ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ ಕೊರಗಜ್ಜ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾಗಿ ಇವರು ಕಾರ್ಯನಿರ್ವಹಿಸುತ್ತಿದ್ದು, ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್, ಯುವವಾಹಿನಿ ಮುಂತಾದ ಸಮಾಜ ಮುಖಿ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತಾರೆ.
ಇವರು ಶ್ರೀ ನಾರಾಯಣ ಗುರು,ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶ್ರೀ ಶುಭಾನಂದ ಗುರು, ಶ್ರೀ ರಮಣ ಮಹರ್ಷಿ ಮುಂತಾದ ಸಂತ ಪರಂಪರೆಯ ಸದ್ಗುರುಗಳ ಆಧ್ಯಾತ್ಮಿಕತೆ ಹಾಗೂ ಧಾರ್ಮಿಕ ವಿಚಾರಗಳ ತತ್ವ ಪ್ರಚಾರವನ್ನು ತನ್ನ ಬರವಣಿಗೆಗಳ ಮೂಲಕ ತಿಳಿಸಿಕೊಡುವುದರ ಜೊತೆ ಧಾರ್ಮಿಕತೆಯು ನಮ್ಮಅಂತರಂಗವನ್ನು ಬೆಳಗುವಡೆಗೆ ಕೊಂಡೊಯ್ಯುವ ಸಾಧನವಾಗಿರ ಬೇಕು ಎಂಬ ಅರಿವಿನ ಮೂಲಕ ಕೆಲಸ ಮಾಡುತ್ತಿದ್ದಾರೆ.