ಪುಣೆಯ ಪ್ರತಿಷ್ಠಿತ ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ಯುವ ವಿಭಾಗದ ಅಧ್ಯಕ್ಷೆಯಾಗಿ ತೃಪ್ತಿ ಎಸ್ ಪೂಜಾರಿಆಯ್ಕೆಯಾಗಿದ್ದಾರೆ.
ಜೂನ್ 5ರಂದು ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಕಚೇರಿಯಲ್ಲಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ ಅವರ ಅಧ್ಯಕ್ಷತೆಯಲ್ಲಿಸಂಘದ ಸಭೆ ಜರಗಿತು. ಈ ಸಂದರ್ಭ ಸರ್ವಾನುಮತದಿಂದ ಆರಿಸಲಾಯಿತು.
ಪುಣೆ ಬಿಲ್ಲವ ಸಂಘದಲ್ಲಿ ಸಕ್ರಿಯ ಸದಸ್ಯರಾಗಿರುವ ಇವರು ಬಿ.ಕಾಂ, ಪದವೀಧರೆಯಾಗಿದ್ದು, ಸೌಂದರ್ಯ ವಿನ್ಯಾಸಕಿಯಾಗಿಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದ್ದಾರೆ. ನೃತ್ಯ ಕಲಾವಿದೆಯಾಗಿರುವ ಇವರು ಸಮಾಜ ಸೇವೆಯಲ್ಲೂ ತಮ್ಮನ್ನುತೊಡಗಿಸಿಕೊಂಡಿದ್ದಾರೆ. ತನ್ನ ಅಕ್ಕನೊಂದಿಗೆ ಡ್ರೀಮ್ ಕ್ಯಾಚಸ್ ಫೌಂಡೇಶನ್‌ನಲ್ಲಿ ಕೆಲಸ ಮಾಡುತ್ತಿರುವ ಇವರು ಪುಣೆಯ ಉದ್ಯಮಿಶಂಕರ ಪೂಜಾರಿ ಕಲ್ಲುಗುಡ್ಡೆ ಮತ್ತು ಸಂಗೀತಾ ಎಸ್ ಪೂಜಾರಿ ದಂಪತಿಯ ಪುತ್ರಿ.