ನವದೆಹಲಿ : ಕರೋನಾ ಸಾಂಕ್ರಾಮಣದ (Coronavirus) ಮಧ್ಯೆ, ಕಾರ್ಮಿಕ ಸಚಿವಾಲಯವು ಇಪಿಎಫ್‌ಒ (EPFO) ಖಾತೆದಾರರಿಗೆ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದೆ. ಡೆತ್ ಇನ್ಸೂರೆನ್ಸ್ ಬೆನೆಫಿಟ್ ಮೊತ್ತವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇದರ ಲಾಭ ಇಪಿಎಫ್‌ಒನ ಕನಿಷ್ಠ 5 ಕೋಟಿ ಚಂದಾದಾರರಿಗೆ ಸಿಗಲಿದೆ. ಈಗ, ಖಾತೆದಾರರ ಸಾವಿನ ನಂತರ, ಸಿಗುವ ಕನಿಷ್ಟ ಮೊತ್ತವನ್ನು 2.5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಮತ್ತು ಗರಿಷ್ಠ ಮೊತ್ತವನ್ನು 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಈ ಹಿಂದೆ ಈ ಮೊತ್ತ 2 ಲಕ್ಷ ರೂಪಾಯಿ ಮತ್ತು 6 ಲಕ್ಷ ರೂಪಾಯಿಗಳವರೆಗಿತ್ತು.
ಕಾರ್ಮಿಕ ಸಚಿವಾಲಯದ ಈ ಆದೇಶವು ಎಂಪ್ಲಾಯಿ ಡೆಪಾಸಿಟ್ ಲಿಂಕ್ಡ್ ಇನ್ಶುರೆನ್ಸ್ (EDLI) ಗೆ ಸಂಬಂಧಿಸಿದೆ. ಒಂದು ವೇಳೆ ಇಪಿಎಫ್ (EPF) ಖಾತೆದಾರರು ಮೃತಪಟ್ಟರೆ , ಅವರ ಕುಟುಂಬಕ್ಕೆ ಈ ವಿಮೆಯ (Insurance) ಲಾಭ ಸಿಗಲಿದೆ. ಅಂದ ಹಾಗೆ EDLI (Employees Deposit Linked Insurance Scheme) ಫಲಾನುಭವಿಗಳ ಸಂಖ್ಯೆ ಇಪಿಎಫ್ ಚಂದಾದಾರರಿಗೆ ಸಮನಾಗಿರುವುದಿಲ್ಲ. ಇಡಿಎಲ್ಐ ಅಡಿಯಲ್ಲಿ ಕೇವಲ 2 ಮಿಲಿಯನ್ ಚಂದಾದಾರರು ಮಾತ್ರ ಇದ್ದಾರೆ.
ಪ್ರತಿ ಇಡಿಎಲ್ಐ ಚಂದಾದಾರರು ಇಪಿಎಫ್ (EPF) ಚಂದಾದಾರರಾಗಿರುತ್ತಾರೆ. ಆದರೆ ಪ್ರತಿ ಇಪಿಎಫ್ ಚಂದಾದಾರರು ಇಡಿಎಲ್ಐ ಚಂದಾದಾರರಾಗಿರುವುದಿಲ್ಲ. ಆದ್ದರಿಂದ ಎರಡು ಸಂಖ್ಯೆಗಳ ನಡುವೆ ದೊಡ್ಡ ವ್ಯತ್ಯಾಸವಿದೆ.