ಇಂದು ಆಕಸ್ಮಿಕವಾಗಿ ಸೋಡಾ ಶರ್ಬತ್ ಸಿನೆಮಾದ ಪ್ರೀಮಿಯರ್ ಶೋ ನೋಡುವ ಅವಕಾಶ ಸಿಕ್ಕಿತು. ಆದರೆ ಚಿತ್ರ ನೋಡಿದ ನಂತರ ಇದು ಚಿನ್ನದಂತಹ ಅವಕಾಶವೆಂದು ತೋರಿತು.
ಕಾಪಿಕಾಡ್,ಬೋಳಾರ್ ಹಾಗೂ ವಾಮಂಜೂರು ಇವರೊಂದಿಗೆ ತುಳುನಾಡಿನ ಹೆಚ್ಚಿನ ಎಲ್ಲಾ ಹಾಸ್ಯ ಕಲಾವಿದರು ನಟಿಸಿರುವ ಚಿತ್ರ ಸಮಾಜಕ್ಕೆ ಉತ್ತಮ ಸಂದೇಶದೊಂದಿಗೆ ಕೊನೆಗೊಳ್ಳುವಾಗ ಚಿತ್ರ ವೀಕ್ಷಣೆ ಸಾರ್ಥಕ ಎನಿಸಿತು. ತುಂಬಾ ಅಚ್ಚುಕಟ್ಟಾಗಿ ನಿರ್ಮಿಸಿದ ಚಿತ್ರದ ನಿರ್ದೇಶಕ ಪ್ರದೀಪ್ ಹಾಗೂ ಪಿಬಿಪಿಯವರಿಗೆ ಅಭಿನಂದನೆಗಳು. ಯುವಜನರು ಪ್ರತ್ಯೇಕವಾಗಿ ಪ್ರೀತಿಮಾಡುವವರು ನೋಡಲೇ ಬೇಕಾದ ಚಿತ್ರ ಇದು.
ಸುದರ್ಶನ್ ಹಳೆಯಂಗಡಿ