TOP STORIES:

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ ಅವಿಭಜಿತ ಪುತ್ತೂರು ತಾಲೂಕು ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ-2025 ನ.23 ರಂದು ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಯಶಸ್ವಿ ಸಮಾಪನ ಕಂಡಿದೆ..

 

ಕ್ರಿಕೆಟ್-ಟೀಮ್ ಕೂಡಮರ (ವಿನ್ನರ್ಸ್), ಕಾವು ಫ್ರೆಂಡ್ಸ್(ರನ್ನರ್ಸ್):ಒಟ್ಟು 18 ತಂಡಗಳು ಭಾಗವಹಿಸಿದ ಓವರ್ ಆರ್ಮ್ ಟೂರ್ನಮೆಂಟ್ ನಲ್ಲಿ ಟೀಮ್ ಕೂಡಮರ ಹಾಗೂ ಫ್ರೆಂಡ್ಸ್ ಕಾವು ನಡುವೆ ನಡೆದ ಫೈನಲ್ ಕಾದಾಟದಲ್ಲಿ ಟೀಮ್ ಕೂಡಮರ ತಂಡವು ವಿನ್ನರ್ಸ್ ಆಗಿ, ಕಾವು ಫ್ರೆಂಡ್ಸ್ ತಂಡವು ರನ್ನರ್ಸ್ ಪ್ರಶಸ್ತಿ ಗಳಿಸಿತು. ಫೈನಲ್ ಪಂದ್ಯದ ಪಂದ್ಯಶ್ರೇಷ್ಟರಾಗಿ ಪ್ರಖ್ಯಾತ್ ಕೂಡಮರ, ಉತ್ತಮ ಕ್ಷೇತ್ರರಕ್ಷಕರಾಗಿ ಪ್ರಜ್ವಲ್ ಬೆಳ್ಳಿಪ್ಪಾಡಿ, ಉತ್ತಮ ಗೂಟ ರಕ್ಷಕರಾಗಿ ರಕ್ಷಿತ್ ಕೂಡಮರ, ಉತ್ತಮ ಬೌಲರ್ ಆಗಿ ಕೀರ್ತನ್ ಕಾವು, ಉತ್ತಮ ದಾಂಡಿಗರಾಗಿ ಕಿಶೋರ್ ಕಾವು, ಸರಣಿಶ್ರೇಷ್ಠರಾಗಿ ಯಶ್ ಕೂಡಮರರವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಸೆಮಿಫೈನಲ್ ಪ್ರವೇಶಿಸಿದ ಬೆಳ್ಳಿಪ್ಪಾಡಿ ಗ್ರಾಮ ಸಮಿತಿ ಹಾಗೂ ಬಜತ್ತೂರು ಬಿಲ್ಲವ ಫ್ರೆಂಡ್ಸ್ ತಂಡಕ್ಕೆ ನಗದು ಪುರಸ್ಕಾರ ನೀಡಲಾಯಿತು.

ವಾಲಿಬಾಲ್/ತ್ರೋಬಾಲ್/ಹಗ್ಗಜಗ್ಗಾಟ:

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಕೆಯ್ಯೂರು ಬಿಲ್ಲವ ವಾರಿಯರ್ಸ್ ಪ್ರಥಮ, ಎ.ಎಫ್.ಸಿ ಆನಮಜಲು ದ್ವಿತೀಯ, ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಬಂಡಾಡಿ ಬಿರ್ವೆರ್ ಪ್ರಥಮ, ಕೆಯ್ಯೂರು ಬಿಲ್ಲವ ವಾರಿಯರ್ಸ್ ದ್ವಿತೀಯ, ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಕೆಯ್ಯೂರು ಬಿಲ್ಲವ ವಾರಿಯರ್ಸ್ ಪ್ರಥಮ, ಪುತ್ತೂರು ನೆಮ್ಮದಿ ವೆಲ್ನೆಸ್ ಸೆಂಟರ್ ದ್ವಿತೀಯ, ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ನಿಡ್ಪಳ್ಳಿ ಕೋಟಿ ಚೆನ್ನಯ ಪ್ರಥಮ, ಕೆಯ್ಯೂರು ಬಿಲ್ಲವ ವಾರಿಯರ್ಸ್ ದ್ವಿತೀಯ ಸ್ಥಾನ ಗಳಿಸಿದರು.

 

ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ:ಎಲ್‌ಕೆಜಿ & ಯುಕೆಜಿ ಬಾಲಕಿಯರ ಓಟ ಸ್ಪರ್ಧೆಯಲ್ಲಿ ಅನ್ವಿಕಾ ಕೆ.ಎಸ್(ಪ್ರ), ನಿಶಿಕಾ(ದ್ವಿ), ಆತ್ಮಿ(ತೃ), ಬಾಲಕರ ವಿಭಾಗದಲ್ಲಿ ಜಯ ಆದಿತ್ಯ ಹಾಗೂ ಆರ್ಯನ್(ಪ್ರ), ರಿಯಾನ್ಶ್(ದ್ವಿ), ಒಂದರಿಂದ ಎರಡನೇ ತರಗತಿ ಬಾಲಕಿಯರ 50ಮೀ ಓಟ ಸ್ಪರ್ಧೆಯಲ್ಲಿ ರಿಶಿಕಾ(ಪ್ರ), ಲಾಸ್ಯ ಮತ್ತು ಅಂಚನ್(ದ್ವಿ), ಗಹನಾ(ತೃ), ಬಾಲಕರ ವಿಭಾಗದಲ್ಲಿ ಅರುಷ್(ಪ್ರ), ರುತ್ವಿಕ್(ದ್ವಿ), ಚಿರಾಗ್(ತೃ), ಮೂರರಿಂದ ಐದನೇ ತರಗತಿಯ ಬಾಲಕಿಯರ ವಿಭಾಗದಲ್ಲಿ ಅಹನ್ಯ(ಪ್ರ), ಯಶಸ್ವಿ(ದ್ವಿ), ಸಾನಿಧ್ಯ ಡಿ(ತೃ), ಬಾಲಕರ ವಿಭಾಗದಲ್ಲಿ ಅದಿತ್(ಪ್ರ), ವಿದಿತ್(ದ್ವಿ), ಚರಿತ್(ತೃ), ಆರರಿಂದ ಏಳರವರೆಗಿನ ಬಾಲಕರ ವಿಭಾಗದಲ್ಲಿ ಕೋಮಲ್(ಪ್ರ), ಕವನ್(ದ್ವಿ), ಗೋಕುಲ್(ತೃ), ಬಾಲಕಿಯರ ವಿಭಾಗದಲ್ಲಿ ಮಾನ್ವಿ(ಪ್ರ), ಸಾನ್ವಿ(ದ್ವಿ), ಆರಾಧ್ಯ(ತೃ), ಎಂಟರಿಂದ ಹತ್ತನೇ ತರಗತಿಯವರೆಗಿನ ಬಾಲಕರ ವಿಭಾಗದಲ್ಲಿ ತುಷಾನ್(ಪ್ರ), ರಘುವಿನ್(ದ್ವಿ), ಚಂದನ್(ತೃ), ಬಾಲಕಿಯರ ವಿಭಾಗದಲ್ಲಿ ಮಾನ್ವಿತಾ ಕೆ(ಪ್ರ), ಪುಣ್ಯಶ್ರೀ(ದ್ವಿ), ತನುಶಾ(ತೃ)ರವರು ಆಯ್ಕೆಯಾದರು.

 

ಅತಿಥಿಗಳ ಅನಿಸಿಕೆಗಳು: ಸಂಪ್ಯ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಜಯಂತ್ ನಡುಬೈಲು ಮಾತನಾಡಿ, ಅವಿಭಜಿತ ಪುತ್ತೂರು ಹಾಗೂ ಕಡಬ ತಾಲೂಕಿನ ಯುವಸಮೂಹವನ್ನು ಒಗ್ಗೂಡಿಸಿದ ಕೀರ್ತಿ ಯುವವಾಹಿನಿಗೆ ಸಲ್ಲುತ್ತದೆ. 34 ಘಟಕಗಳಲ್ಲಿ ಯುವವಾಹಿನಿ ಹೆಸರು ಗಳಿಸಿದ್ದು ನಾರಾಯಣ ಗುರುಗಳ ಧ್ಯೇಯವಾಕ್ಯವಾಗಿರುವ ವಿದ್ಯೆ,ಉದ್ಯೋಗ, ಸಂಪರ್ಕದಡಿಯಲ್ಲಿ ಸಾಗೋಣ ಎಂದರು. ದಂತ ವೈದ್ಯ ಹಾಗೂ ಶ್ರೀ ಗೆಜ್ಜೆಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್ ಕೆ.ಬಿ ಮಾತನಾಡಿ, ಯುವವಾಹಿನಿ ಅಧ್ಯಕ್ಷ ಅಣ್ಣಿ ಪೂಜಾರಿರವರ ನೇತೃತ್ವದಲ್ಲಿ ಯುವಸಮೂಹವನ್ನು ಒಗ್ಗೂಡಿಸಿ ಬಾಂಧವ್ಯದ ಬೆಸುಗೆ, ಸ್ನೇಹಕೂಟದ ಸಂಕೋಲೆಯನ್ನು ಪೋಣಿಸಿದೆ ಎಂದರು. ತಾಲೂಕು ಯುವಜನ ಸಬಲೀಕರಣ ಅಧಿಕಾರಿ ಶ್ರೀಕಾಂತ್ ಪೂಜಾರಿ ಬಿರಾವು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಯುವವಾಹಿನಿ ಸಂಘಟನೆಯು ತಾಲೂಕು ಮಟ್ಟದ ಕ್ರೀಡೆಯನ್ನು ಯಶಸ್ವಿಯಾಗಿ ಸಂಘಟಿಸಿದೆ. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಎಂದರು.

 

ಸಹಕರಿಸಿದವರಿಗೆ ಅಭಿನಂದನೆ: ಕ್ರೀಡಾಕೂಟದಲ್ಲಿ ಅಂಪೈರ್ಸ್ ಗಳಾಗಿ ಸಹಕರಿಸಿದ ಮೋನಪ್ಪ ಪಟ್ಟೆ, ಪ್ರವೀಣ್ ಕುಮಾರ್ ಕೂಡಮರ,ನವೀನ್,ಸಜ್ಜನ್ ಕುಮಾರ್,ವಾಣಿಶ್ರೀ ಇರ್ದೆ,ಲೋಕೇಶ್,ವಸಂತ ಪೂಜಾರಿ ಮಲಾರ್,ಶ್ರೀಕಾಂತ್ ಬಿರಾವು,ಜೀವನ್, ಅಭಿರಾಮ್ ಅಲ್ಲದೆ ಯುವವಾಹಿನಿ ಮಾಜಿ ಅಧ್ಯಕ್ಷರಾದ ಜಯರಾಮ್ ಬಿ.ಎನ್,ಉಮೇಶ್ ಬಾಯಾರು, ಅವಿನಾಶ್ ಹಾರಾಡಿ,ಪೂಜಾಶ್ರೀ,ದೀಕ್ಷಾ,ಲೋಹಿತ್ ಕಲ್ಕಾರ್,ಶಿವಪ್ರಸಾದ್ ಕುಂಬ್ರ,ದೀಕ್ಷಿತ್ ಇರ್ದೆ,ಕಿರಣ್ ಎಸ್.ಕೆ,ಭವಿನ್ ಕೂಡಮರ,ರಕ್ಷಾ, ಸಮಿತ್ ಪರ್ಪುಂಜ, ಮೋಹನ್ ಶಿಬಿರ,ವರ್ಷಿತ್,ಧನುಷ್ ಪಟ್ಟೆಮಜಲು, ಪುಣ್ಯ ಪಟ್ಟೆಮಜಲು,ಮನೀಶ್ ಬೆದ್ರಾಳ,ಯತೀಶ್, ಕಿರಣ್, ಹರ್ಷ ರವರುಗಳನ್ನು ಅಭಿನಂದಿಸಲಾಯಿತು.

 

ಈ ಸಂದರ್ಭದಲ್ಲಿ ಯುವವಾಹಿನಿ ಸಂಘಟನೆ ಏರ್ಪಡಿಸಿದ ಕೋಟಿ ಚೆನ್ನಯ ಕ್ರೀಡಾಕೂಟದ ಲಕ್ಕಿಡಿಪ್ ಡ್ರಾವನ್ನು ಪುಟಾಣಿ ಮಕ್ಕಳು ನೆರವೇರಿಸಿದರು. ಯುವವಾಹಿನಿ ಪುತ್ತೂರು ಘಟಕದ ಕ್ರೀಡಾ ನಿರ್ದೇಶಕ ಗೌತಮ್ ಪಿ, ಕಾರ್ಯದರ್ಶಿ ಶರತ್ ಸಾಲ್ಯಾನ್ ದೋಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ಜಯರಾಮ್ ಬಿ.ಎನ್ ವಿಜೇತರ ಪಟ್ಟಿ ವಾಚಿಸಿದರು. ಯುವವಾಹಿನಿ ಮಾಜಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಕಾರ್ಯಕ್ರಮ ನಿರೂಪಿಸಿದರು.

 

ಕ್ರೀಡಾಕೂಟವು ಯಶಸ್ವಿಯಾಗಿ ಸಮಾಪನ..

ಹಲವಾರು ವರ್ಷಗಳಿಂದ ಸಮಾಜ ಬಾಂಧವರ ಕ್ರೀಡಾಕೂಟವು ಸ್ಥಗಿತಗೊಂಡಿದ್ದು ಕಳೆದ ಎರಡು ವರ್ಷಗಳಿಂದ ಯುವವಾಹಿನಿ ಸಂಘಟನೆಯು ಬಹಳ ಯಶಸ್ವಿಯಾಗಿ ಸಂಘಟಿಸಿರುವುದಕ್ಕೆ ಬಿಲ್ಲವ ಸಂಘದ ಪದಾಧಿಕಾರಿಗಳು,ಯುವವಾಹಿನಿಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು,ಸದಸ್ಯರು,ಆಯಾ ಗ್ರಾಮ ಸಮಿತಿಯ ಸಹಕಾರ ಕಾರಣವಾಗಿದೆ. ಈ ಕ್ರೀಡಾಕೂಟದಲ್ಲಿ ಯುವಸಮೂಹ ಬಹಳ ಉತ್ಸಾಹದಿಂದ ಭಾಗವಹಿಸಿರುವುದು ಸಂತೋಷ ತಂದಿದೆ. ಕ್ರೀಡಾಕೂಟದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಎಲ್ಲವೂ ಸುಸೂತ್ರದಿಂದ ನಡೆದಿರುವುದು ಶ್ಲಾಘನೀಯ.

-ಅಣ್ಣಿ ಪೂಜಾರಿ,ಅಧ್ಯಕ್ಷರು,ಯುವವಾಹಿನಿ ಪುತ್ತೂರು ಘಟಕ.

 

ಸನ್ಮಾನ..ಕ್ರೀಡಾರಂಗದಲ್ಲಿ ಅದ್ವಿತೀಯ ಸಾಧನೆ ಮಾಡಿದ ರಾಷ್ಟ್ರೀಯ ಕ್ರೀಡಾಪಟು ಪ್ರಸ್ತುತ ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಮಣ್ಣ ಪೂಜಾರಿ ಹಾಗೂ ಲಲಿತಾ ದಂಪತಿ ಪುತ್ರಿ ಸೌಮ್ಯ ಎ.ಕಾಣಿಯೂರುರವರ ಅನುಪಸ್ಥಿತಿಯಲ್ಲಿ ಅವರ ತಂದೆ ರಾಮಣ್ಣ ಪೂಜಾರಿರವರನ್ನು ಗೌರವಿಸಲಾಯಿತು.


Related Posts

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »