ಜನವರಿ 26 ಗಣರಾಜ್ಯೋತ್ಸವ ಆಚರಣೆಯಲ್ಲಿ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ ಹಾಗಿದ್ದರೆನಾವು ಏನು ಮಾಡಬೇಕು.?
ಜನವರಿ 26ರಂದು ರಾಜ್ಯದ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪರ್ಯಾಯವಾಗಿ ಶ್ರೀ ನಾರಾಯಣ ಗುರು ಅವರಿಗೆ ಗೌರವ ತೋರಿಸುವಕಾರ್ಯಕ್ರಮಗಳನ್ನು ನಡೆಸಬೇಕು. ಗುರುದೇವರ ಸ್ತಬ್ಧ ಚಿತ್ರ ಮೆರವಣಿಗೆ ಪ್ರತೀ ತಾಲೂಕು ಗಳಲ್ಲಿ ಜರಗಿ ಅವರ ಚಿಂತನೆ, ಸಮಾಜಸುಧಾರಣೆಯ ಕ್ರಮಗಳನ್ನು ನೆನಪು ಮಾಡಿಕೊಳ್ಳಬೇಕು. ಈ ಬಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಕಟಪಾಡಿ ವಿಶ್ವನಾಥ ಕ್ಷೇತ್ರ, ಗೆಜ್ಜೆಗಿರಿ, ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ, ಯುವವಾಹಿನಿ, ಶ್ರೀ ನಾರಾಯಣ ಗುರು ವಿಚಾರ ವೇದಿಕೆ, ಬಿಲ್ಲವ ಬ್ರಿಗೇಡ್, ಬಿರುವೆರ್ ಕುಡ್ಲ, ಎಲ್ಲಾ ಬಿಲ್ಲವ ಸಂಘಗಳು, ಶ್ರೀ ನಾರಾಯಣ ಗುರು ಸಂಘಗಳು, ಯುವ ಸಂಘಟನೆ ಗಳ ಪ್ರಮುಖರು ಸೇರಿಪಕ್ಷಾತೀತವಾಗಿ ತೆಗೆದುಕೊಂಡ ತೀರ್ಮಾನ ಇದಾಗಿದೆ.