ಕರ್ನಾಟಕ ರಾಜ್ಯ ಬಿಲ್ಲವ, ತೀಯಾ, ಆರ್ಯ ಈಡಿಗ 24 ಪಂಗಡಗಳ ಸಮಾಜದ ಪರವಾಗಿ ವೇದಕುಮಾರ್ ಬೆಂಗಳೂರು, ಜೆ.ಪಿ.ಸುಧಾಕರ ಬೆಂಗಳೂರು, ತಿಮ್ಮೇಗೌಡ ಬೆಂಗಳೂರು, ಬಿ.ಎನ್.ಶಂಕರ ಪೂಜಾರಿ ಇವರುಗಳ ನೇತೃತ್ವದಲ್ಲಿ ಮಾನ್ಯ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಗುರು ಜಯಂತಿಯ ಸವಿನೆನಪಿಗಾಗಿ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ 3 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಬೆಂಗಳೂರಿನಲ್ಲಿ ನೀಡಿದರು.
ನಾರಾಯಣ ಗುರುಗಳ ಸುಂದರ ಪ್ರತಿಮೆಯ ನಿರ್ಮಾಣ ಜೆ.ಪಿ. ಆಚಾರ್ಯ ಕೋಟೆಕಾರ್.
ಈ ಸಂದರ್ಬದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಸಚಿವರಾದ ಸಿ.ಟಿ.ರವಿ, ಜಿ.ಪ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಇದ್ದರು.