ಇಂದೋರ್: ಪತಿಯೊಬ್ಬ ತನ್ನ ಕಿರಿಯ ಪತ್ನಿಯೊಂದಿಗೆ ಸಂಬಂಧ ಬೆಳೆಸುವಾಗ ತನಗೆ ಕಚ್ಚಿದ್ದಾನೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿರುವ ಘಟನೆ
ಇಂದೋರ್‌ನಲ್ಲಿ ನಡೆದಿದೆ.
ಏನಿದು ಘಟನೆ… ?
67 ವರ್ಷದ ಗುಜರಾತ್ ನಿವಾಸಿ ಬುಲಿಯನ್ ಎಂಬ ಉದ್ಯಮಿ ತನ್ನ 27 ವರ್ಷದ ಕಿರಿಯ ಹೆಂಡತಿಯೊಂದಿಗೆ ಸಂಬಂಧವನ್ನು ಬೆಳೆಸುವಾಗ ಕಚ್ಚಿ ಹಿಂಸಿಸಿದ್ದಾನೆ ಎಂದು ಆರೋಪಿಸಿ ಪತಿ ವಿರುದ್ಧ ಪತ್ನಿ ಕಳೆದ ಡಿಸೆಂಬರ್(2021)ನಲ್ಲಿ ದೂರು ದಾಖಲಿಸಿದ್ದಳು.
ಈ ಪ್ರಕರಣವು ಮಹಿಳೆಗೆ ಸಂಬಂಧಿಸಿದ ಗಂಭೀರ ಅಪರಾಧ ಎಂದು ಪರಿಗಣಿಸಿದ ನ್ಯಾಯಾಲಯ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಇಂದೋರ್ ಜಿಲ್ಲಾ ನ್ಯಾಯಾಲಯ ಆಘಾತಕಾರಿ ತೀರ್ಪು ನೀಡಿ ಆದೇಶ ಹೊರಡಿಸಿದೆ. ಅಲ್ಲದೇ ಅವನ ಮೂವತ್ತೆರಡು ಹಲ್ಲುಗಳನ್ನು ಹೊರತೆಗೆಯುವಂತೆ ಕೋರ್ಟ್ ಹೇಳಿದೆ.
ಮಹಿಳೆಯ ಪರವಾಗಿ ವಕೀಲ ಕೃಷ್ಣಕುಮಾರ್ ಕುಮ್ಹಾರೆ ವಾದ ಮಂಡಿಸಿ, ದೌರ್ಜನ್ಯದ ಫೋಟೋಗಳು ಮತ್ತು ಗಾಯದ ಗುರುತುಗಳನ್ನು ನ್ಯಾಯಾಲಯದ ಮುಂದೆ ಸಾಬೀತುಪಡಿಸಲಾಗಿದೆ. ಮಹಿಳೆಯ ಘನತೆಯನ್ನು ಉಲ್ಲೇಖಿಸಿ ಆರೋಪಿಯನ್ನು ಶೀಘ್ರದಲ್ಲೇ ಹಾಜರುಪಡಿಸುವಂತೆ ನ್ಯಾಯಾಲಯ ಹೇಳಿದೆ.
ಕರೋನಾ ಅವಧಿಯಲ್ಲಿ ಬುಲಿಯನ್‌ನ ಮೊದಲ ಪತ್ನಿ ಸಾವನ್ನಪ್ಪಿದ್ದರು. ನಂತರ ಈತ ಅಕ್ಟೋಬರ್ 2021 ರಲ್ಲಿ ಎರಡನೇ ಮದುವೆಯಾಗಿದ್ದನು. ಇನ್ನು ಇದೀಗ ಆರೋಪಿಯು ಕಳೆದ ಡಿಸೆಂಬರ್ 7 ರಿಂದ ತಲೆಮರೆಸಿಕೊಂಡಿದ್ದಾನೆ.