ಪುತ್ತೂರು: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲ ಸ್ಥಾನ ಕ್ಷೇತ್ರಾಡಳಿತ ಸಮಿತಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ 2020-21 ನೇ ಸಾಲಿನ 5 ನೇ ವಾರ್ಷಿಕ ವಾರ್ಷಿಕ ಮಹಾ ಸಭೆಯು 30-10-2021 ಶನಿವಾರ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ ನಡುಬೈಲ್ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ಜರಗಿತು.
ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ ಮಂಡಿಸಿದರು ವರದಿಯನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು, ಸುಜಿತಾ ವಿ ಬಂಗೇರ ಸೂಚಿಸಿ ದಯಾನಂದ ಕಲ್ಯಾ ಅನುಮೋದಿಸಿದರು. ಕ್ಷೇತ್ರಾಡಳಿತ ಸಮಿತಿಯ ಕೋಶಾಧಿಕಾರಿ ದೀಪಕ್ ಕೋಟ್ಯಾನ್ ವಾರ್ಷಿಕ ಲೆಕ್ಕಪತ್ರ ವನ್ನು ಸಭೆಗೆ ಮಂಡಿಸಿದರು ಲೆಕ್ಕ ಪತ್ರ ವನ್ನು ಸಭೆಯು ವಿವರವಾಗಿ ಚರ್ಚಿಸಿ ಅಂಗೀಕರಿಸಿತು, ಭಾಸ್ಕರ್ ಸಾಲ್ಯಾನ್ ಸೂಚಿಸಿ ಎನ್. ಟಿ. ಪೂಜಾರಿ ಅನುಮೋದಿಸಿದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.
ಕ್ಷೇತ್ರಾಡಳಿತ ಸಮಿತಿಯ ಬೈಲಾದಲ್ಲಿ ನಮೂದಿಸಿರುವ ಹಾಗೆ ಹಾಲಿ ಕಾರ್ಯಕಾರಿ ಸಮಿತಿಯಲಿದ್ದ ಸದಸ್ಯರನ್ನು ಕೈ ಎತ್ತುವುದರ ಮೂಲಕ ಮುಂದಿನ ಅವಧಿಗೆ ಪುನಾರಾಯ್ಕೆ ಮಾಡಲಾಯಿತು.
ಪವರ್ ಸ್ಟಾರ್ ಸಮಾಜದ ಕಣ್ಮಣಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬಗ್ಗೆ ಭಕ್ತಿ ಭಾವವಿರುವ ಪುನೀತ್ ರಾಜ್ ಕುಮಾರ್ ನಿಧನಕ್ಕೆ ವಿಶೇಷವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಭೆಯಲ್ಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್, ಉಪಾಧ್ಯಕ್ಷರಾದ ಪೀತಾಂಬರ ಹೆರಾಜೆ, ಕಾರ್ಯಕಾರಿ ಸಮಿತಿಯ ಲ್ಲಿರುವ ಮುಂಬೈ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷರಾದ ಹರೀಶ್ ಅಮೀನ್, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಾದ ಎನ್. ಟಿ. ಪೂಜಾರಿ ಹಾಗೂ ಇನ್ನಿತರ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿಹಾಜರಿದ್ದರು. ಅಧ್ಯಕ್ಷರಾದ ಜಯಂತ ನಡುಬೈಲ್ ಸ್ವಾಗತಿಸಿ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಧನ್ಯವಾದ ನೀಡಿದರು.