ನಾಗಪಾತ್ರಿಯ ನಾಗನರ್ತಕರಾಗಿ ಮೊದಲ ಬಾರಿ ಕಳೆದ ಆರು ತಿಂಗಳ ಅವಿರತ ಅಭ್ಯಾಸದಿಂದ ತುಳುನಾಡಿನ ಸಹೋದರರಾದಅಭಿಜಿತ್ ಪೂಜಾರಿ ಮತ್ತು ಅಜಿತ್ ಪೂಜಾರಿ ಅವರಿಬ್ಬರು ಕಂಕನಾಡಿಯ ನಾಗಬ್ರಹ್ಮ ಮಂಡಲೋತ್ಸವದಲ್ಲಿ ನರ್ತನ ಸೇವೆಯನ್ನುನೀಡಿರುವುದು ವಿಶೇಷವಾಗಿದೆ.
ಇಬ್ಬರೂ ಸಹೋದರರು ಸ್ನಾತಕೋತ್ತರ ಪದವೀಧರರು.
ಶ್ರೀ ವಿನಾಯಕ ಯಕ್ಷಗಾನ ಮಕ್ಕಳ ಮೇಳದ ಸಂಚಾಲಕ ಜಯಂತ್ ಅಮೀನ್ ಅವರ ಸುಪುತ್ರರು.
ಕೋಟ್ಯಾಂತರ ಬಿಲ್ಲವ ಸಮುದಾಯದಲ್ಲಿ ಈ ಇಬ್ಬರೂ ಸಹೋದರರು ಈ ನಾಗನರ್ತಕರಾಗಿ ಸೇವೆಯನ್ನು ನೀಡಿರುವುದು ಇದೇಮೊದಲು ಇದು ಇತಿಹಾಸ ಈ ಸಮುದಾಯದಲ್ಲಿ ಈವರೆಗೂ ಇಂತಹ ಸೇವೆಯಲ್ಲಿ ಪಾಲ್ಗೊಂಡಿಲ್ಲ.
ಒಂದೇ ವರ್ಗಕ್ಕೆ ಸೀಮಿತವಾಗಿದ್ದ ಈ ಕಲೆಗಾರಿಕೆ ಇದೀಗ ವಿಸ್ತೃತಗೊಂಡಿದೆ.