TOP STORIES:

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರ ಸುವರ್ಣರು


ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರಸುವರ್ಣರು

ಜೀವನದಲ್ಲಿ ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭ ಮತ್ತು ಯಶಸ್ಸು ಖಂಡಿತಾ ಸಾಧ್ಯ ಎಂಬುದನ್ನುಸಾಧಿಸಿ ತೋರಿಸಿದವರು ಶೈಲೇಂದ್ರ ವೈ. ಸುವರ್ಣರಬಡತನದ ಕುಟುಂಬದಲ್ಲಿ ಬೆಳೆದರೂ ಬಡತನ ಶಾಪವಲ್ಲ, ಕಠಿಣ ಪರಿಶ್ರಮದಿಂದ ಉನ್ನತಮಟ್ಟಕ್ಕೇರಬಹುದು ಎಂಬುದನ್ನು ಸಾಧಿಸಿಇತರರಿಗೆ ಮಾದರಿಯಾಗಿ ಬೆಳೆದವರು ಸುವರ್ಣರವರು.

ಹೌದು ಎಸ್ಆರ್‌ಆರ್ ಮಸಾಲೆ ಎನ್ನುವ ಮಸಾಲೆ ಪದಾರ್ಥಗಳ ಇಂಡಸ್ಟ್ರಿ ಸ್ಥಾಪಿಸಿ ಪ್ರತಿಷ್ಠಿತ ಉದ್ಯಮಗಳ ಸಾಲಿನಲ್ಲಿ ಬೆಳೆದ ಇವರಸಾಧನೆ ಖಂಡಿತವಾಗಿಯೂ ಅನುಕರಣೀಯ.

ಇದೀಗ ಭಾರತದ ಪ್ರತಿಷ್ಠಿತ ನಿಯತಕಾಲಿಕೆ ಔಟ್‌ಲುಕ್‌ನಲ್ಲಿ ಅವರ ಇಂಡಸ್ಟ್ರಿ ಬೆಳವಣಿಗೆ ಬಗ್ಗೆ ಮುಖಪುಟದಲ್ಲಿ ಲೇಖನಪ್ರಕಟವಾಗಬೇಕಾದರೆ ಅವರ ಸಾಧನೆ ಏನು ಎಂಬುದನ್ನು ನಾವು ಮನಗಾಣಬೇಕು.

ಕೇವಲ ಉದ್ದಿಮೆ ಮಾತ್ರವಲ್ಲದೇ, ಸಮಾಜಮುಖಿ ಕಾರ್ಯದಲ್ಲಿ ತೊಡಿಸಿಕೊಳ್ಳುತ್ತ, ತನ್ನ ಉದ್ಯಮದ ಒಂದಷ್ಟು ಪಾಲನ್ನುಸಮಾಜದ ಅಶಕ್ತರು, ಬಡವರು, ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಮೂಲಕ ಸಮಾಸೇವೆ ಜತೆಗೆ ಅನೇಕ ಸಮಾಜಮುಖಿ ಕಾರ್ಯಮಾಡುವ ಸಂಘಟನೆಗಳೊಂದಿಗೆ ಸಕ್ರಿಯರಾಗಿತೊಡಗಿಸಿಕೊಂಡು, ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿರುವ ಇವರುನಿಜವಾಗಿಯೂ ಎಲ್ಲರಿಗೂ ಮಾದರಿ.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವದಂತೆ ಜೀವನ ರೂಪಿಸಿಕೊಂಡು, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರವ್ಯಕ್ತಿತವನ್ನು ಅಳವಡಿಸಿಕೊಂಡು, ಸಮಾಜದ ಹಿರಿಯರು ಮತ್ತು ಕಿರಿಯರೊಂದಿಗೆ ಆತ್ಮೀಯರಾಗಿದ್ದುಕೊಂಡು ಸ್ನೇಹಜೀವಿಎನಿಸಿಕೊಂಡವರು.

ಇವರ ಉದ್ದಿಮೆ ಇನ್ನಷ್ಟು ಉನ್ನತಮಟ್ಟಕ್ಕೇರಿ ಮತ್ತಷ್ಟು ಸಮಾಜಮುಖಿ ಕಾರ್ಯದಲ್ಲಿ ತೊಡಗುವಂತೆ ದೇವರು ಅನುಗ್ರಹ ಕರುಣಿಸಲಿಎಂದು ಆಶಿಸೋಣ.

ಪದ್ಮರಾಜ್ ಆರ್.

ಕೋಶಾಧಿಕಾರಿ, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ

ಅಧ್ಯಕ್ಷರು ಗುರುಬೆಳದಿಂಗಳು ಫೌಂಡೇಶನ್

ನೋಟರಿ ಮತ್ತು ನ್ಯಾಯವಾದಿಗಳು ಮಂಗಳೂರು


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »