ಕೋಟಿ ಚೆನ್ನಯ್ಯರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಎಂಬ ತಮ್ಮ ಹೇಳಿಕೆಯ ವಿಚಾರವಾಗಿ ಮಾತನಾಡಿ ಅವರು, ”ತುಳುನಾಡು ಗಂಭೀರ ಆಲೋಚನೆ ಮಾಡಬೇಕು. ನನ್ನ ಪ್ರಕಾರ ಕೋಟಿ ಚೆನ್ನಯ್ಯರು ತುಳುನಾಡಿನಲ್ಲಿ ಭೂಮಿಯ ಹಕ್ಕು, ಜಾತಿ ತಾರತಮ್ಯದ ವಿರುದ್ದ ಹೋರಾಡಿದವರು.
ಅವರು ಕಟ್ಟಿದ ಗರಡಿ, ಸೈನ್ಯದಲ್ಲಿ ಎಲ್ಲಾ ಜಾತಿ, ಧರ್ಮದವರು ಇದ್ದರು. ಅವರು ಕೇವಲ ಬಿಲ್ಲವ ಜಾತಿಗೆ ಸೀಮಿತವಾಗದೆ, ಇಡೀ ತುಳಿತಕ್ಕೆ ಉಳಿದಾದ ಸಮಸ್ಯೆ ಹಾಗೂ ಊಳಿಗಮಾನ್ಯ ವಿರುದ್ದ ಹೋರಾಡಿದರು. ಕೋಟಿ ಚೆನ್ನಯ್ಯರ ಬಗ್ಗೆ ಅಭಿಮಾನ ಹೊಂದಿರುವವರು, ಅಸಮಾನತೆ ವಿರುದ್ದ ಧ್ವನಿ ಎತ್ತಬೇಕು.
ಕೋಟಿ ಚೆನ್ನಯ್ಯರು ಆರಾಧ್ಯರೂ ಮಾತ್ರವಲ್ಲ ಅನುಕರಣೀಯರು. ಅವರ ಅನುಕರಣೆ ಮಾಡಬೇಕು. ಕೋಟಿ ಚೆನ್ನಯ್ಯರನ್ನು ಬರೀ ಬಿಲ್ಲವರಾಗಿ ನೋಡಬಾರದು, ಅವರು ಎಲ್ಲರಿಗಾಗಿ ಹೋರಾಡಿದವರು” ಎಂದು ಹೇಳಿದರು.