ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ ಗಣ್ಯರ ಸಮ್ಮುಖದಲ್ಲಿ ಅವರ ಸಮಾಜ ಸೇವೆ ಹಾಗು ಬಿಲ್ಲವ ಸಮುದಾಯಕ್ಕೆ ಎಲ್ಲಾ ಕ್ಷೇತ್ರ ಗಳಲ್ಲಿ ನೀಡುತ್ತಿರುವ ಅಪಾರ ವಿಶೇಷ ಸೇವೆ ಮತ್ತು ಕೊಡುಗೆಯನ್ನು ಪರಿಗಣಿಸಿ “ ಬಿಲ್ಲವ ಸಂಜೀವಿನಿ “ ಬಿರುದು ಪ್ರದಾನ ಮಾಡಿ ಗೌರವಿಸಿದರು.
ಸೌದಿ ಅರೇಬಿಯಾದ ದಮ್ಮಮ್ ನಲ್ಲಿ 24*7 ಲಭ್ಯವಾಗುವ ಆಶಕ್ತರ ಪಾಲಿಗೆ ಆಸರೆಯಾಗುವ ಏಕೈಕ ವ್ಯಕ್ತಿ -ಸದಾ ಸಮಾಜ ಸೇವೆಗೆ ತನ್ನನ್ನು ತಾನು ತೊಡಗಿಸಿಕೊಂಡಿರುವವರು. ಹಾಗೂ ಸೌದಿ ಅರೇಭಿಯಾದಲ್ಲಿರುವ ಪ್ರಸಿದ್ದ ಗಾರ್ನಿಶ್ ರೆಸ್ಟೋರೆಂಟ್ ನ ಮಾಲಕರು. ಹಲವು ಸೇವಾ ಸಂಘ ಸಂಸ್ಥೆಗಳ ಮಾರ್ಗದರ್ಶಕರು.