TOP STORIES:

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ

ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ ಭಾರತದ ನಾಗಾಸಾದು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯನ್ನು ಜುನಾ ಅಖಾಡದ ಮೂಲಕ ಪಟ್ಟಾಭಿಷೇಕ ನೆರವೇರಿತು.

ಧಾರ್ಮಿಕ ಕ್ಷೇತ್ರ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಮಹಾಪುರುಷರಿಗೆ ಈ ಪದವಿಯನ್ನು ಪ್ರದಾನ ಮಾಡುವುದು ಅಖಾಡದ ವಾಡಿಕೆಯಾಗಿದೆ. ಈ ಪದವಿಗೆ ಅರ್ಹರಾದವರು ಸ್ವತಂತ್ರ್ಯ ಪೀಠಾಧೀಶರಾಗಿರಬೇಕಾಗಿದೆ. ಪಟ್ಟಾಭಿಷೇಕಕ್ಕೂ ಮುನ್ನ ಅಖಾಡದಲ್ಲಿರುವ ಕ್ಯಾಬಿನೇಟ್ ಸದಸ್ಯರು ಸ್ವಾಮೀಜಿವರ ಆಧ್ಯಾತ್ಮಿಕ ಸತ್ಸಂಗವನ್ನು ಪರಿಶೀಲಿಸಿ ಬೈಟಕ್ ನಲ್ಲಿ ಚರ್ಚೆ ನಡೆಸಿ ಗೌರವ ಪ್ರದಾನ ಮಾಡುವುದಾಗಿದೆ. ಶ್ರೀಗಳು ಮುಂದೆ ರಾಷ್ಟ್ರಾದ್ಯಂತ ಧರ್ಮ ಪ್ರಚಾರದ ಜತೆಗೆ ಆಧ್ಯಾತ್ಮದ ಉನ್ನತ ಸಾಧನೆಗಾಗಿ ಧಾರ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಅರ್ಹತೆಯುಳ್ಳವರಾಗಿದ್ದಾರೆಂದು ಪರಿಗಣಿಸಿ ನಾಗಾ ಸಾದು ಸನ್ಯಾಸಿ ಪರಂಪರೆಯಲ್ಲಿ ಜುನಾ ಅಖಾಡ ಈ ಜವಾಬ್ದಾರಿಯನ್ನು ನೀಡಿದೆ.

ಕರ್ನಾಟದಲ್ಲಿ ಇದೇ ಮೊದಲು:

ದಕ್ಷಿಣ ಭಾರತದಲ್ಲಿ ಮಹಾಮಂಡಲೇಶ್ವರ ಪಟ್ಟ ನೀಡಿದ್ದು ವಿರಳ. ಸ್ವಾಮೀಜಿಗಳ ಪೈಕಿ ಕನ್ಯಾಡಿ ಶ್ರೀರಾಮಕ್ಷೇತ್ರದ ಸದ್ಗರು ಶ್ರೀಗಳ ಮೂಲಕ ಕರ್ನಾಟಕಕ್ಕೆ ಬರುವ ಪ್ರಪ್ರಥಮ ಮಹಾಮಂಡಲೇಶ್ವರ ಪದವಿಯಾಗಿದೆ. ಈ ಪಟ್ಟಾಭಿಷೇಕರಾದವರಿಗೆ ಧಾರ್ಮಿಕ ಪುರುಷನಿಗೆ ರಾಷ್ಟ್ರಾದ್ಯಂತ ವಿಶೇಷ ಸೌಲಭ್ಯ ನೀಡಲಾಗುತ್ತದೆ. ವಾರಣಾಸಿಯ ಪಂಚದಶನಾಮ್ ಜುನಾ ಅಖಾಡದಲ್ಲಿರುವ ಸಾಧು ಸಮಾಜದ ಮಹಾಮಂಡಲೇಶ್ವರ ಆಚಾರ್ಯರಾದ ಅವದೇಶಾನಂದ ಗಿರಿ ಮಹಾರಾಜರು ಈ ಪುಣ್ಯ ಕಾರ್ಯದ ಪಟ್ಟಾಭಿಷೇಕವನ್ನು ಶುಕ್ರವಾರ ಮಹಾಕುಂಭಮೇಳದಲ್ಲಿ ನಿರ್ವಹಿಸಿದರು.

ಜ.31 ರಂದು ಪ್ರಯಾಗ್ ರಾಜ್ ಮಹಾ ಕುಂಬಮೇಳದಲ್ಲಿ ಮಹಾಮಂಡಲೇಶ್ವರರಾಗಿ ಕುಂಬಮೇಳ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಜುನಾ ಅಖಾಡದ ಅಧ್ಯಕ್ಷರಾದ ಹರಿಗಿರಿ ಮಹಾರಾಜ್, ಜುನಾ ಅಖಾಡ ಉಪಾಧ್ಯಕ್ಷರಾದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಜುನಾ ಅಖಾಡದ ಉತ್ತಾರಾಖಂಡ ಮಹಾಮಂತ್ರಿ ದೇವಾನಂದ ಮಹಾರಾಜ್, ಕೋಶಾಧಿಕಾರಿ ದೀರಜ್ ಗಿರಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಟ್ರಸ್ಟಿ ತುಕಾರಾಮ್ ಸಾಲ್ಯಾನ್, ಕೃಷ್ಣಪ್ಪ ಗುಡಿಗಾ‌ರ್, ರವೀಂದ್ರ ಪೂಜಾರಿ ಆರ್ಲ, ಹರ್ಷಿತ್ ಉಪಸ್ಥಿತರಿದ್ದರು.

ಶ್ರೀಗಳು ಕನ್ಯಾಡಿಗೆ ಫೆ.2 ರಂದು ಆಗಮಿಸಲಿದ್ದು, ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರಿಂದ ಅಭಿನಂದನಾ ಸಮಾರಂಭನಡೆಯಲಿದೆ.

9 ಕಡೆ ಶಾಖಾ ಮಠದ ಮಹದಾಸೆ:

ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಬಳಿಕ ಪೀಠಾಧೀಶರಾದವರು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರು. ಬಳಿಕ ಜಗದ್ಗುರುಗಳಾಗಿ ಉಡುಪಿ, ಭಟ್ಕಳ ಅಶ್ರಕೇರಿ ನಿಶ್ಚಳ ಮಕ್ಕಿ, ಭಟ್ಕಳದ ಕರಿಕಲ್ ಸಮುದ್ರ ಕಿನಾರೆ ರಾಮಮಂದಿರ ಸಹಿತ ಹರಿದ್ವಾರ ಗಂಗಾ ಕಿನಾರೆಯಲ್ಲಿ ಶಾಖಾ ಮಠ ಸ್ಥಾಪಿಸಿದ್ದಾರೆ. ಪ್ರಸ್ತುತ ಅಯೋಧ್ಯೆಯಲ್ಲಿ ಶಾಖಾ ಮಠ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು,

ಕೇರಳ, ತಿರುಪತಿ, ಶಿವಮೊಗ್ಗ ದಲ್ಲಿ ಶಾಖಾ ಮಠ ನಿರ್ಮಿಸಲು ಜಾಗ ನಿಗದಿಯಾಗಿದೆ. ಈ ಮೂಲಕ ಭಾರತದಲ್ಲಿ ಒಟ್ಟು 9 ಕಡೆ ಶಾಖಾ ಮಠ ನಿರ್ಮಿಸಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಉತ್ತೇಜಿಸುತ್ತಿದ್ದಾರೆ. 2018 ರಲ್ಲಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕನ್ಯಾಡಿಗೆ ರಾಷ್ಟ್ರದಾದ್ಯಂತ ಸಾದುಸಂತರನ್ನು ಕರೆಸಿ ಧರ್ಮ ಸಂಸತ್ ನಡೆಸಿದ್ದರು.

ಹೇಳಿಕೆ

ಮಹಾಕುಂಭ ಎಂಬುದು ವಿಶ್ವಕ್ಕೆ ಧಾರ್ಮಿಕ ಪ್ರಜ್ಞೆಯ ದಿಕ್ಕೂಚಿಯಾಗಿತ್ತು. ಐದು ವರ್ಷದ ಮಕ್ಕಳಿಂದ ಹಿಡಿದು 120 ವರ್ಷದ ಮುದುಕರ ವರೆಗೆ ತ್ರಿವೇಣಿ ಸಂಗಮದಲ್ಲಿ ಮುಳುಗಿ ಪಾವನರಾಗಿದ್ದಾರೆ. 12 ವರ್ಷಕ್ಕೊಮ್ಮೆ ನಡೆಯುವ ಕುಂಬ ಮೇಳದಲ್ಲಿ ಅಮೃತ ಉತ್ಪತಿಯಾಗುತ್ತದೆ ಎಂಬ ಪ್ರತೀತಿ. ಅದರಲ್ಲೂ 144 ವರ್ಷಕ್ಕೊಮ್ಮೆ ಬರುವ ಈ ಮಹಾಕುಂಭದಲ್ಲಿ ಹಿಮಾಲಯದ ದೊಡ್ಡ ದೊಡ್ಡ ಸಾಧಕರು ಬಂದು ಆ ನದಿಯ ಪವಿತ್ರತೆಯನ್ನು ಹೆಚ್ಚಿಸುತ್ತಾರೆ. ನಮ್ಮನ್ನ ರಥದ ಮೂಲಕ ಕರೆದೊಯ್ದು ಪುಣ್ಯ ಸ್ನಾನ ಮಾಡಿಸಿದ್ದಾರೆ.


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »