ದಮ್ಮಾಮ್: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 5 ರವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೌದಿ ಬಿಲ್ಲವಾಸ್ ದಮ್ಮಾಮ್ ವತಿಯಿಂದ ಸೌದಿಯ ದಮ್ಮಾಮ್ ನಲ್ಲಿ ಅಲ್ಲಿಯ ಬಿಲ್ಲವ ನಾಯಕರು ಸೇರಿ ಗಾರ್ನಿಸ್ ಹೋಟೆಲ್ ನಲ್ಲಿ ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಗೆಜ್ಜೆಗಿರಿ ಸೇವಾ ಸಮಿತಿ ಸೌದಿ ಅರೇಬಿಯಾದ ಸಂಚಾಲಕರಾದ ಸತೀಶ್ ಕುಮಾರ್ ಬಜಾಲ್ ಈ ಕ್ಷೇತ್ರ ದ ಮಹತ್ವವನ್ನು ತಿಳಿಸಿ , ದಮ್ಮಾಮ್ ಬಿಲ್ಲವಾಸ್ ಎಂದಿಗೂ ಕ್ಷೇತ್ರದ ಅಭಿವೃದ್ದಿ ಗೆ ಕೈಗೂಡಿಸುತ್ತದೆ. ಹಾಗೂ ಬಿಲ್ಲವ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಎಂದು ತಿಳಿಸಿದರು.
ಸದಾಶಿವ ಪೂಜಾರಿ , ವಿಶ್ವನಾಥ ಸುವರ್ಣ , ರೋಶನ್ ಕೋಟ್ಯಾನ್, ಆನಂದ ಪೂಜಾರಿ, ಹರೀಶ್ ಪೂಜಾರಿ, ಅರುಣ್ ಬಂಗೇರ ಮುಂತಾದವರು ಉಪಸ್ಥಿತರಿದ್ದರು.