ನವದೆಹಲಿ : ಎಲ್‌ಪಿಜಿ ಸಿಲಿಂಡರ್‌ಗಳ (LPG Cylinder) ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಗ್ರಾಹಕರ ಜೇಬು ಸುಡುತ್ತಿದೆ. ಈ ಈಗ ಬಂದಿರುವ ಸುದ್ದಿ ಗ್ರಾಹಕರ ಮೊಗದಲ್ಲಿ ನಗು ತರಿಸುತ್ತದೆ. ಈಗ 633.50 ರೂ ಪಾವತಿಸಿ ಮಾತ್ರ ಸಿಲಿಂಡರ್ ಅನ್ನು ಪಡೆಯಬಹುದು. ಅಡುಗೆ ಅನಿಲದ ಬೆಲೆಯಲ್ಲಿ (LPG Price) ಯಾವುದೇ ಬದಲಾವಣೆಯಾಗಿಲ್ಲ. ಅಕ್ಟೋಬರ್ 4 ರ ನಂತರ, ಎಲ್‌ಪಿಜಿ ಸಿಲಿಂಡರ್ ಅಗ್ಗವಾಗಲೀ ಅಥವಾ ದುಬಾರಿಯಾಗಲೀ ಆಗಿಲ್ಲ. ಆದರೂ, ಇನ್ನು LPG ಗ್ಯಾಸ್ ಸಿಲಿಂಡರ್ ಅನ್ನು ರೂ. 633.50 ರೂ.ಗೆ ಖರೀದಿಸಬಹುದು.
ಕಂಪೋಸಿಟ್ LPG ಸಿಲಿಂಡರ್ :
ಕಂಪೋಸಿಟ್ LPG ಸಿಲಿಂಡರ್ ನಲ್ಲಿ ಷ್ಟು ಗ್ಯಾಸ್ ಇದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. 14.2 ಕೆಜಿ ಗ್ಯಾಸ್ ನ ಭಾರವಾದ ಸಿಲಿಂಡರ್ ಗಿಂತಲೂ ಹಗುರವಾಗಿರುತ್ತದೆ. 14.2 ಕೆಜಿ ಗ್ಯಾಸ್ ಸಿಲಿಂಡರ್ 899.50 ರೂ.ಗೆ ಲಭ್ಯವಿದ್ದರೂ, ಕಂಪೋಸಿಟ್ LPG ಸಿಲಿಂಡರ್ (Composite Cylinder) ಅನ್ನು ಕೇವಲ 633.50 ರೂ.ಗೆ ಭರ್ತಿ ಮಾಡಬಹುದು. 5 ಕೆಜಿ ಗ್ಯಾಸ್ ಹೊಂದಿರುವ ಎಲ್‌ಪಿಜಿ ಕಾಂಪೋಸಿಟ್ ಸಿಲಿಂಡರ್ ಅನ್ನು ಕೇವಲ 502 ರೂಗಳಿಗೆ ಮರುಪೂರಣ ಮಾಡಲಾಗುತ್ತದೆ. 10 ಕೆಜಿ ಎಲ್ಪಿಜಿ ಕಾಂಪೋಸಿಟ್ ಸಿಲಿಂಡರ್ ತುಂಬಲು, ಕೇವಲ 633.50 ರೂ. (LPG Price) ಪಾವತಿಸಬೇಕಾಗುತ್ತದೆ.
ಹೊಂದಿರುವುದು ಗಮನಿಸಬೇಕಾದ ಸಂಗತಿ. ಮೊದಲ ಹಂತದಲ್ಲಿ, ಈ ಸಿಲಿಂಡರ್ ಮೈಸೂರು (Mysore), ದೆಹಲಿ, ಬನಾರಸ್, ಪ್ರಯಾಗರಾಜ್, ಫರಿದಾಬಾದ್, ಗುರುಗ್ರಾಮ್, ಜೈಪುರ, ಹೈದರಾಬಾದ್, ಜಲಂಧರ್, ಜಮ್‌ಶೆಡ್‌ಪುರ, ಪಾಟ್ನಾ, ಲುಧಿಯಾನ, ರಾಯಪುರ, ರಾಂಚಿ, ಅಹಮದಾಬಾದ್ (Ahamadabad) ಸೇರಿದಂತೆ 28 ನಗರಗಳಲ್ಲಿ ಲಭ್ಯವಿರಲಿದೆ.
ಕಂಪೋಸಿಟ್ ಸಿಲಿಂಡರ್‌ನ ವಿಶೇಷತೆ ಏನು?
ಕಂಪೋಸಿಟ್ ಸಿಲಿಂಡರ್ ಕಬ್ಬಿಣದ ಸಿಲಿಂಡರ್‌ಗಿಂತ 7 ಕೆಜಿ ಹಗುರವಾಗಿರುತ್ತದೆ. ಇದು ಮೂರು ಪದರಗಳನ್ನು ಹೊಂದಿರುತ್ತದೆ. ಪ್ರಸ್ತುತ ಬಳಸುತ್ತಿರುವ ಖಾಲಿ ಸಿಲಿಂಡರ್ 17 ಕೆಜಿ ಮತ್ತು ಗ್ಯಾಸ್ ತುಂಬಿದಾಗ ಅದು 31 ಕೆಜಿಗಿಂತ ಸ್ವಲ್ಪ ಹೆಚ್ಚು ಬೀಳುತ್ತದೆ. ಈಗ 10 ಕೆಜಿ ಕಂಪೋಸಿಟ್ ಸಿಲಿಂಡರ್ ಕೇವಲ 10 ಕೆಜಿ ಗ್ಯಾಸ್ ಅನ್ನು ಹೊಂದಿರುತ್ತದೆ.