ಉಡುಪಿ ಜಿಲ್ಲೆಯ ಶಂಕರಪುರ ದ್ವಾರಕಾಮಾಯಿ ಮಠದ “ಶ್ರೀ ಸಾಯಿ ಈಶ್ವರ್ ಗುರೂಜಿ” ಇವರನ್ನು 2022ರ ಜೂನ್ 25,26ರಂದುದೆಹಲಿ ಹರಿಯಾಣದ ಪಟೋಡಿಯಲ್ಲಿ ನಡೆದ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಬೈಟೇಕ್ ನಲ್ಲಿ ಅಖಿಲ ಭಾರತ ಸಂತಸಮಿತಿಯ ಕರ್ನಾಟಕ ರಾಜ್ಯದ “ಸಂಘಟನಾ ಕಾರ್ಯದರ್ಶಿಯಾಗಿ” ಮಹೋನ್ನತ ಹುದ್ದೆಯನ್ನು ನೀಡಲಾಗಿದ್ದು, ತದ ನಂತರ ತನ್ನತವರೂರಿಗೆ ಆಗಮಿಸುವ ಸಂದರ್ಭ ಇವರು (29.06.2022)ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಬಜಪೆ ಇಲ್ಲಿಗೆ ಭೇಟಿ ನೀಡಿಶ್ರೀ ಗುರುದೇವರ ದರ್ಶನ ಪಡೆದರು ಹಾಗೂ ಸೇರಿರುವ ಎಲ್ಲಾ ಸದಸ್ಯ ಬಂಧುಗಳು ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿಅವರಿಂದ ಆಶೀರ್ವಾದ ಪಡೆದುಕೊಂಡರು.