ಮಂಗಳೂರಿನ ಹೆಸರಾಂತ ಉದ್ಯಮಿಗಳು, ಮಸಾಲ ಪದಾರ್ಥಗಳ ಉತ್ಪಾದನೆಯಲ್ಲಿ ಅಂತರಾಷ್ಟ್ರೀಯ ಖ್ಯಾತಿಗೆ ಪಾತ್ರರಾದ ಇವರು ಗುಣಮಟ್ಟದ ಉತ್ಪಾದನೆಗೆ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಕೈಗಾರಿಕಾ ಸಂಸ್ಥೆ SRR ಮಸಾಲ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ.
ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು, ಗುರು ಚಾರಿಟೇಬಲ್ ಟ್ರಸ್ಟ್ ಇದರ ನಿಕಟ ಪೂರ್ವ ಅಧ್ಯಕ್ಷರು, ಯೆಲ್ಲಪ್ಪ ಸುವರ್ಣ ಮುಲ್ಕಿ ಹಾಗೂ ಲೀಲಾವತಿ ಯೆಲ್ಲಪ್ಪ ಸುವರ್ಣ ಇವರ ಸ್ಮರಣಾರ್ಥವಾಗಿ ಕುಟುಂಬಸ್ಥರಾದ ಜಿತೇಂದ್ರ ಸುವರ್ಣ ಮತ್ತು ರೋಹಿತ್ ಸನಿಲ್ ಕುವೈಟ್ ಇವರ ಜೊತೆಗೂಡಿ ಪ್ರತೀ ವರ್ಷ 5 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು ಅರ್ಹ ವಿದ್ಯಾರ್ಥಿ ಗಳಿಗೆ ನೀಡಿ ಜನಪರವಾಗಿ ಯೋಚನೆ ಮಾಡುವ ಮಾನವೀಯ ಹೃದಯದ ಶೈಲೇಂದ್ರ ಸುವರ್ಣರು ಶ್ರೀ ನಾರಾಯಣ ಗುರುಗಳು ಮತ್ತು ಬಿ. ಜನಾರ್ಧನ ಪೂಜಾರಿ ಯವರ ಅನುಯಾಯಿಗಳು.
✍ ರಾಜೇಂದ್ರ ಚಿಲಿಂಬಿ.