ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಇಂದು ಗುಜರಾತಿನ ಉದ್ಯಮಿ, ರಾಷ್ಟ್ರದ ಬಿಲ್ಲವರ ಹಿರಿಯ ನೇತಾರರು ಗುಜರಾತ್ ಬಿಲ್ಲವ ಸಂಘವನ್ನು ಕಟ್ಟಿ ಬೆಳೆಸಿದ ಸ್ಥಾಪಕ ಅಧ್ಯಕ್ಷರು ಆದ ಶ್ರೀಯುತ ದಯಾನಂದ ಬೋಂಟ್ರ ರವರು ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು.
ಕ್ಷೇತ್ರದ ಶಕ್ತಿಗಳ ದರ್ಶನ ಪಡೆದು. ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲಸಗಳನ್ನು ವೀಕ್ಷಿಸಿ ಸಂತೋಷ ಪಟ್ಟು ಅನ್ನಸಂತರ್ಪಣೆ ಸೇವೆಗೆ ಇಂದು ಸುಮಾರು 25,000/ ರೂ ಮೊತ್ತದ ವಿಶೇಷ ಅನುದಾನವನ್ನು ನೀಡಿದರು.ಈ ಹಿಂದೆಯೂ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಕ್ಷೇತ್ರದ ಕೊಡಿಮರದ ಸುಮಾರು 5ಲಕ್ಷ ವೆಚ್ಚದ ತಾಮ್ರದ ಹೊದಿಕೆಯ ಸೇವಾ ಕರ್ತರು ಆಗಿರುತ್ತಾರೆ.
ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಜಯಂತ್ ನಡುಬೈಲು ಹಾಗೂ ಸಿಬ್ಬಂದಿಗಳು ಶ್ರೀಯುತರನ್ನು ಪ್ರೀತಿಯಿಂದ ಸ್ವಾಗತಿಸಿದರು.