ಕಾರ್ಕಳ: ಅಜೆಕಾರಿನಲ್ಲಿ ಡಾ. ಶೇಖರ್ ಅಜೆಕಾರ್ ನೇತೃತ್ವದ ಆದಿಗ್ರಾಮೋತ್ಸವ ಕಾರ್ಯಕ್ರಮ ದಿನಾಂಕ 25/01/2022 ರಂದು ಕಾರ್ಕಳದ ಅಜೆಕಾರ್ ನಲ್ಲಿ ಡಾ || ಶೇಖರ್ ಅಜೆಕಾರ್ ಇವರು ಕಳೆದ 23 ವರುಷಗಳಿಂದ ನಡೆಸಿಕೊಂಡು ಬರುತ್ತಿರುವ ಆದಿ ಗ್ರಾಮೋತ್ಸವ ಎಂಬ ಕಾರ್ಯಕ್ರಮವು ಜರುಗಿತು.
ಇನ್ಫೋಸಿಸ್ ಉದ್ಯೋಗಿ ಮಂಗಳೂರಿನ ರಶ್ಮಿ ಸನಿಲ್ ಇವರಿಗೆ ಬಹುಮುಖ ಪ್ರತಿಭೆಗಾಗಿ ” ಆದಿಗ್ರಾಮೋತ್ಸವ ಯುವಸಿರಿ ಗೌರವ” ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಇವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ಶೆಣೈ ಉಡುಪಿ,ಗೌರವಾಧ್ಯಕ್ಷರು ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಇವರು ವಹಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಪ್ರಶಸ್ತಿ ಪ್ರಧಾನ ಮಾಡಿದರು. ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.