TOP STORIES:

ಇನ್ನು ವಾಟ್ಸಪ್ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇ ಎಮೋಜಿ ಬಳಸಬಹುದು


ವಾಷಿಂಗ್ಟನ್:- ವಾಟ್ಸಪ್‌ನಲ್ಲಿ ರಿಯಾಕ್ಷನ್ ಫೀಚರ್ ಅನ್ನು ಹೊರತಂದು 2 ತಿಂಗಳಷ್ಟೇ ಕಳೆದಿದೆ. ಆದರೆ ಬಳಕೆದಾರರು ಇಲ್ಲಿಯವರೆಗೆಕೇವಲ 6 ಎಮೋಜಿಗಳನ್ನು ಮಾತ್ರವೇ ರಿಯಾಕ್ಷನ್ ಆಗಿ ಬಳಸಬಹುದಿತ್ತು. ಇದೀಗ ರಿಯಾಕ್ಷನ್ ಫೀಚರ್‌ನಲ್ಲಿ ಯಾವುದೇಎಮೋಜಿಗಳನ್ನು ( Emoji can be used) ಬಳಸಲು ವಾಟ್ಸಪ್ ಅನುಮತಿ ನೀಡಿದೆ.

ಇಲ್ಲಿಯವರೆಗೆ ಲೈಕ್, ಪ್ರೀತಿ, ನಗು, ಆಶ್ಚರ್ಯ, ದುಃಖ ಹಾಗೂ ಧನ್ಯವಾದದ ಎಮೋಜಿಗಳನ್ನಷ್ಟೇ ರಿಯಾಕ್ಷನ್ ಆಗಿ ಕಳುಹಿಸಲುಅವಕಾಶ ನೀಡಿತ್ತು. ಇದೀಗ ರಿಯಾಕ್ಷನ್‌ನಲ್ಲಿ ಯಾವುದೇ ಎಮೋಜಿಗಳನ್ನು ಬಳಸಬಹುದಾಗಿದ್ದು, ಬಗ್ಗೆ ವಾಟ್ಸಪ್‌ನ ಮಾತೃ ಸಂಸ್ಥೆಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಇನ್‌ಸ್ಟಾಗ್ರಾಮ್‌ನಲ್ಲಿ ರೋಲ್‌ಔಟ್ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ.

ಬೀಟಾ ಪರೀಕ್ಷಕರ ವರದಿಗಳ ಪ್ರಕಾರ ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಹಲವಾರು ಫೀಚರ್‌ಗಳನ್ನು ಪರೀಕ್ಷಿಸುತ್ತಿದೆ. ಬಳಕೆದಾರರುವಾಟ್ಸಪ್ ಅನ್ನು ಇನ್ನೊಂದು ಹ್ಯಾಂಡ್‌ಸೆಟ್‌ನಿಂದ ಲಾಗ್‌ಇನ್ ಮಾಡಲು ಆಂಡ್ರಾಯ್ಡ್‌ಗಳಿಗಾಗಿ ಚ್ಯಾಟ್ ಸಿಂಕ್ ಫೀಚರ್, ನಿಮ್ಮಆನ್‌ಲೈನ್ ಸ್ಥಿತಿಯನ್ನು ಮರೆಮಾಡುವ ಸಾಮರ್ಥ್ಯದಂತಹ ಫೀಚರ್‌ಗಳು ಟೆಸ್ಟಿಂಗ್‌ನಲ್ಲಿ ಒಳಗೊಂಡಿವೆ.

ಜೂನ್‌ನಲ್ಲಿ ವಾಟ್ಸಪ್ ಬಳಕೆದಾರರಿಗೆ ಗೌಪ್ಯತೆಯನ್ನು ನಿಯಂತ್ರಿಸುವ ಫೀಚರ್‌ಗಳನ್ನು ಹೊರತರಲು ಪ್ರಾರಂಭಿಸಿತು. ಅದರಲ್ಲಿಕೊನೆಯದಾಗಿ ಆನ್‌ಲೈನ್‌ನಲ್ಲಿದ್ದ ಸಮಯವನ್ನು ಮರೆಮಾಡುವುದು ಹಾಗೂ ಪ್ರೊಫೈಲ್ ಫೋಟೋವನ್ನು ಆಯ್ಕೆಮಾಡಿದವರಿಗಷ್ಟೇ ತೋರುವಂತೆ ಮಾಡುವಂತಹ ಅವಕಾಶವನ್ನು ನೀಡಿದೆ.

ಜುಕರ್‌ಬರ್ಗ್ ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ಫೋನ್‌ನಿಂದ ಐಫೋನ್‌ಗೆ ತಮ್ಮ ವಾಟ್ಸಪ್ ಡೇಟಾವನ್ನು ಸುಲಭವಾಗಿವರ್ಗಾಯಿಸುವ ಸಾಮರ್ಥ್ಯವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ವರದಿಗಳ ಪ್ರಕಾರ ಇದು ಇನ್ನೂಪರೀಕ್ಷೆಯಲ್ಲಿದೆ.


Related Posts

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »