TOP STORIES:

ಕೇರಳದ ಕಾಸರಗೋಡಿನ ಬಿರುವೆರ್ ಕುಡ್ಲ (ರಿ)ಮಂಜೇಶ್ವರ ತಾಲೂಕು ತಂಡದ ವತಿಯಿಂದ 6 ನೆಯ ಸೇವಾಯೋಜನೆ


ತುಳುನಾಡಿನ ಹಲವಾರು ಬಡಕುಟುಂಬಗಳ ಕಣ್ಣೀರೊರಸಿ ಅವರ ನೇರವಿಗೆ ಕಾರಣವಾದ ಬಲಿಷ್ಠ ಹಾಗೂ ಪ್ರಸಿದ್ದಿ ಪಡೆದ ಸಂಘಟನೆ ಫ್ರೆಂಡ್ಸ್ ಬಲ್ಲಾಳ್ಬಾಗ್  ಬಿರುವೆರ್ ಕುಡ್ಲ ಇದರ ಸ್ಥಾಪಕಾಧ್ಯಕ್ಷರಾದ  ಶ್ರೀಯುತ ಉದಯ ಪೂಜಾರಿಯವರ ವ್ಯಕ್ತಿತ್ವ, ಮನುಷ್ಯತ್ವ ಹಾಗೂ ಸಮಾಜಮುಖಿ ಕೆಲಸಗಳ ಪ್ರೇರಣೆಯಿಂದ ಬಿರುವೆರ್ ಕುಡ್ಲ ಸಂಘಟನೆಯ ಅನೇಕ ಶಾಖೆಗಳು ಈಗ ತುಳುನಾಡಿನಾದ್ಯಾಂತ ಕವಲೊಡೆದು ಅಶಕ್ತರಿಗೆ ನೇರವಾಗುತ್ತಾ ಬರುತ್ತಿವೆ. ಇಂತಹ ಶಾಖೆಗಳಲ್ಲಿ ಒಂದು ಕೇರಳದ ಕಾಸರಗೋಡಿನ ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ತಂಡ.

ಕನಿಷ್ಠ ಪ್ರಮಾಣದ ಉತ್ಸಾಹಿ ಸದಸ್ಯರನ್ನು ಒಳಗೊಂಡ ತಂಡ ಆರಂಭವಾಗಿ 10 ತಿಂಗಳುಗಳಾಗುತ್ತಾ ಬಂದಿದೆ. ಕಳೆದ 10 ತಿಂಗಳಿನಲ್ಲಿ ಸಮಾಜಮುಖಿ ಕೆಲಸಕಾರ್ಯಗಳಲ್ಲಿ 6 ಸೇವಾಯೋಜನೆಯನ್ನು ಮಾಡುವುದರ ಮೂಲಕ ಮುಂದಕ್ಕೆ ಹೆಜ್ಜೆ ಇಡುತ್ತಿದೆ.

ನಮ್ಮ ತಂಡದ 6 ನೆಯ ಸೇವಾಯೋಜನೆಯನ್ನು ಮೀಂಜ ಪಂಚಾಯತಿನ ಕಲ್ಲಗದ್ದೆ ಸುಂದರ ಪೂಜಾರಿಯವರಿಗೆ ನೀಡಲಾಯಿತು.ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಇವರು ಬೈಕಿನಿಂದ ಬಿದ್ದು ಬೆನ್ನೆಲುಬು ಮುರಿದು ಕೆಲಸಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾರೆ.ಇವರಿಗೆ 1 ಗಂಡು ಹಾಗೂ 10 ವರ್ಷ ಪ್ರಾಯದ ತ್ರಿವಳಿ ಹೆಣ್ಣುಮಕ್ಕಳಿದ್ದಾರೆ.ಇವರ ಮನೆಯ ಶೋಚನೀಯ ಅವಸ್ಥೆಯನ್ನು ಮನಗಂಡ ನಮ್ಮ ತಂಡ ರೂ.25000 /-ಮೊತ್ತವನ್ನು ಅವರಿಗೆ ನಿನ್ನೆ ಹಸ್ತಾಂತರಿಸಲಾಯಿತು*. ಸಂಘಟನೆಯ ಗೌರವಾಧ್ಯಕ್ಷರಾದ ಶೀನಪ್ಪ ಪೂಜಾರಿ ಅಲಾರು,ಕಾರ್ಯದರ್ಶಿ ಅನಿಲ್ ಪ್ರತಾಪ್ ನಗರ,ಸದಸ್ಯರಾದ ಐತಪ್ಪ ಪೂಜಾರಿ ಅರಿಯಾಲ ಮುಂತಾದ ಸದಸ್ಯರು ಭಾಗವಹಿಸಿದ್ದರು.


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »