ಕೋಣೆಯೊಳಗೆ ಬಾಗಿಲು ಹಾಕಿ ಕನ್ಯಾಡಿಯ ಬ್ರಹ್ಮಾನಂದ ಶ್ರೀಗಳೊಂದಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಗುಪ್ತ ಸಮಾಲೋಚನೆ ನಡೆಸಿದ್ದು ಹಲವಾರು ಕುತೂಹಲಗಳಿಗೆ ಕಾರಣವಾಗಿದೆ.ಯಾರನ್ನೂ ಒಳಗಡೆ ಬಿಡದೆ ಹಲವು ಸಮಯ ಶ್ರೀಗಳ ಜತೆ ಸಮಾಲೋಚನೆ ನಡೆಸಿದ ಗೃಹ ಸಚಿವರು ಗೌಪ್ಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದು ಹಲವಾರು ಚರ್ಚೆಗೆ ಗ್ರಾಸವಾಗಿದೆ. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರ ಕೋರಿಕೆಯಂತೆ ಶ್ರೀ ರಾಮಕ್ಷೇತ್ರಕ್ಕೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಬಳಿಕ ಕ್ಷೇತ್ರದ ಬ್ರಹ್ಮಾನಂದ ಶ್ರೀಗಳೊಂದಿಗೆ ಚರ್ಚೆ ನಡೆಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನವೆಂಬರ್ ೯ ರಂದು ಪೊಲೀಸ್ ಠಾಣೆಯ ಕಟ್ಟಡದ ಶಿಲಾನ್ಯಾಸಕ್ಕೆ ಆಗಮಿಸಿದ ರಾಜ್ಯ ಸರಕಾರ ಗೃಹ ಸಚಿವ ಅರಗ ಜ್ಞಾನೇಂದ್ರ ಶಿಲಾನ್ಯಾಸ ಕಾರ್ಯಕ್ರಮ ಪೂರೈಸಿ ಸುಲ್ಕೇರಿ ಶಾಲೆಗೆ ತೆರಳುವ ಹಾದಿ ಮಧ್ಯೆ ಧರ್ಮಸ್ಥಳ ಕನ್ಯಾಡಿಯ ನಿತ್ಯಾನಂದ ನಗರದಲ್ಲಿರುವ ಶ್ರೀ ರಾಮಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಸೀತಾರಾಮರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಶಿಷ್ಟಾಚಾರದ ಭೇಟಿಯಂತೆ ಆರಂಭದಲ್ಲಿ ಕಂಡುಬಂದರೂ
ಬಾಗಿಲು ಹಾಕಿ ಚರ್ಚಿಸುವಂತ ವಿಷಯ ಏನಿತ್ತು ಅನ್ನೋದು ಹಲವರ ಪ್ರಶ್ನೆಯಾಗಿದೆ?