ದಕ್ಷಿಣ ಕನ್ನಡದ ಮಂಗಳೂರಿನ ಲೇಡಿಹಿಲ್ ವೃತ್ತದ ಹೆಸರನ್ನು ತೆಗೆದು ಹಾಕಿ ಅಲ್ಲಿಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಮಾಡುವಲ್ಲಿ ಪ್ರಾಮಾಣಿಕವಾಗಿ ಸತತ ಪ್ರಯತ್ನ ಪಟ್ಟು ಹೋರಾಟ ನಡೆಸಿದ
ಬಿರುವೆರ್ ಕುಡ್ಲ ಫ್ರೆಂಡ್ಸ್ ಬಲ್ಲಾಳ್ ಬಾಗ್ (ರಿ) ಇದರ ಅಧ್ಯಕ್ಷರಾದ ಶ್ರೀಯುತ ಉದಯ ಪೂಜಾರಿ ಅವರಿಗೆ
ಅ.ಭಾ. ಹಿಂದೂ ಮಹಾ ಸಭಾ ದ.ಕ ಜಿಲ್ಲಾ ಘಟಕದ ವತಿಯಿಂದ
ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಮಹಾಸಭಾ ಕರ್ನಾಟಕ ರಾಜ್ಯ ಘಟಕ ಅಧ್ಯಕ್ಷ ಡಾ. ಎಲ್ .ಕೆ ಸುವರ್ಣ
“ಬಿರುವೆರ್ ಕುಡ್ಲ ಫ್ರೆಂಡ್ಸ್ ಬಳ್ಳಾಲ್ಬಾಗ್ (ರಿ) ಇವರ ಕಾರ್ಯ ಶ್ಲಾಘನೀಯ.
ಮಾತ್ರವಲ್ಲದೆ ಕೆಲವು ಸ್ವಯಂ ಘೋಷಿತ ವ್ಯಕ್ತಿಗಳು ನಮ್ಮಿಂದ ಹೆಸರು ಬದಲಾವಣೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡೆಯುತ್ತಿರುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರು ..
ಬ್ರಿಟಿಷರು ಇಟ್ಟ ಲೇಡಿಹಿಲ್ ವೃತ್ತ ಎಂಬ ಹೆಸರನ್ನು ತೆಗೆದುಹಾಕಿ
” ಬ್ರಹ್ಮಶ್ರೀ ನಾರಯಣ ಗುರು ವೃತ್ತ” ಎಂದು ಮರುನಾಮಕರಣ ಮಾಡಿದ ಕೀರ್ತಿ ಶ್ರೀ ಉದಯ ಪೂಜಾರಿ ಬಿರುವೆರ್ ಕುಡ್ಲ ಫ್ರೆಂಡ್ಸ್ ಬಳ್ಳಾಳ್ಬಾಗ್ (ರಿ) ಮತು ಇದರ ಪದಾಧಿಕಾರಿಗಳಿಗೆ ಸಲ್ಲುತ್ತದೆ ” ಎಂದು ಹೇಳಿ ಶುಭ ಹಾರೆೃಸಿದರು..
ಇದಕ್ಕೆ ಸಹಕರಿಸಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಪಾಲಿಕೆ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು…
ಈ ಕಾರ್ಯಕ್ರಮದಲ್ಲಿ
ಹಿಂದೂ ಮಹಾಸಭಾ
ರಾಜ್ಯ ಉಪಾಧ್ಯಕ್ಷ
ಪ್ರಮೋದ್ ಬಲ್ಲಾಳ್ಬಾಗ್,
ರಾಜ್ಯ ಪ್ರಭಾರಿ ರಾಜೇಶ್ ಪೂಜಾರಿ
ಆರ್ಯ ಲೋಕಾನಂದ
ಹಿಂದೂ ಮಹಾಸಭಾ ದ.ಕ ಜಿಲ್ಲಾ ಅಧ್ಯಕ್ಷ
ಲೋಕೇಶ್ ಉಳ್ಳಾಲ್,
ಹಿಂದೂ ಮಹಾಸಭಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ
ನಾಗೇಶ್ ತಡಂಬ್ಯೆಲ್ ,
ಹಿಂದೂ ಮಹಾಸಭಾ ಮಂಗಳೂರು
ದಕ್ಷಿಣ ವಿಧಾನಸಭಾ ಕ್ಷೇತ್ರ
ಪ್ರಧಾನಕಾರ್ಯದರ್ಶಿ
ನಾಗರಾಜ್ ಕೊಡಿಕಲ್,
ದ.ಕ ಜಿಲ್ಲಾ ಯುವ ಘಟಕ ಅಧ್ಯಕ್ಷ
ಚಿದಂಬರ ರಾವ್,
ಹಾಗೂ
ಪ್ರಶಾಂತ್ ಆಚಾರ್ಯ,
ಪವನ್ ಆಚಾರ್ಯ ಮೊದಲಾದವರು ಉಪಸ್ಥಿತಿಯಲ್ಲಿದ್ದರು…