TOP STORIES:

ಕುಂಚದಲ್ಲಿ ಚಿತ್ರದ ನಾವಿಕನಾಗಿ,ಅಭಿನಯದಲ್ಲಿ ವಿಭಿನ್ನನಾಗಿ ನಿಂತ ಬಂಟ್ವಾಳದ “ರವಿ ಸಾಲ್ಯಾನ್”


ಬದುಕು ಎಂದರೆ ಸಮುದ್ರದ ನಡುವೆ ದೋಣಿಯಲ್ಲಿ ಸಾಗಿದ ರೀತಿಯೇ,ಹಾಯಿಗೋಲು ನಮ್ಮ ಕೈಯಲ್ಲೇ ಇದ್ದರೂ,ಒಂದೊಂದು ಸಲ ಗಾಳಿ ಬಂದ ಕಡೆ ಸಾಗಲೇ ಬೇಕು.ಇಲ್ಲದಿದ್ದರೆ ಗಾಳಿಯೇ ತನ್ನತ್ತ ತಿರುಗಿಸಿ ನಮ್ಮ ಗುರಿಯನ್ನು ವಿಚಲಿತಗೊಳಿಸುತ್ತದೆ..!

ದಾರಿ ತಪ್ಪಿದರು ಗುರಿ ತಪ್ಪಲೇಬಾರದು ಅಲ್ಲವೇ..!!

ಕಲಾವಿದನೊಳಗೊಬ್ಬ ಕಲಾವಿದನನ್ನು ಮೇಳೈಸಿದ ಕಲಾವಿದ “ರವಿ ಸಾಲ್ಯಾನ್”.

ಆನಂದ ಪೂಜಾರಿ ಮತ್ತು ಕುಸುಮಾರವರ ಎರಡನೇಯ ಮಗನಾಗಿ ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ಜನಿಸಿದ ರವಿ,ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಪಾದೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಮಣಿನಾಲ್ಕೂರುವಿನಲ್ಲಿ ಪೂರ್ಣಗೊಳಿಸಿದರು.
ಎಲ್ಲರಿಗೂ ಶಾಪವಾಗಿ ಪರಿಣಮಿಸಿದ ಬಡತನ ಇವರನ್ನೂ ಕೂಡ ಬಿಡಲೇ ಇಲ್ಲ..! ಒಂದು ತುತ್ತು ಅನ್ನಕ್ಕಾಗಿ ಪರದಾಡಿದ ಉದಾಹರಣೆಯನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ.

10ನೇಯ ತರಗತಿ ಮುಗಿದ ನಂತರ ಒಂದಿಷ್ಟೂ ಹಣಕ್ಕಾಗಿ ಬೆಂಗಳೂರಿಗೆ ಬಂದು ದುಡಿದ ದಿನ ಇವರ ಪಾಲಿನಲ್ಲಿ ಇತ್ತು..!!ತದನಂತರ ಊರಿಗೆ ಮರಳಿ ತಾಂತ್ರಿಕ ಶಿಕ್ಷಣವನ್ನು ಕೂಡ ಪಡೆದರು.

ಶಾಲಾ ದಿನಗಳಲ್ಲಿ ಇದ್ದ ಚಿತ್ರ ಕಲೆಯ ಬಗ್ಗೆ ವಿಶೇಷ ಆಸಕ್ತಿ,ಇಂದು ರವಿ ಸಾಲ್ಯಾನ್ ರವರನ್ನು ಹಲವಾರು ಪ್ರತಿಭೆಗಳ ಮಧ್ಯೆ ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿದ್ದಾರೆ.

ತಾಂತ್ರಿಕ ಶಿಕ್ಷಣವನ್ನು ಪೂರೈಸಿದ ನಂತರ ಉದ್ಯೋಗಕ್ಕಾಗಿ ಮತ್ತೊಮ್ಮೆ ಬೆಂಗಳೂರಿನತ್ತ ಪಯಣಿಸಿ,ಪ್ರತಿಷ್ಠಿತ ಖಾಸಗಿ ಕಂಪನಿಯಾದ ಟೊಯೊಟಾದಲ್ಲಿ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಏನಾದರೂ ಸಾಧನೆ ಮಾಡಲೇಬೇಕೆಂಬ ಅತೀವ ಬಯಕೆ,ಅದರ ಜೊತೆ ಸಾಗಿದ ಹಠ,ಅದನ್ನು ಪಡೆಯಲು ಹೊತ್ತು ತಂದ ಪರಿಶ್ರಮದ ಮೂಟೆ ಇಂದು ರವಿಯವರನ್ನು ಕಲಾವಿದನೊಳಗೊಬ್ಬ ಕಲಾವಿದನನ್ನು ಹುಟ್ಟು ಹಾಕಿದೆ ಎಂದರೆ ತಪ್ಪಾಗಲಾರದು..!

ಬೆಂಗಳೂರಿನಲ್ಲಿ ನಾಗರಾಜ್ ಕೋಟೆಯವರ ಮಾರ್ಗದರ್ಶನದಲ್ಲಿ “ಬಣ್ಣ” ಸಂಸ್ಥೆಯ ಜೊತೆಯಲ್ಲಿ ‘ಜೋಗಿಯ ರಾಣಿ’ ಎಂಬ ನಾಟಕದಲ್ಲಿ ಬಣ್ಣ ಹಚ್ಚಿ ತನ್ನ ಅಭಿನಯದ ಯಾತ್ರೆಗೆ ಪೂರ್ಣ ಕುಂಭ ಸ್ವಾಗತವನ್ನು ಕೋರಿದರು.

ಅಗ್ನಿ ಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ ನೇತೃತ್ವದಲ್ಲಿ “ಆಮಂತ್ರಣ”ವೆಂಬ ಕಿರು ಚಿತ್ರದಲ್ಲಿ ಮೊದಲನೆಯ ಬಾರಿಗೆ ಅಭಿನಯಿಸಿದರು.

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಗೀತಾಂಜಲಿ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಸಿಲ್ಲಿ ಲಲ್ಲಿ ಮತ್ತು ಶಾಂತಮ್ ಪಾಪಂ ಧಾರಾವಾಹಿಗಳಲ್ಲಿ ನಟಿಸಿದ ಹೆಗ್ಗಳಿಕೆ ರವಿ ಅವರದು.ಹಾಗೆಯೇ ಜೀ ಕನ್ನಡದಲ್ಲಿ ಪ್ರಸಾರವಾದ “ಬ್ರಹ್ಮ ಗಂಟು” ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ.
‘ಗರ್ನಲ್ ‘ ಎಂಬ ಕಿರು ಚಿತ್ರದಲ್ಲಿ ನಾಯಕನಾಗಿ ನಟಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದ ರವಿಯವರು,ಕಲರ್ಸ್ ಕನ್ನಡದಲ್ಲಿ “ಮಂಗಳ ಗೌರಿ ಮದುವೆ”ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದಲ್ಲಿ ಬಣ್ಣ ಹಚ್ಚಿದ ಹಿರಿಮೆ ಇವರದು.

ರಾಜು ಕನ್ನಡ ಮೀಡಿಯಂ ಚಲನಚಿತ್ರದಲ್ಲಿ ನಟನೆ ಹಾಗೂ ಬಿಡುಗಡೆಗೆ ಸಿದ್ಧವಾದ ಥಗ್ ಆಫ್ ರಾಮಗಢ ಎಂಬ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ.
“ತದನಂತರ” ಎಂಬ ರಾಜೇಶ್ ಧ್ರುವ ನಿರ್ದೇಶನದ ಚಿತ್ರದಲ್ಲಿ ಅಭಿನಯದ ಜೊತೆಗೆ ಹಾಗೆಯೇ ಮನುರವರ ನಿರ್ದೇಶನದ ಹೊಸ ಚಿತ್ರದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ಸುಶಾಂತ್ ಶೆಟ್ಟಿ ನಿರ್ದೇಶನದ ಮಗದೊಂದು ಕಿರು ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ಪ್ರವೃತ್ತಿಯಲ್ಲಿ ಚಿತ್ರ ಕಲಾವಿದ ಆಗಿರುವ ರವಿಯವರು ತನ್ನ ಕುಂಚದಲ್ಲಿ ಹಲವಾರು ಪೆನ್ಸಿಲ್ ಚಿತ್ರ ಮತ್ತು ವಾಟರ್ ಕಲರ್ ಪೈಂಟಿಂಗ್ ನ್ನು ಮಾಡಿ ಅನೇಕ ಗಣ್ಯರನ್ನು ಮೂಕ ವಿಸ್ಮಿತನನ್ನಾಗಿ ಮಾಡಿದ ಇವರು,ಕನ್ನಡ ಮೇರು ನಟರಾದ ಶಿವರಾಜ್ ಕುಮಾರ್,ಕೇಂದ್ರ ಸಚಿವ ಅನುರಾಗ್ ಠಾಕೂರ್,ಪುನೀತ್ ರಾಜ್ ಕುಮಾರ್,ವಿಜಯೇಂದ್ರ ಯಡಿಯೂರಪ್ಪ,ರಾಜೇಶ್ ನಾಯ್ಕ್,ಉಪೇಂದ್ರ ಮತ್ತು ಸಾಲು ಮರದ ತಿಮ್ಮಕ್ಕರವರ ಮರು ಚಿತ್ರವನ್ನು ಬಿಡಿಸಿ ಅವರಿಂದಲೂ ಸೈ ಎನಿಸಿಕೊಂಡಿದ್ದಾರೆ.ಈಗಾಗಲೇ ನೂರಕ್ಕಿಂತ ಹೆಚ್ಚಿನ ಚಿತ್ರವನ್ನು ಬಿಡಿಸಿ,ವಿಭಿನ್ನ ಕಲೆಯಿಂದ ಎಲ್ಲರಿಂದ ಪ್ರಶಂಸೆಗೆ ಒಳಗಾದ ರವಿಯವರು,ಬೆಂಗಳೂರಿನ ಕೆಂಗೇರಿಯಲ್ಲಿ “ಸಾಲ್ಯಾನ್ ಗ್ಯಾಲರಿ” ಎಂಬ ಟ್ಯಾಟೂ ಸಂಸ್ಥೆಯನ್ನು ಹೊಂದಿದ್ದಾರೆ.

ಬಣ್ಣದ ಜಗತ್ತಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ರವಿಯವರು,ತನ್ನ ಕುಂಚದಲ್ಲಿ ವಿಭಿನ್ನ ಶೈಲಿಯ ಮರು ಚಿತ್ರಗಳಿಗೆ ಜೀವ ತುಂಬಿ ಜೀವ ಇರುವಂತೆ ಬಿತ್ತಿಸಿದ ಕಲಾವಿದ ಇವರು.

ರವಿಯವರ ಅಣ್ಣ ಜಯಂತ್ ಸಾಲ್ಯಾನ್ ಕೂಡ ವಿಶಿಷ್ಠ ಶೈಲಿಯ ರಂಗೋಲಿ ಕಲಾವಿದರು ಹೌದು..!
ಸಾಧನೆಯ ಹಿಂದಿನ ಕಠಿಣ ದಾರಿಯೂ ಕೂಡ ಸಾಧೆನೆಯೇ ಅಲ್ಲವೇ..!?
ಇನ್ನಷ್ಟು ವೇದಿಕೆಗಳು ಮತ್ತು ಅವಕಾಶಗಳು ರವಿಯವರಿಗೆ ಸಾಗಿ ಬರಲಿ ಎಂಬುವುದೇ ನಮ್ಮ ಆಶಯ..

ಬರಹ : ವಿಜೇತ್ ಪೂಜಾರಿ ಶಿಬಾಜೆ.


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »