ಬೆಂಗಳೂರು ಈಡಿಗರ ವಿದ್ಯಾರ್ಥಿನಿಲಯ ಹಳೇ ವಿದ್ಯಾರ್ಥಿಗಳ ಸಂಘದ ಹಾಗೂ ಟ್ರಸ್ಟ್ ಗಳ ಸಹಯೋಗದಲ್ಲಿ ಪಿಯುಸಿ, ವಿವಿಧ ಪದವಿ, ತಾಂತ್ರಿಕ, ವೈದ್ಯಕೀಯ, ಸ್ನಾತಕೋತ್ತರ, ಔಷಧಿ ವಿಜ್ನಾನ ಪದವಿಗಳು ಹಾಗೂ ಡಿಪ್ಲೋಮ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಈಡಿಗ ಜನಾಂಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ, ೧೮೫, ರಾಜೀವ್ ಗಾಂಧಿ ವ್ರತ, ಶೇಷಾದ್ರಿಪುರಂ, ಬೆಂಗಳೂರು ೫೬೦ ೦೨೦ ಇಲ್ಲಿ ದಿನಾಂಕ ೦೫-೧೦-೨೦೨೧ ರಿಂದ ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ ೧೨-೧೧-೨೦೨೧ ರೊಳಗೆ ಬೆಂಗಳೂರು ಈಡಿಗರ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘದ ವಿಳಾಸಕ್ಕೆ ಕಳುಹಿಸಬೇಕು. ರೂ ೧೦ ಪಾವತಿಸಿ ಅರ್ಜಿಯನ್ನು ಪಡೆಯತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖೆ: 080 – 48145442/23560575/9916045255/9448488983 ಈ ನಂಬರ್ ಗಳನ್ನು ಸಂಪರ್ಕಿಸುವುದು. ಎಸ್ ಜೆ ಕಾಳೇಗೌಡ, ಕಾರ್ಯದರ್ಶಿ