ದಮ್ಮಾಮ್: ಶ್ರೀ ನಾರಾಯಣ ಗುರು ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ದಮ್ಮಾಮ್ ಬಿಲ್ಲವಾಸ್ ಸೌದಿ ಅರೇಬಿಯ ಸಂಘವನ್ನು ಮುನ್ನಡೆಸಬೇಕೆಂದು ಹಾಗು ಸಮಾಜದಲ್ಲಿರುವ ಶೋಷಿತರ , ಅಸಹಾಯಕರ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಾಗು ವೈಧ್ಯಕೀಯ ನೆರವು ನೀಡುವುದಲ್ಲದೆ ಬಿಲ್ಲವ ಸಮಾಜದ ವತಿಯಿಂದ ವೈಧ್ಯಕೀಯ ಕಾಲೇಜಿನ ಅಗತ್ಯತೆಯನ್ನು ಅಲ್ಲಿ ನೆರೆದವರೆಲ್ಲರಿಗೆ ಮನವರಿಕೆ ಮಾಡಿದಲ್ಲದೆ ಶೀಘ್ರವೇ ಅದರ ಬಗ್ಗೆ ಕಾರ್ಯಪ್ರವರ್ತರಾಗಲು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಮಂಡಳಿಗೆ ವೈಧ್ಯಕೀಯ ಸಂಸ್ಥೆ ಯ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಬೇಕೆಂದು ಮನವಿ ನೀಡಿ ಒತ್ತಾಯಿಸಲಾಗುವುದು ಇದಕ್ಕೆ ಶಕ್ತಿ ಮೀರಿ ಆರ್ಥಿಕ ಸಹಾಯಕ್ಕೆ ದೇಶ ವಿದೇಶದಲ್ಲಿರುವ ಎಲ್ಲಾ ಬಿಲ್ಲವ ಸಂಘಗಳು ಶ್ರಮ ಪಡಬೇಕು ಎಂದು ಸಂಘದ ಪ್ರಮುಖ ನಾಯಕರು ಹಾಗು ಸಮಾಜ ಸೇವಕರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ಮಹಾಸಭೆಯಲ್ಲಿ ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಪೂಜಾರಿ ಮಾತನಾಡುತ್ತ ನಾರಾಯಣ ಗುರುಗಳ ಪ್ರೇರಣೆಯಂತೆ ನಾವು ಮತ್ತು ಎಲ್ಲಾ ಬಿಲ್ಲವ ಸಂಘಗಳು ಸಮಾಜದ ಏಳಿಗೆಗೆ ಶ್ರಮಿಸೋಣ ವಿದ್ಯೆಗೆ ಹೆಚ್ಚು ಪ್ರೋತ್ಸಹ ನೀಡುವುದರೊಂದಿಗೆ ಸಮಾಜದ ನಮ್ಮ ಯುವಕರು ವಿದ್ಯೆ ಯಿಂದ ವಂಚಿತರಾಗದಂತೆ ಹಾಗು ಆರೋಗ್ಯದ ಬಗ್ಗೆ, ಹೆಚ್ಚು ಗಮನಹರಿಸುವ ಬಗ್ಗೆ ಜಾಗ್ರತಿ ಮೂಡಿಸುವ ಕಾರ್ಯ ಆಗಬೇಕು ಎಂದರಲ್ಲದೆ , ವೈಧ್ಯಕೀಯ ಸಂಸ್ಥೆ ಯ ನಿರ್ಮಾಣಕ್ಕೆ ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿದ್ದ ಸುಂದರ್ ದಾಸ್ ಪೂಜಾರಿ, ವಿಶ್ವನಾಥ್ ಪೂಜಾರಿ ಯವರು ಸಂದರ್ಭೋಚಿತವಾಗಿ ಮಾತನಾಡಿದರು , ಹಾಗು ಯಕ್ಷಗಾನ ಭಾಗವತರಾದ ರೋಶನ್ ಕೋಟ್ಯಾನ್ ಮತ್ತು ಹಿರಿಯರಾದ ಆನಂದ ಪೂಜಾರಿ ಮಾರ್ಗದರ್ಶನ ನೀಡಿದರು.
ಹರೀಶ್ ಪೂಜಾರಿ, ಅರುಣ್ ಬಂಗೇರ, ಮನೋಹರ ಅಮಿನ್ , ಬಿಲ್ಲವ ವಾರಿಯರ್ಸ್ ನ್ಯೂಸ್ ತಂಡ ಹಾಗೂ ಮುಂತಾದವರ ಉಪಸ್ಥಿತಿಯಲ್ಲಿ 2025 – 26 ಸಾಲಿನ ನೂತನ ಸಮಿತಿ ರಚನೆ ಮಾಡಲಾಯಿತು.
ಯಶವಂತ್ ಸನಿಲ್ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ರೋಶನ್ ಕೋಟ್ಯಾನ್ ಸ್ವಾಗತಿಸಿ ಕೊನೆಯಲ್ಲಿ ಹರೀಶ್ ಪೂಜಾರಿ ವಂದಿಸಿದರು.
ಸೌದಿ ಬಿಲ್ಲವಾಸ್ ದಮ್ಮಾಮ್ ಸೌದಿ ಅರೇಬಿಯಾ.
ಗೌರವ ಸಲಹೆಗಾರರು:
ಶ್ರೀ ಶಂಕರ್ ಬಿಲ್ಲವ, ಸುದರ್ಶನ್ ಡಿ ಸನಿಲ್, ಶೇಖರ್ ಕೋಟ್ಯಾನ್, ಆನಂದ್ ಪೂಜಾರಿ, ಉಮೇಶ್ ಬಂಗೇರ, ಜಯ ಸುವರ್ಣ
ಗೌರವಾಧ್ಯಕ್ಷರು
ಶ್ರೀ ಸದಾಶಿವ ಪೂಜಾರಿ ಮತ್ತು ಯೋಗಿಶ್ ಡಿ ಪೂಜಾರಿ
ಅಧ್ಯಕ್ಷರು
ಶ್ರೀ. ಸತೀಶ್ ಕೆ ಅಂಚನ್ ಬಜಾಲ್
ಉಪಾಧ್ಯಕ್ಷರು
ಶ್ರೀ ವಿಶ್ವನಾಥ ಪೂಜಾರಿ ಮತ್ತು
ಶ್ರೀ ಸುಂದರ್ ದಾಸ್ ಪೂಜಾರಿ
ಪ್ರಧಾನ ಕಾರ್ಯದರ್ಶಿ
ಶ್ರೀ. ರೋಶನ್ ಕೋಟ್ಯಾನ್
ಜೊತೆ ಕಾರ್ಯದರ್ಶಿಗಳು
ಶ್ರೀ. ರಾಜೇಶ್ ತೋನ್ಸೆ &
ಶ್ರೀ. ಪ್ರವೀಣ್ ಪೂಜಾರಿ
ಸಂಘಟನಾ ಕಾರ್ಯದರ್ಶಿ
ಶ್ರೀಮತಿ. ಚೇತನ ಎಸ್ ಪೂಜಾರಿ
ಖಜಾಂಚಿ
ಶ್ರೀ. ಹರೀಶ್ ಕುಮಾರ್ ಪೂಜಾರಿ ತೋನ್ಸೆ
ಜೊತೆ ಖಜಾಂಚಿ
ಶ್ರೀಮತಿ. ಪ್ರೀತಾ ಎ ಬಂಗೇರ
ಸಾಂಸ್ಕೃತಿಕ ಕಾರ್ಯದರ್ಶಿ
ಶ್ರೀ. ಯಶವಂತ್ ಸನಿಲ್
ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ
ಶ್ರೀ. ಅಂಕಿತ್ ಪೂಜಾರಿ ಎರ್ಮಾಳ್
ಕ್ರೀಡಾ ಕಾರ್ಯದರ್ಶಿ
ಶ್ರೀ ಸಂತೋಷ ಜೆಡಿ ಪೂಜಾರಿ
ಜೊತೆ ಕ್ರೀಡಾ ಕಾರ್ಯದರ್ಶಿ
ಶ್ರೀ ಗಣೇಶ್ ಪಾಲನ್.
ಪ್ರಚಾರ ಸಮಿತಿ ಪ್ರಮುಖ್
ಶ್ರೀ ಪುಷ್ಪರಾಜ್ ಗಡಿಯಾರ್
ಪ್ರಚಾರ ಸಮಿತಿ ಸದಸ್ಯರು
ಶ್ರೀಮತಿ. ಸುನಿತಾ ಸುವರ್ಣ, ಶ್ರೀ. ಸಂದೀಪ್ ಸಾಲಿಯಾನ್, ಪ್ರವೀಣ್ ಪೂಜಾರಿ ಮತ್ತು ಅಂಕಿತ್ ಪಿ ಎರ್ಮಾಳ್.
ಕಾರ್ಯಕಾರಿ ಸಮಿತಿ ಸದಸ್ಯರು:
ಅರುಣ್ ಬಂಗೇರ, ಮನೋಹರ್ ಅಮೀನ್, ದಕ್ಷಯ ಪೂಜಾರಿ, ದೀಕ್ಷಿತ್ ಎಸ್ ಕೋಟ್ಯಾನ್, ಸೃುಜನ್ ಎಸ್ ಸನಿಲ್, ವಿದ್ಯಾಶ್ರೀ ಆರ್ ತೋನ್ಸೆ, ಭಾಗ್ಯ ಜ್ಯೋತಿ ಹರೀಶ್, ಸುಚಿತ್ರ ಎಸ್ ಬಜಾಲ್, ದೀಕ್ಷಾ ಆರ್ ಕೋಟ್ಯಾನ್.