TOP STORIES:

ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ – ಕಾರ್ಕಳದ ಬ್ರಹ್ಮಋಪಿ ಉಮಾಮಹೇಶ್ವರ ಸ್ವಾಮೀಜಿಯವರ 3 ವಿದ್ಯಾರ್ಥಿಗಳಿಗೆ ಪದಕ


ನೆಹರು ಒಳಕ್ರೀಡಾಂಗಣದಲ್ಲಿ .5 ಮತ್ತು 6ರಂದು ಎರಡು ದಿನಗಳ ಕಾಲ ಅಂತರಾಷ್ಟ್ರೀಯ 4ನೇಯ ಮಟ್ಟದ ಓಪನ್ ಕರಾಟೆಪಂದ್ಯಾವಳಿ ಆಯೋಜಿಸಲಾಗಿದ್ದು, ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಮತ್ತು ಶಿವಮೊಗ್ಗ ನಗರ ಕರಾಟೆ ಸಂಸ್ಥೆ ಜಂಟಿಯಾಗಿ ಸ್ಪರ್ಧೆಯನ್ನು ಆಯೋಜನೆ ಮಾಡಿದ್ದವು. ಪಂಜಾಬ್, ತಮಿಳುನಾಡು, ತೆಲಂಗಾಣ, ಗೋವಾ, ಮಹಾರಾಷ್ಟ್ರ ವಿವಿಧ ರಾಜ್ಯಗಳಿಂದ, ಶ್ರೀಲಂಕಾ ಮತ್ತು ನೇಪಾಳ ವಿದೇಶದಿಂದ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಮಂಡ್ಯ,ಹಾಸನ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಯಿಂದ ಒಟ್ಟು 1200ಕ್ಕೂ ಹೆಚ್ಚು ಕರಾಟೆ ಪಟುಗಳುಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಜೆ.ಬಿ.ಪಿ.ಆರ್‌ ಎಸ್‌ಎಸ್‌ ಇಂಡಿಯನ್‌ ಕೊಯ್‌ ಕುಶಿನ್‌ ಕಾಯ್‌ ಕರಾಟೆ ಡೂ ಅಸೋಸಿಯೇಶನ್‌, ಕಲ್ಯಾಕಾರ್ಕಳದ ಬ್ರಹ್ಮಋಪಿ ಉಮಾಮಹೇಶ್ವರ ಸ್ವಾಮೀಜಿಯವರ ಮೂವರು ವಿದ್ಯಾರ್ಥಿಗಳು 2 ಚಿನ್ನ ಮತ್ತು 2ಬೆಳ್ಳಿ ಪದಕಗಳನ್ನುತನ್ನದಾಗಿಸಿಕೊಂಡಿದ್ದಾರೆ. ಕಲ್ಯಾ ಕಾರ್ಕಳದ ಬ್ರಹ್ಮಋಪಿ ಉಮಾಮಹೇಶ್ವರ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಉಚಿತವಾಗಿಕರಾಟೆಯನ್ನು ತರಬೇತಿಯನ್ನು ನೀಡುತ್ತಿದ್ದಾರೆ. ಸೋಟೋಕನ್‌ ಕರಾಟೆ ಮತ್ತು ಜಪಾನ್‌ ಸ್ಟೈಲ್‌ 8ಕರಾಟೆಯನ್ನುಹೇಳಿಕೊಡಲಾಗುತ್ತದೆ. ಪೂನಾ ಮಹಾರಾಷ್ಟದಲ್ಲಿ ಕೂಡ ಉಚಿತ ಕರಾಟೆಯನ್ನು ಹೇಳಿಕೊಡಲಾಗುತ್ತದೆ. ಅಲ್ಲಿ ಸುಮಾರು 10 ಮಂದಿಕರಾಟೆ ತರಬೇತಿ ಪಡೆದು ಬ್ಲಾಕ್‌ ಬೆಲ್ಟ್‌ ಪಡೆದಿದ್ದಾರೆ.

ಕರಾಟೆ ಸ್ಪರ್ಧೆಯಲ್ಲಿ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಥಮ ಬಿ.ಸಿ., ವಿದ್ಯಾರ್ಥಿನಿಯರಾದ ನಿರೀಕ್ಷಾ ಕಟಾದಲ್ಲಿ ಪ್ರಥಮಸ್ಥಾನವನ್ನು, ಕುಮಿತೆ ಫೈಟ್‌ನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಇನ್ನು ನಿಟ್ಟೆ ವಿದ್ಯಾಸಂಸ್ಥೆಯ ಪ್ರಥಮ ವರ್ಷದ ಡಿಪ್ಲೋಮಾಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿ ಹೃತಿಕ್‌ ಅಮೀನ್‌ ಕಟಾದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ನಿಟ್ಟೆ ವಿದ್ಯಾಸಂಸ್ಥೆಯ ಡಾ. ಎನ್‌ಎಸ್‌ಎಎಂ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ರಾಹುಲ್‌ ಕೆ.ಕಟಾದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »