ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಜನ ಸಾಮಾನ್ಯರನ್ನ ಬೆಚ್ಚಿ ಬೀಳಿಸಿದೆ. ಅಗತ್ಯ ವಸ್ತುಗಳ ಬೆಲೆಯೊಂದಿಗೆ ಪೆಟ್ರೋಲ್, ಡೀಸೆಲ್ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಜೊತೆಗೆ ಅಡುಗೆ ಅನಿಲದ ಬೆಲೆಯೂ ಏರಿಕೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಬೆಲೆ ಸಾರ್ವಕಾಲಿಕ ಗರಿಷ್ಠ 900 ರೂ.ಗೆ ಏರಿಕೆಯಾಗಿದೆ. ಅದ್ರಂತೆ, ದಿನ ಬಳಕೆಯ ವಸ್ತುಗಳ ಜತೆಗೆ 900 ರೂ.ಗೆ ಗ್ಯಾಸ್ ಸಿಲಿಂಡರ್ ಖರೀದಿಸುವುದು ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಇನ್ನು ಕೆಲ ದಿನಗಳಿಂದ ಸರ್ಕಾರ ನೀಡುವ ಗ್ಯಾಸ್ ಸಬ್ಸಿಡಿ ಬಾರದೇ ಇದ್ದದ್ದು, ಮತ್ತಷ್ಟು ಹೊರೆಯಾಗಿತ್ತು. ಆದ್ರೆ, ಈಗ ನೀವು ಸಬ್ಸಿಡಿ ಬಗ್ಗೆ ಚಿಂತಿಸಬೇಕಾಗಿಲ್ಲ. ಯಾಕಂದ್ರೆ, ಕೇಂದ್ರ ಸರ್ಕಾರ ಗ್ಯಾಸ್ ಸಬ್ಸಿಡಿ ಪುನಶ್ಚೇತನಕ್ಕೆ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಹಣಕಾಸು ಸಚಿವಾಲಯದಿಂದಲೂ ಪ್ರಸ್ತಾವನೆಗಳು ಬಂದಿವೆ. ಅದ್ರಂತೆ, ಪ್ರಸ್ತುತ ಪರಿಗಣನೆಯಲ್ಲಿರುವ ಮಾಹಿತಿ ಪ್ರಕಾರ, ಸಧ್ಯ ಪ್ರಸ್ತುತ ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ದೇಶೀಯ ಅನಿಲಕ್ಕೆ ಸಬ್ಸಿಡಿ ನೀಡಲಾಗುತ್ತದೆ ಜೊತೆಗೆ ಇಡೀ ದೇಶಕ್ಕೆ ಗ್ಯಾಸ್ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು (OMC) ಕೇಂದ್ರ ಸರ್ಕಾರದ ನಿರ್ದೇಶನದಂತೆ ಗ್ಯಾಸ್ ಡೀಲರ್‌ಗಳಿಗೆ 303 ರೂ ಸಬ್ಸಿಡಿ ನೀಡುತ್ತವೆ. ಇದರೊಂದಿಗೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 303 ರೂ.ಗಳ ರಿಯಾಯಿತಿ ನೀಡಲಿವೆ.ಈ ಮೂಲಕ ಈಗ 900 ರೂಪಾಯಿಯ ಗ್ಯಾಸ್ ಸಿಲಿಂಡರ್‌ಗೆ 587 ರೂಪಾಯಿಗೆ ಲಭ್ಯವಿರುತ್ತದೆ.
ಇನ್ನು ನೀವು ಕೂಡ ಗ್ಯಾಸ್ ಸಬ್ಸಿಡಿ ಪಡೆಯಲು ಇಚ್ಚಿಸಿದ್ರೆ, ನಿಮ್ಮ ಗ್ಯಾಸ್ ಸಂಪರ್ಕದೊಂದಿಗೆ ನಿಮ್ಮ ಆಧಾರ್ ಸಂಖ್ಯೆಯನ್ನ ಲಿಂಕ್ ಮಾಡಿ. ಆಧಾರ್ ಲಿಂಕ್ ಮಾಡಿದ ನಂತ್ರ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಬ್ಸಿಡಿ ಮೊತ್ತವನ್ನ ನೀವು ಪಡೆಯುತ್ತೀರಿ. ಇದರೊಂದಿಗೆ ನಗದು ಠೇವಣಿ ಮಾಹಿತಿಯ ಬಗ್ಗೆ ನಿಮ್ಗೆ ಸಂದೇಶವೂ ಬರುತ್ತದೆ.