ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಸಂಘದ ನೂತನ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶರತ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 26.02.2025 ರಂದು ಕತಾರ್ ನ ಐ. ಸಿ. ಸಿ. ಮುಂಬೈ ಹಾಲ್ ನಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಲಾಯಿತು.
ಪಾವನ ಕ್ಷೇತ್ರವಾಗಿರುವ ಗೆಜ್ಜೆಗಿರಿ ಭಕ್ತರ ಪಾಲಿನ ಕಾಮಧೇನು ಆಗಿ ಕಂಗೊಳಿಸುತ್ತಿದೆ.
ದೇಯಿ ಬೈದೆತಿ, ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಮಾಜದ ಸಂಘಟನಾತ್ಮಕ ಅಭಿವೃದ್ಧಿ ಪರ ಕಾರ್ಯ ಯೋಜನೆಗಳು ಯಶಸ್ವಿಯಾಗಿ ನಡೆಯಲೆಂದು ಶ್ರೀಮತಿ ಅಪರ್ಣ ಶರತ್ ಹಾರೈಸಿದರು. ಬಿಲ್ಲವಾಸ್ ಕತಾರ್, ಶ್ರೀ ಕ್ಷೇತ್ರದ ಎಲ್ಲಾ ಅಭಿವೃದ್ಧಿಗಳಿಗೆ ಕೈ ಜೋಡಿಸಿದ್ದು ಇನ್ನು ಮುಂದೆಯೂ ಸಹಕರಿಸಲಿದೆಯೆಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಲ್ಲವಾಸ್ ಕತಾರ್ ನ ಮಾಜಿ ಅಧ್ಯಕ್ಷರುಗಳಾದ ಶ್ರೀ ರಘು ನಾಥ್ ಅಂಚನ್ ಮತ್ತು ಸಂದೀಪ್ ಸಾಲಿಯಾನ್, ಸಲಹಾ ಸಮಿತಿ, ಕಾರ್ಯಕಾರಿ ಸಮಿತಿ ಮತ್ತು ಸದಸ್ಯರು ಉಪಸ್ಥಿತರಿದ್ದರು..