TOP STORIES:

ಕರಾವಳಿಯ ಸ್ಥಳೀಯ ಕುಚ್ಚಲಕ್ಕಿ ಪ್ರಭೇದ ಪಡಿತರ ವ್ಯವಸ್ಥೆಯಡಿ ವಿತರಣೆ ಅನುಮೋದನೆ


ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರು ಬೆಳೆಯುತ್ತಿರುವ, ಸ್ಥಳೀಯ ಕುಚ್ಚಲಕ್ಕಿ ಪ್ರಭೇಧಗಳಾದ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ (MSP) ಖರೀದಿ ಮಾಡಿ ಪಡಿತರದ ಮೂಲಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ವಿತರಿಸಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಪಡಿತರದ ಮೂಲಕ ಕುಚ್ಚಲ್ಲಕ್ಕಿಯನ್ನು ವಿತರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಬೇಡಿಕೆಯನ್ನು ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದೆ ಹಾಗೂ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಯತ್ನದಿಂದ ಕರ್ನಾಟಕ ಸರ್ಕಾರ ಸದರಿ ಬೇಡಿಕೆಯನ್ನು ಅನುಮೋದಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಶೋಭಾ ಕರಂದ್ಲಾಜೆಯವರು, ಕೇಂದ್ರದ ಸದರಿ ಇಲಾಖಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ಸದರಿ ಪ್ರಸ್ತಾವನೆಯನ್ನು ಅನುಮೋದಿಸುವಂತೆ ಕೋರಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಮನವಿಯನ್ನು ಪರಿಗಣಿಸಿದ ಸನ್ಮಾನ್ಯ ಶ್ರೀ ಪಿಯೂಷ್ ಗೋಯಲ್ ಅವರು ದಿನಾಂಕ. 06.01.22ರಂದು ಕೇಂದ್ರ ಸಚಿವೆ, ಶೋಭಾ ಕರಂದ್ಲಾಜೆಯವರಿಗೆ ಪತ್ರ ಬರೆದು, ಮೇಲ್ಕಾಣಿಸಿದ ಕುಚ್ಚಲಕ್ಕಿ ಪ್ರಭೇಧಗಳನ್ನು MSP ಮೂಲಕ ಖರೀದಿ ಮಾಡಿ ಪಡಿತರದ ಮೂಲಕ ವಿತರಿಸಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ.

ಕೇಂದ್ರದ ಈ ಅನುಮತಿಯೊಂದಿಗೆ ಉಡುಪಿ-ದಕ್ಷಿಣ ಕನ್ನಡದ ರೈತರ ಕೃಷಿ ಉತ್ಪಾದನೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಅದಲ್ಲದೇ, ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯಾದ ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸುವ ಬೇಡಿಕೆಗೆ ಪುಷ್ಟಿ ಸಿಕ್ಕಿದೆ.


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »