ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ನೂತನ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಇವರ ನೇತೃತ್ವದ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಜರಗಿತು.
ನೂತನ ಪಧಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಆಡಳಿತ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರೂ ಹಾಗೂ ನೂತನ ಆಡಳಿತ ಸಮಿತಿಯ ಗೌರವಾಧ್ಯಕ್ಷ ರಾದ ಪೀತಾಂಬರ ಹೆರಾಜೆಯವರು ತಮ್ಮ ಅವಧಿಯಲ್ಲಿ ಕ್ಷೇತ್ರಾಡಳಿತ ಸಮಿತಿಯು ಸತ್ಯ ನ್ಯಾಯ ಪ್ರಾಮಾಣಿಕತೆಯ ಮೂಲಕ ಸಮಾಜದ ಗೌರವಕ್ಕೆ ಯಾವುದೇ ಚ್ಯುತಿ ಬಾರದ ಹಾಗೆ ಕಾರ್ಯ ನಿರ್ವಹಿಸಿದ ಸಂತೃಪ್ತಿ ಹಾಗೂ ಮಿತ ವ್ಯಯದ ಮೂಲಕ ಆಡಳಿತ ನಡೆಸಿದ್ದೇವೆ ಎಂದರು ಈಗ ನೂತನ ವಾಗಿ ಆಯ್ಕೆ ಆದ ಪಧಾಧಿಕಾರಿಗಳು ಕೂಡ ನಮ್ಮ ತಂಡದಲ್ಲಿ ಇದ್ದು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆ ಯಾದ ರವಿ ಪೂಜಾರಿ ಚಿಲಿಂಬಿಯವರು ಗೆಜ್ಜೆಗಿರಿಯು ಜನ ಸಮುದಾಯದಲ್ಲಿ ಮೂಡಿಸಿದ ಭಕ್ತಿ ಭಾವ ಸಾಮಾಜಿಕ ಜಾಗೃತಿ ಮೂಲಕ ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿ ಜನರಲ್ಲಿ ಧಾರ್ಮಿಕತೆಯ ಜೊತೆ ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಜೊತೆಯಾಗಿ ಸೇರಿ ಶ್ರಮ ವಹಿಸಿ ಸೇವಾ ಮನೋಭಾವದ ಮೂಲಕ ಕೆಲಸ ಮಾಡುವ ಎಂದರು.
ನಿಕಟಪೂರ್ವ ಅಧ್ಯಕ್ಷರಾದ ಪೀತಾಂಬರ ಹೆರಾಜೆ ನೂತನ ಅಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ ಯವರಿಗೆ ದಾಖಲೆ ಪುಸ್ತಕಗಳನ್ನು ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಂ, ಉಪಾಧ್ಯಕ್ಷರುಗಳಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ವಾಮಂಜೂರು, ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್, ಯಶವಂತ್ ದೇರಾಜೆ, ರಾಜೇಂದ್ರ ಚಿಲಿಂಬಿ, ಜಯವಿಕ್ರಂ ಕಲ್ಲಾಪು, ನಾರಾಯಣ ಮಚ್ಚಿನ, ಡಾ. ಸಂತೋಷ್ ಕುಮಾರ್ ಉಡುಪಿ, ರವೀಂದ್ರ ಬಂಗೇರ ಗ್ರಾಮ ಚಾವಡಿ,ಜಯರಾಂ ಬಂಗೇರ ಬೆಳ್ತಂಗಡಿ, ಮುಂತಾದವರು ಉಪಸ್ಥಿತರಿದ್ದರು.