ಆದರ್ಶ ಮಿತ್ರ ಮಂಡಳಿ, ಕೊಲ್ಯ ಸೋಮೇಶ್ವರ ಇದರ 47ನೇ ವಾರ್ಷಿಕೋತ್ಸವ ಹಾಗೂ ಆದರ್ಶ ವಿದ್ಯಾನಿಧಿ ವಿತರಣಾ ಸಮಾರಂಭ – 2022 ಕಾರ್ಯಕ್ರಮವು ದಿನಾಂಕ 13-03-2022 ರ ಆದಿತ್ಯವಾರದಂದು ಕೊಲ್ಯ ಶ್ರೀ ಶಾರದಾ ಸಭಾ ಸದನದ ವಠಾರದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಶ್ರೀ ಪದ್ಮರಾಜ್ ಆರ್ ( ಖಜಾಂಚಿ,ಗೋಕರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿ ಹಾಗೂ ಅಧ್ಯಕ್ಷರು, ಗುರುಬೆಳದಿಂಗಳು (ರಿ) ಮಂಗಳೂರು) ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸೌಂದರ್ಯ ರಮೇಶ್ (ಸೌಂದರ್ಯ ಪ್ಯಾಲೇಸ್, ಕಟೀಲು) ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕೆ. ಎಸ್. ಶರ್ಮ (ತೆರಿಗೆ ಸಲಹೆಗಾರರು, ಬೀರಿ,ಕೋಟೆಕಾರ್) ಮತ್ತು ಶ್ರೀ ಭಗವಾನ್ ದಾಸ್ ಶೆಟ್ಟಿ ಕೊಲ್ಯ (ಭಾರತೀಯ ಮಜ್ದೂರ್ ಸಂಘದ ರಾಜ್ಯ ಉಪಾಧ್ಯಕ್ಷರು) ವಹಿಸಿದ್ದರು.
ಶ್ರೀ ಪ್ರಕಾಶ್ ಎಚ್ ಕೊಲ್ಯ (ಅಧ್ಯಕ್ಷರು, ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ) ಕೊಲ್ಯ), ಶ್ರೀ ಗಣೇಶ್ ಕೊಲ್ಯ (ಅಧ್ಯಕ್ಷರು, ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ, ಕೊಲ್ಯ), ಶ್ರೀಮತಿ ಸರೋಜಿನಿ ರುಕ್ಮಯ ಪೂಜಾರಿ(ಶ್ರೀ ಶಾರದಾ ಮಹಿಳಾ ಮಂಡಳಿ,ಕೊಲ್ಯ) ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಹೇಮಂತ್ ಕೊಲ್ಯ (ಅಧ್ಯಕ್ಷರು,ಆದರ್ಶ ಮಿತ್ರ ಮಂಡಳಿ, ಕೊಲ್ಯ) ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀ ಹೃತ್ವಿಕ್ ಕೊಲ್ಯ ಧನ್ಯವಾದ ಸಮರ್ಪಿಸಿದರು. ಶ್ರೀ ಪ್ರಸಾದ್ ಅಂಚನ್ ಕಾರ್ಯಕ್ರಮ ನಿರೂಪಿಸಿದರು.