TOP STORIES:

ಮಂಗಳೂರು ನಗರ, ಉಳ್ಳಾಲ, ಸುರತ್ಕಲ್-ಗುರುಪುರ ವಲಯಗಳಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ


ಸಂಘಟನಾತ್ಮಕವಾಗಿ ಪ್ರಚಾರ, ಸುವ್ಯವಸ್ತಿವಾಗಿ ಜಾತ್ರಾ ಮಹೋತ್ಸವ ನಡೆಸುವ ಬಗ್ಗೆ ಸಾಮೂಹಿಕ ಪಾಲ್ಗೊಳ್ಳುವಿಕೆಯಲ್ಲಿ ಯಶಸ್ವಿ ಸಭೆ

ದೇಯಿ ಬೈದೆತಿ- ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 3 ರಿಂದ 7 ರ ವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಂಗಳೂರು ನಗರ, ಉಳ್ಳಾಲ, ಸುರತ್ಕಲ್, ಗುರುಪುರ ವಲಯಗಳ ವ್ಯಾಪ್ತಿಯಲ್ಲಿ ಆದಿತ್ಯವಾರ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಸಭಾಂಗಣದಲ್ಲಿ ಎಂ.ಪಿ. ಸಿಲ್ಕ್ ನ ಮಾಲಕರಾದ ಎಂ.ಪಿ. ದಿನೇಶ್ ಬಿಡುಗಡೆಗೊಳಿಸಿದರು.

ನೇಮೋತ್ಸವ ಸಮಿತಿ ಗೌರವಾಧ್ಯಕ್ಷರಾದ ಚಿತ್ತರಂಜನ್ ಕಂಕನಾಡಿ ಮಾರ್ಗದರ್ಶನದಲ್ಲಿ ಜರಗಿದ ಸಭೆಯಲ್ಲಿ ಆಮಂತ್ರಣ ಪತ್ರಿಕೆಯನ್ನು ಜಿಲ್ಲೆಗಳ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರದ ಭಕ್ತಾಭಿಮಾನಿಗಳಿಗೆ ಸ್ಥಳೀಯ ಸಮಾಜದ ಸಂಘ ಸಂಸ್ಥೆಗಳ ಮೂಲಕ ತಲುಪಿಸಿ ಅನ್ಯ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಭಕ್ತರಿಗೆ ಆಮಂತ್ರಣ ಪತ್ರಿಕೆಯನ್ನು ವಾಟ್ಸಾಪ್ ಹಾಗೂ ಇತರ ಆನ್ಲೈನ್ ಮಾಧ್ಯಮ ಗಳ ಮೂಲಕ ವಿಶ್ವಾದ್ಯಂತ ನೆಲೆಸಿರುವ ಶ್ರೀ ಕ್ಷೇತ್ರದ ಭಕ್ತಾಭಿಮಾನಿ ಗಳಿಗೆ ತಲುಪಿಸಿ ಈ ಮಹೋತ್ಸವಕ್ಕೆ ಆಮಂತ್ರಿಸಲು ತೀರ್ಮಾನಿಸಲಾಯಿತು. ಜಾತ್ರಾಮಹೋತ್ಸವದ ಹೊರೆಕಾಣಿಕೆ ಮೆರವಣಿಗೆ ಮಂಗಳೂರಿನಲ್ಲಿ ಮಾರ್ಚ್ 3 ಬೆಳಿಗ್ಗೆ 11ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಾರಂಭಗೊಂಡು ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಮೂಲಕ ಮಧ್ಯಾಹ್ನ 1ಕ್ಕೆ ಪುತ್ತೂರು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘ ತಲುಪಿ ಅಲ್ಲಿಂದ ಮಧ್ಯಾಹ್ನ 2 ಕ್ಕೆ ವಿವಿಧೆಡೆ ಗಳಿಂದ ಆಗಮಿಸುವ ಹೊರೆಕಾಣಿಕೆ ಮೆರವಣಿಗೆ ಜೊತೆಯಾಗಿ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಹೊರಡುವುದು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿ ಮಾತನಾಡಿದ ಕ್ಷೇತ್ರಾ ಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಯವರು ಶ್ರೀ ಕ್ಷೇತ್ರ ಗೆಜ್ಜೆಗಿರಿ ವಿಶ್ವಬಿಲ್ಲವರ ಪಾಲ್ಗೊಳ್ಳುವಿಕೆಯಿಂದ ನಿರ್ಮಾಣ ಗೊಂಡ ಮಹಾ ಮಾತೆ ದೇಯಿ ಬೈದೆತಿ, ಕೋಟಿ ಚೆನ್ನಯರ ಪ್ರಮುಖ ಆರಾಧನಾ ಸ್ಥಳವಾಗಿದೆ. ವಿಶ್ವಬಿಲ್ಲವರು ತಮ್ಮ ಸಮರ್ಪಣಾ ಭಾವದಿಂದ ಶ್ರೀ ಕ್ಷೇತ್ರವನ್ನು ನಿರ್ಮಿಸಿದ್ದಾರೆ ಹಾಗೂ ಇಂದು ಜಾತಿ ಮತವನ್ನು ಮೀರಿ ಲಕ್ಷಾಂತರ ದೇಯಿ ಬೈದೆತಿ,ಕೋಟಿ ಚೆನ್ನಯರ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಇಲ್ಲಿಯ ಕಾರ್ಣಿಕ ಶಕ್ತಿಗಳ ಆಶೀರ್ವಾದ ವನ್ನು ಪಡೆಯುತ್ತಿದ್ದರೆ ಎಂದರು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಗೆಜ್ಜೆಗಿರಿ ಜಾತ್ರೋತ್ಸವದ ಗೌರವ ಸಲಹೆಗಾರರಾದ ಪದ್ಮರಾಜ್ ಆರ್ ಮಾತನಾಡಿ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ ಮತ್ತು ಹೊರೆಕಾಣಿಕೆ ತುಳುನಾಡಿನಲ್ಲಿ ಇತಿಹಾಸವನ್ನು ನಿರ್ಮಿಸಿದೆ ಜಾತ್ರಾ ಮಹೋತ್ಸವ ಕೂಡ ಬಹಳ ಶಿಸ್ತು ಮತ್ತು ಅಚ್ಚುಕಟ್ಟಾಗಿ ನಡೆಯಲಿದೆ ಎಂದರು.

ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ ಪ್ರಾಸ್ತಾವಿಕವಾಗಿ ಮಾತನಾಡಿ ಪುತ್ತೂರು ಪ್ರದೇಶಕ್ಕೆ ಸೀಮಿತವಾಗಿದ್ದ ಪಡುಮಲೆಯ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ನಂತರ ಧಾರ್ಮಿಕತೆಯ ಜೊತೆ ಸಾಮಾಜಿಕ ಜಾಗ್ರತಿಯ ಮೂಲಕ ಜಿಲ್ಲೆ ರಾಜ್ಯ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಪರಮಪಾವನ ಪುಣ್ಯಕ್ಷೇತ್ರ ವಾಯಿತು ಎಂದರು.

ಕಾರ್ಯಕ್ರಮದಲ್ಲಿ ಜಾತ್ರೋತ್ಸವದ ಗೌರವ ಸಲಹೆಗಾರರಾದ ಸತ್ಯಜಿತ್ ಸುರತ್ಕಲ್, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ,ವಸಂತ್ ಪೂಜಾರಿ ಅಧ್ಯಕ್ಷರು ಬಾಕಿಲ ಗರೋಡಿ, ಪ್ರೇಮ್ ಸನಿಲ್ ಅಧ್ಯಕ್ಷರು ಕನಕರ ಬೆಟ್ಟು ಗರೋಡಿ, ಜಯಾನಂದ ಎಂ ಅಧ್ಯಕ್ಷ ರು ಗುರು ಚಾರಿಟೇಬಲ್ ಟ್ರಸ್ಟ್, ಭರತೇಶ್ ಅಧ್ಯಕ್ಷರು ಕಂಕನಾಡಿ ಬಿಲ್ಲವ ಸಂಘ, ದಿನೇಶ್ ಅಂಚನ್ ಅಧ್ಯಕ್ಷರು ಜಪ್ಪಿನಮೊಗೇರು ಬಿಲ್ಲವ ಸಂಘ, ಪುರುಷೋತ್ತಮ ಪೂಜಾರಿ ಅಧ್ಯಕ್ಷರು ಶ್ರೀ ನಾರಾಯಣ ಗುರು ಸಂಘ ಕೋಡಿಕಲ್, ಚಂದ್ರಶೇಖರ್ ಅಧ್ಯಕ್ಷ ರು ಕಾವೂರು ಬಿಲ್ಲವ ಸಂಘ, ಕೃಷ್ಣಪ್ಪ ಪೂಜಾರಿ ಅಧ್ಯಕ್ಷರು ಮಂಗಳಾ ದೇವಿ ಬಿಲ್ಲವ ಸಂಘ, ಯೋಗಿಶ್ ಅಧ್ಯಕ್ಷರು ಸತ್ತಿಕಲ್ಲು ಬಿಲ್ಲವ ಸಂಘ, ಉಮಾನಾಥ್ ನೀರ್ ಮಾರ್ಗ ಬಿಲ್ಲವ ಸಂಘ, ವಿವೇಕ್ ಕೋಟ್ಯಾನ್ ಸುರತ್ಕಲ್ ಅಧ್ಯಕ್ಷರು ಯುವವಾಹಿನಿ ಘಟಕ, ಸುನೀತಾ ಅಧ್ಯಕ್ಷರು ಯುವವಾಹಿನಿ ಮಹಿಳಾ ಘಟಕ ಮಂಗಳೂರು, ಯುವವಾಹಿನಿ ಕಂಕನಾಡಿ ಘಟಕದ ಅಧ್ಯಕ್ಷ ರಾದ ನಯನ ಸುರೇಶ್, ಕಾರ್ಪೊರೇಟರ್ ಗಳಾದ ಸಂದೀಪ್ ಗರೋಡಿ, ಅನಿಲ್ ಪೂಜಾರಿ ಪಂಜಿಮುಗೇರು, ಪ್ರಮುಖರಾದ ಕಮಲಾಕ್ಷ ಬೋಳಾರ್, ಭಾಸ್ಕರ್ ಉಪ್ಪಳಿಗೆ, ಕ್ಷೇತ್ರಾಡಳಿತ ಸಮಿತಿಯ ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ , ಕಾರ್ಯದರ್ಶಿಗಳಾದ ಚಂದ್ರ ಶೇಖರ್ ಉಚ್ಚಿಲ್, ಮೋಹನ್ ದಾಸ್ ಬಂಗೇರ ವಾಮಂಜೂರು, ಕಾರ್ಯಕಾರಿ ಸದಸ್ಯರಾದ ನವೀನ್ ಸುವರ್ಣ, ಕಾನೂನು ಸಲಹೆಗಾರರಾದ ನವನೀತ್ ಹಿಂಗಾಣಿ, ನೇಮೋತ್ಸವ ಸಮಿತಿಯ ಉಪಾಧ್ಯಕ್ಷರಾದ ಹರೀಶ್ ಕೆ ಪೂಜಾರಿ, ರವೀಂದ್ರ ಬಂಗೇರ ಕೋಣಾಜೆ,ಕಾರ್ಯಾಲಯ ಸಮಿತಿಯ ರಾಮಚಂದ್ರ ದೇರಬೈಲ್, ಗೆಜ್ಜೆಗಿರಿ ಸುರತ್ಕಲ್ ವಲಯದ ಅಧ್ಯಕ್ಷರಾದ ಮಧುಸೂಧನ್ ಇಡ್ಯಾ, ಕಾರ್ಯ ದರ್ಶಿ ಲಕ್ಷ್ಮಣ್ ಇಡ್ಯಾ, ಗೌರವ ಸಲಹೆಗಾರರಾದ ನಾಗೇಶ್ ಬೈಕಂಪಾಡಿ, ಬಿರುವೆರ್ ಕುಡ್ಲ ಕೇಂದ್ರ ಸಮಿತಿ, ಯುವವಾಹಿನಿ ಕೇಂದ್ರ ಸಮಿತಿ, ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ, ಮಹಿಳಾ ಬಿಲ್ಲವ ವೇದಿಕೆಗಳು, ವಿವಿಧ ಶ್ರೀ ನಾರಾಯಣ ಗುರು ಬಿಲ್ಲವ ಸಂಘಗಳು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವಕ್ಕೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು. ಶ್ರೀ ಕ್ಷೇತ್ರದ ವಕ್ತಾರರಾದ ರಾಜೇಂದ್ರ ಚಿಲಿಂಬಿ ಕಾರ್ಯಕ್ರಮ ನಿರೂಪಿಸಿದರು..


Related Posts

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ   ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ   ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್


Read More »

ಸ್ವಾಮಿಗಳ ಚಿತ್ರ ಮತ್ತು ಪ್ರತಿಮೆಯ ಮುಂದೆ ರಾಜ್ಯಪಾಲರೊಂದಿಗೆ ಇರುವ ಚಿತ್ರ


Share         ಶಿವಗಿರಿ: ರಾಜ್ಯಪಾಲ ಆರ್.ವಿ. ಅರ್ಲೆಕ್ಕರ್ ಅವರು ರಾಜಭವನದ ಅತಿಥಿ ಕೊಠಡಿಯಲ್ಲಿ ಶ್ರೀ ನಾರಾಯಣ ಗುರುಗಳ ಚಿತ್ರ ಮತ್ತು ಕಂಚಿನ ಪ್ರತಿಮೆಯನ್ನು ಸ್ವಾಮಿಗಳಿಗೆ ತೋರಿಸಿದರು. ಅತಿಥಿ ಕೊಠಡಿಯನ್ನು ಪ್ರವೇಶಿಸುವಾಗ ಮೊದಲು ನೋಡುವುದು ಗುರುಗಳ ಚಿತ್ರ.


Read More »

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »