ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ
.
ಅವರು ಕಾರ್ಕಳ ತಾಲೂಕು ದೊಂಡೇರಂಗಡಿ, ಕುಕ್ಕುಜೆ ಗ್ರಾಮದ ಅರ್ಪಿತ ನಿಲಯದ ಜಯ ಪೂಜಾರಿ ಹಾಗೂ ಉಡುಪಿ ತಾಲೂಕು ಕುತ್ಪಾಡಿ ಗ್ರಾಮದ ಅಂಜಗುಡ್ಡೆ, ಉದಯ ನಿವಾಸ್‌ನ ಶೋಭಾ ಪೂಜಾರಿ ದಂಪತಿಯವರ ಪುತ್ರಿಯಾಗಿದ್ದಾರೆ.
ನಿಶಾ ಪೂಜಾರಿ ಅವರ ಈ ಸಾಧನೆ ಕುಟುಂಬಸ್ಥರು, ಬಂಧುಗಳು ಹಾಗೂ ಊರಿನವರಿಗೆ ಹೆಮ್ಮೆಯ ವಿಷಯವಾಗಿದ್ದು, ಅವರ ಮುಂದಿನ ವೃತ್ತಿ ಜೀವನಕ್ಕೆ ಎಲ್ಲರಿಂದಲೂ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಾಶಯಗಳು

