚ್ಚು ಹೃದಯ ಸಮಸ್ಯೆ ಕಂಡುಬರುತ್ತಿದ್ದು, ಇದಕ್ಕೆ ಸೂಕ್ತವಾದ ಪರೀಕ್ಷೆ ಅಗತ್ಯವೆಂದು ನಾರಾಯಣ ಹೃದಯಾಲಯದ ಹೃದಯ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಹೃದಯಾಘಾತ ಪುರುಷರಿಗೆ ಹೆಚ್ಚು ಕಂಡುಬರುತ್ತಿದೆ. ಜಿಮ್‌ನಲ್ಲಿ ಹೆಚ್ಚು ವರ್ಕೌಟ್ ಮಾಡುವವರು ಹೃದಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಸಿಜಿ, ಎಕೋ ಕಾರ್ಡಿಯೋಗ್ರಾಂ, ಸೀಟಿ ಆಂಜೋ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮೂರು ಪರೀಕ್ಷೆಯಲ್ಲಿ ಹೆಚ್ಚಿನ ಹೃದಯಾಘಾತವನ್ನು ತಪ್ಪಿಸಬಹುದು. ಪ್ರತಿಯೊಬ್ಬರೂ ವ್ಯಾಯಾಮವನ್ನು ನಿಯಮಿತವಾಗಿ ಮಾಡಿಕೊಳ್ಳಿ. ವ್ಯಾಯಾಮದಿಂದ ದೇಹಕ್ಕೆ ಬಹಳಷ್ಟು ಉಪಕಾರಿಯಾಗುವುದು ಎಂದು ಡಾ. ದೇವಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದ್ದಾರೆ.