ಮಂಗಳೂರು: ಎಂಆರ್‌ಪಿಎಲ್ ಸಂಸ್ಥೆಯು ಉದ್ಯೋಗ ನೀಡುವಲ್ಲಿ ಸ್ಥಳೀಯರಿಗೆ ಮಾಡಿರುವ ಅನ್ಯಾಯವನ್ನು ಜಿಲ್ಲೆಯ ಪ್ರತಿಯೊಬ್ಬರೂ ಖಂಡಿಸಬೇಕು ಹಾಗೂ ಅದರ ವಿರುದ್ಧ ಜಾತಿ, ಮತ, ರಾಜಕೀಯ ಭೇದ ಮರೆತು ಪ್ರಬಲ ಹೋರಾಟ ಸಂಘಟಿಸಬೇಕು ಎಂದು ಕಾಂಗ್ರೆಸ್‌ನ ಯುವ ನಾಯಕ ಹಾಗೂ ಪನಾಮ ಸಂಸ್ಥೆಯ ಮುಖ್ಯಸ್ಥ ವಿವೇಕ್‌ರಾಜ್ ಪೂಜಾರಿ ಹೇಳಿದ್ದಾರೆ.ಎಂಆರ್‌ಪಿಎಲ್ ಮಾಡಿರುವ ಅನ್ಯಾಯ ಇಡೀ ಜಿಲ್ಲೆಗೆ ಅವಮಾನವಾಗಿದೆ. ತುಳುನಾಡಿನವರೆಲ್ಲರೂ ಸಂಘಟಿತವಾದ ಹೋರಾಟ ನಡೆಸಿದರೆ ಇದರ ವಿರುದ್ಧ ಗೆಲುವು ಸಾಧಿಸಿ ನಮ್ಮವರಿಗೆ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಿದೆ. ನಾವು ಜಿಲ್ಲೆಯ ವರು ಮತ್ತು ಸ್ಥಳೀಯರು ಎಂಬ ಒಂದೇ ಬ್ಯಾನರ್‌ನಡಿಯಲ್ಲಿ ಈ ಹೋರಾಟ ನಡೆಸಬೇಕು. ನಮ್ಮ ನಡುವೆ ಆರೋಪ – ಪ್ರತ್ಯಾರೋಪ ಮಾಡದೆ ಒಗ್ಗಟ್ಟಿನಿಂದ ಎಂಆರ್‌ಪಿಎಲ್ ವಿರುದ್ಧ ಹೋರಾಡಿ ಜಯ ಸಾಧಿಸಿ ನಮ್ಮ ಶಕ್ತಿಯನ್ನು ತೋರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ವಿವೇಕ್‌ರಾಜ್ ಪೂಜಾರಿ ಸಾಮಾಜಿಕ ಕಳಕಳಿ ಹೊಂದಿರುವ ಯುವ ನಾಯಕ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಸಾಕಷ್ಟು ಸಹಾಯ ಮಾಡುತ್ತಾ ಸಾಮಾಜಿಕ ಬದ್ಧತೆಯನ್ನು ಮೆರೆದಿರುವ ಇವರು ಜನಪರ ವಿಷಯಗಳ ಮೂಲP ಸದಾ ಸುದ್ದಿಯಲ್ಲಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ ಎಂದು ಹೇಳುವ ಅವರು ನುಡಿದಂತೆ ನಡೆಯುವವರೂ ಆಗಿದ್ದಾರೆ. ಇವರು ಎಂಆರ್‌ಪಿಎಲ್ ವಿರುದ್ಧ ದನಿ ಎತ್ತಿರುವುದು ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿಯಾಗುವ ಸಾಧ್ಯತೆಯಿದೆ. ಇದರಲ್ಲಿ ಅವರ ಕೈಗಳನ್ನು ನಾವೆಲ್ಲರೂ ಗಟ್ಟಿಗೊಳಿಸಬೇಕಾಗಿದೆ.