ಜನ ಮೆಚ್ಚುಗೆ ಗಳಿದ “ತುಳುನಾಡ ಬೀರುವೆರ್” , ಕೊಡೆ – ಇನಿ – ಎಲ್ಲೆ , ವಿಶಿಷ್ಟ ಸಂವಾದದ *ಆಟಿದ ಕೂಟ* ಕಾರ್ಯಕ್ರಮ
ಬಿಲ್ಲವ ಸಂಘ ಮಂಗಳಾದೇವಿ (ರಿ)ಮಂಗಳೂರು
ವತಿಯಿಂದ ಇದೇ 23-07-2023 ನೆ ಆದಿತ್ಯವಾರ ರಮಾ – ಲಕ್ಷ್ಮಿ ನಾರಯಣ ಕನ್ವೆನ್ ಷನ್ ಹಾಲ್
ನಲ್ಲಿ ” *ಆಟಿದ ಕೂಟ* “, ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮ ನಿರ್ದೇಶಕರಾದ ಶ್ರೀ ರೋಹಿದಾಸ್ ನೇತ್ರತ್ವದಲ್ಲಿನಿರ್ಮಾಣವಾದ ಅತ್ತಾವರ ಸಾಹುಕಾರ್ ಮೋನಪ್ಪ ಪೂಜಾರಿ ಬ್ರಹತ್ ಗುತ್ತು ಮನೆ ವೇದಿಕೆಯಲ್ಲಿ , ” *ತುಳು ನಾಡ ಬಿರುವೇರ್, ಕೋಡೆ – ಇನಿ – ಎಲ್ಲೆ* ಸಂವಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ನಾಟಿ ವೈದ್ಯ ಉಗಪ್ಪ ಪೂಜಾರಿ ಶ್ರೀ ವೈಧ್ಯನಾಥ, ಭಂಡಾರ ಮನೆಪಾವೂರು, ವಿದ್ವತ್ ಲೋಕೇಶ್ ಶಾಂತಿ ತಂತ್ರಿವರ್ಯರು,
ಶ್ರೀಮತಿ ನಮಿತಾ ಶ್ಯಾಮ್ ಸದಸ್ಯರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ ಶೈಲೇಶ್ ಬಿರ್ವ ಆಗತ್ತಾಡಿ, ಉಪ್ಪಿನಂಗಡಿ,ಶ್ರೀ ದಿನೇಶ್ ಕುಮಾರ್ ರಾಯಿ ಸಮನ್ವಯ ಕಾರರು,ಶ್ರೀ ವಿನ್ಯಾಸ ಪೂಜಾರಿವಾಮಂಜೂರು ಯುವ ಕಲಾವಿದರು ವಾಮಂಜೂರು ರವರು ಭಾಗವಹಿಸಿದ್ದು.ತುಳುನಾಡ ಬಿಲ್ಲವರ ಇರುವಿಕೆ ಮತ್ತು ವಾಸ್ತವಿಕವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.ಕಾರ್ಯಕ್ರಮ ಸಂಯೋಜಕರಾದ ದಿನೇಶ್ ಕುಮಾರ್ ರಾಯಿ ,ಬಿಲ್ಲವರ ಹುಟ್ಟುಮೂಲ ಕಸಬು,ನಡೆ ನುಡಿ, ಆಚಾರ ವಿಚಾರದ ಬಗ್ಗೆ ಗಮನ ಹರಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು,ಶ್ರೀ ಶೈಲೇಶ್ ಬೀರ್ವಆಗತ್ತಾಡಿ, ದೈವಾರಾಧನೆಯ ಚೌಕಟ್ಟಿನಲ್ಲಿ ಬಿಲ್ಲವರ ಪಾತ್ರವನ್ನು ಸವಿಸ್ತಾರವಾಗಿ ವಿವರಿಸಿದರೆ, ಶ್ರೀ ವೇದಮೂರ್ತಿ ಲೋಕೇಶ್ ಶಾಂತಿನಾರಯಣ ಗುರುಗಳ ಬಗ್ಗೆ ಬೆಳಕು ಚೆಲ್ಲಿದರೆ,ನಾಟಿ ವೈದ್ಯರು ಉಗ್ಗಪ್ಪಾ ಪೂಜಾರಿ ಬೈದ್ಯರ ಕುಲ ವೈಧ್ಯತನದ ಬಗ್ಗೆವಿವರಿಸಿದರು.ಬಿಲ್ಲವ ಮಹಿಳೆಯರ ಪದ್ಧತಿ, ಆಚಾರ ವಿಚಾರಗಳ ಬಗ್ಗೆ ನಮಿತಾ ಶ್ಯಾಮ್ ಮಾತನಾಡಿದರೆ,ಬಿಲ್ಲವ ಯುವಕರು ಪ್ರಸಕ್ತದಿನಗಳಲ್ಲಿ ಜಾಗ್ರತರಾಗಬೇಕೆಂದು ತಮ್ಮ ವಾದವನ್ನು ಮಂಡಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ವೇದ ಮೂರ್ತಿ ಲೋಕೇಶ್ಶಾಂತಿ,ಪ್ರಧಾನ ಭಾಷಣಕಾರರಾದ ಕಮಲಾಕ್ಷ ಗಂಧಕಾಡು ದೈವನರ್ತಕರು“ನಾರಾಯಣ ಗುರುಗಳು ನಮಗೆಲ್ಲರಿಗೂ ಆದರ್ಶರು, ಗುರು ಪ್ರಧಾನರು ಎಂದು ನುಡಿದರು,ಸುನಿಲ್ ಪೂಜಾರಿ ಕಬೇತ್ತಿ ಗುತ್ತು ” ಬಿಲ್ಲವ ಸಮಾಜದ ಒಗ್ಗಟ್ಟಿ ನಾವೆಲ್ಲರು ಶ್ರಮಿಸಬೇಕುಎಂದು ನುಡಿದರು ,ಶ್ರೀ ಜಯಂತ್ ಪೂಜಾರಿ ಮುಡಾಯಿ ಗುತ್ತು ಪೂಜಾರಿ ಮನೆ ಬಾಬುಗುಡ್ಡೆಶ್ರೀ ಪರಿಕ್ಷಿತ್ ರೈ ಮಾಲಕರು ರಮಾ – ಲಕ್ಷ್ಮೀನಾರಾಯಣ
ಕನ್ವೆನ್ಷನ್ ಹಾಲ್,,ಶ್ರೀ ಕುಮಾರ್ ಅಧ್ಯಕ್ಷರು ಬಿಲ್ಲವ ಸಂಘ ಇರುವೈಲು, ಶ್ರೀಮತಿ ಮಮತಾ ಕೇಶವ್ ಸಮಾಜ ಸೇವಕಿ ಅತಿಥಿಗಳಾಗಿದ್ದು . ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ ಪ್ರಸ್ತಾವಿಕ ಭಾಷಣ ಮಾಡಿದರು,ಲಲಿತಾ.B ಮತ್ತು ಪ್ರೀತಿಪ್ರಮೋದ್ ,ದೀಪಿಕಾ ಮನೋಜ್,ರೋಗಿದಾಸ್ ಉಪಸ್ಥಿತರಿದ್ದು ಪ್ರಧಾನ ಕಾರ್ಯದರ್ಶಿ ರಮಾನಂದ ಪೂಜಾರಿ ವಂದಿಸಿದರು. ಪ್ರತಿಷ್ಠಿತ ಬಿಲ್ಲವ ವಾರಿಯರ್ಸ್ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಿತು ಬಿಲ್ಲವ ವಾರಿಯರ್ಸ್ ವೆಬ್ ಸೈಟ್, ಫೇಸ್ ಬುಕ್ಪುಟದಲ್ಲಿ ನೇರ ಪ್ರಸಾರವಾಯಿತು