TOP STORIES:

ದೆಹಲಿಯಲ್ಲಿ ಬಿ.ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದಾಗ


ನನಗೆ ದೆಹಲಿಗೆ ಹೋಗುವ ಅವಕಾಶ ಸಿಕ್ಕಿತು 2006 ರಲ್ಲಿ. ಆಗ ನಾನು ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಸದಸ್ಯನಾಗಿದ್ದೆ. ಅಮೇರಿಕದ ಸಾಂಸ್ಕೃತಿಕ ಸಂಘದವರಿಗೆ ನಮ್ಮ ದೈವಾರಾಧನೆ ಕುರಿತು ತಿಳಿಸುವ ಜವಾಬ್ದಾರಿಯಿತ್ತು. ಅದಕ್ಕಾಗಿ ತುಳುನಾಡಿನಕೋಲ ಹೇಗಿರುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಉದ್ದೇಶ. ಅದಕ್ಕಾಗಿ ತುಳು ಸಾಹಿತ್ಯ ಅಕಾಡೆಮಿಯಿಂದ ತಂಡವನ್ನುದೆಹಲಿಗೆ ಒಯ್ಯುವ ಹೊಣೆ ನನಗೆ. ಸರಿ ನನ್ನೊಂದಿಗೆ ನಾಲ್ಕು ಜನರ ತಂಡವಿತ್ತು. ನಾವು ದೆಹಲಿ ತಲುಪಿ ಕರ್ನಾಟಕ ಸಂಘದಲ್ಲಿಉಳಿದುಕೊಂಡಿದ್ದೆ.

ಒಂದು ದಿನ ಮುಂಜಾನೆ ನಾನು ಕುತೂಹಲಕ್ಕಾಗಿ ದೆಹಲಿಯಲ್ಲಿದ್ದ ಮತ್ತು ಆಗ ರಾಜ್ಯ ಸಭಾ ಸದಸ್ಯರಾಗಿದ್ದ ಬಿ.ಜನಾರ್ಧನಪೂಜಾರಿಯವರಿಗೆ ಫೋನ್ ಮಾಡಿದೆ. ಆಕಡೆಯಿಂದ ದೂರವಾಣಿ ಕರೆ ತೆಗೆದುಕೊಂಡರು. ‘ಸಾರ್ ನಾನು ಚಿದಂಬರಎಂದೆ. ‘ ಹೋಎಲ್ಲಿದ್ದೀರಿಪ್ರಶ್ನೆ ಬಂತು. ‘ನಾನು ದೆಹಲಿಗೆ ಬಂದೆಎಂದೆ. ‘ಯಾವಾಗ ಬಂದಿರಿಎಂದರು. ‘ ಸಾರ್ ಮೂರು ದಿನವಾಯ್ತುಎಂದೆ. ‘ಛೇ ಛೇ ಮೂರು ದಿನವಾದರೂ ಯಾಕೆ ನನಗೆ ಹೇಳಲಿಲ್ಲ ?, ಯಾವಾಗ ಹೋಗುತ್ತೀರಿ ?’ ಮತ್ತೆ ಪ್ರಶ್ನೆ. ‘ಇಲ್ಲ ಸಾರ್ ನಾಳೆಹೋಗುತ್ತೀನಿ’. ‘ ಹಾಗಾದರೆ ಈಗಲೇ ಬನ್ನಿ ನನ್ನ ಮನೆಗೆಎಂದವರೇ ಮನೆಯ ವಿಳಾಸ ಹೇಳಿದರು.‘ ಏನಾದರೂ ಸಮಸ್ಯೆಯಾದರೆಫೋನ್ ಮಾಡಿ, ಕಾಯುತ್ತೇನೆಎಂದು ಫೋನ್ ಇಟ್ಟರು.

ಈಗ ನನಗೆ ಸಮಸ್ಯೆ, ಅಲ್ಲಿಗೆ ಹೋಗುವುದು ಹೇಗೆಂದು. ಸರಿ ನಾನು ನನ್ನ ಗೆಳೆಯ ಡಾ. ಪುರುಷೋತ್ತಮ ಬಿಳಿಮಲೆ (ದೆಹಲಿಯಕರ್ನಾಟಕ ಸಂಘದ ಅಧ್ಯಕ್ಷ)ಯನ್ನು ಕೇಳಿ ವಿಳಾಸ ತಿಳಿಸಿದೆ. ಅವರು ಹೇಳಿದಂತೆ ಟ್ಯಾಕ್ಸಿ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಅವರಿಗೇ ಹೇಳಿದೆ ಟ್ಯಾಕ್ಸಿ ಮಾಡಿಕೊಡಿ ಯಾಕೆಂದರೆ ನಾನು ಕೇಳಿದರೆ ಬಾಡಿಗೆ ದುಬಾರಿ ಹೇಳಬಹುದೆಂದೆ. ಅವರೇ ತಕ್ಷಣ ಒಂದುಟ್ಯಾಕ್ಸಿಗೆ ಫೋನ್ ಮಾಡಿ ಬರಲು ಹೇಳಿದರು. ಟ್ಯಾಕ್ಸಿ ಬಂತು.

ನಾನು ಬಿ.ಜನಾರ್ಧನ ಪೂಜಾರಿ ಮನೆಗೆ ಹೋಗಬೇಕು ಪೂಜಾರಿಜೀ ಯೇ ಬಹುತ್ ಅಚ್ಛಾ ಆಧ್ಮಿ, ವೋ ತೋತೋ ಸಬ್ಕೋಮಾಲೂಮ್ ಹೈಎಂದ ಟ್ಯಾಕ್ಸಿ ಡ್ರೈವರ್. ನನಗೆ ಅಚ್ಚರಿ. ಜನಾರ್ಧನ ಪೂಜಾರಿ ಮನುಷ್ಯನಿಗೂ ಪರಿಚಯವಲ್ಲಾ ಎಂದು.

ಟ್ಯಾಕ್ಸಿ ಹೊರಟಿತು ಪೂಜಾರಿ ಮನೆಗೆ. ಟ್ಯಾಕ್ಸಿ ಡ್ರೈವರ್ ಗೂ ಯಾಕೋ ಸಂಶವಾಯಿತು. ಅಲ್ಲಿದ್ದವರನ್ನು ವಿಚಾರಿಸಿದ. ಆತ ಬಂದಜಾಗ ಸರಿಯಾಗಿತ್ತು. ಮತ್ತೆ ಆತ ನನಗೆ ಹೇಳಿದ ನಾನು ತುಂಬಾ ದಿನವಾಯ್ತು ಬಂದು. ಅದಕಾಗಿಯೇ ಅಲ್ಲೇ ಇದ್ದಾರೋ ಬದಲಾಗಿಬೇರೆ ಎಲ್ಲಿಗಾದರೂ ಹೋಗಿದ್ದಾರೋ ಎಂದು ಕೇಳಿದೆ, ನಿಮಗೆ ತೊಂದರೆಯಾಗಲಿಲ್ಲ ತಾನೇ ಕೇಳಿದ. ನಾನು ಇಲ್ಲ ಎಂದೆ. ಟ್ಯಾಕ್ಸಿಯನ್ನು ಸರಿಯಾಗಿ ಪೂಜಾರಿಯವರಿದ್ದ ಮನೆಯ ಮುಂದೆ ನಿಲ್ಲಿಸಿ ಗೇಟ್ ತೆಗೆದು ಹೋಗಿ ಎಂದ.

ನಾನು ಅಳುಕುತ್ತಲೇ ನಿಧಾನವಾಗಿ ಗೇಟ್ ತೆಗೆದುಕೊಂಡು ಹೋದೆ. ಅದು ದೊಡ್ಡ ಮನೆ. ನಾಲ್ಕು ಸುತ್ತಲೂ ಕಾಂಪೌಂಡ್. ವಿಶಾಲವಾದ ಜಾಗದಲ್ಲಿತ್ತು ಮನೆ. ಹೊರಗಿನಿಂದ ಗಲಾಟೆ, ಜನಜಂಗುಳಿಯಿಲ್ಲ, ಪ್ರಶಾಂತವಾದ ವಾತಾವರಣ. ಸಮಯ ಬೆಳಿಗ್ಗೆ 11 ಗಂಟೆಯಾಗಿತ್ತು. ನಾನು ಮನೆಯ ಕಾಲಿಂಗ್ ಬೆಲ್ ಒತ್ತಿದೆ. ಸ್ವಲ್ಪ ಸಮಯದಲ್ಲಿ ಬಾಗಿಲು ತೆರೆದುಕೊಂಡಿತು. ‘ಕ್ಯಾ ಚಾಯಿಯೇಪ್ರಶ್ನೆಓರ್ವ ಅಪರಿಚಿತ ವ್ಯಕ್ತಿಯಿಂದ. ನಾನು ಬಿ.ಜನಾರ್ಧನ ಪೂಜಾರಿ ಕೋ ಮಿಲ್ನೇಕೇಲಿಯೇ ಆಯೇಎಂದೆ. ತಕ್ಷಣ ಒಳಗೆ ಬರಲುಹೇಳಿದರು. ಅವರು ಸ್ನಾನ ಮಾಡುತ್ತಿದ್ದಾರೆ, ಕೂತುಕೊಳ್ಳಿ ಎಂದು ಒಳಗೆ ಹೋದರು. ಸ್ವಲ್ಪ ಹೊತ್ತಲ್ಲಿ ಬಂದುಚಹಾ, ಕಾಫಿ ಏನುತೆಗೆದುಕೊಳ್ಳುತ್ತೀರಿಎಂದರು. ಬೇಡಾ ಬಿಡಿ ಎಂದೆ, ಆದರೂ ಒತ್ತಾಯ ಮಾಡಿದಾಗ ಚಹಾ ಎಂದೆ. ಸ್ವಲ್ಪಹೊತ್ತಲ್ಲಿ ಚಹಾ ಬಂತು. ಕುಡಿದು ಅಲ್ಲಿದ್ದ ಪೇಪರ್ ನೋಡುತ್ತಾ ಕುಳಿತೆ.

ಸ್ವಲ್ಪ ಸಮಯದ ಬಳಿಕ ಬಿ.ಜನಾರ್ಧನ ಪೂಜಾರಿ ಬಂದರು . ಶುದ್ಧ ಬಿಳಿ ಪ್ಯಾಂಟ್, ಬಿಳಿ ಅಂಗಿ ಧರಿಸಿದ್ದರು. ಕನ್ನಡವನ್ನುಬಟ್ಟೆಯಿಂದ ಉಜ್ಜಿಕೊಂಡು ನಗುತ್ತಲೇ ಬಂದರು. ‘ದಾನೆಗೇ ಬರಿಯೆರೆ ಕಷ್ಟ ಆಂಡ್’ (ಏನಂತೆ ಬರಲು ಕಷ್ಟವಾಯಿತೇ). ನಾನುಇಲ್ಲವೆಂದೆ. ಆಮೇಲೆ ಪೂಜಾರಿಯವರಿಂದ ಚಹಾ ಕುಡಿಯಲು ಒತ್ತಾಯ. ನಾನು ಕುಡಿದೆ ಎಂದರು ಒಪ್ಪಲಿಲ್ಲ ಮತ್ತೆ ಕುಡಿಯಿರಿಎಂದು ಚಹಾ ತರಿಸಿದರು.

ಹಾಗೆ ಮಾತಾಡುತ್ತಾ ಕುಳಿತೆವು. ಸ್ಥಳೀಯ ರಾಜಕೀಯದ ಕುರಿತೇ ಮಾತು. ನಾವಿಬ್ಬರೇ ಕುಳಿತುಕೊಂಡಿದ್ದೆವು, ಅಲ್ಲಿಗೆ ಬೇರೆ ಯಾರೂಬರಲಿಲ್ಲ. ಸದ್ದುಗದ್ದಲವಿಲ್ಲದೆ ಮಾತನಾಡಿದೆವು. ಪೂಜಾರಿ ಮಕ್ಕಳ ಕುರಿತು ವಿಚಾರಿಸಿದರು. ಯಾಕೆ ಬಂದದ್ದು ಪ್ರಶ್ನೆಗೆ ವಿವರಿಸಿದೆ. ಸುಮಾರು ಒಂದು ಗಂಟೆ ಕಾಲ ಮಾತನಾಡಿದೆವು. ನಾನು ಹೊರಟು ನಿಂತೆ. ಪೂಜಾರಿಯವರು ಊಟ ಮಾಡಿಕೊಂಡು ಹೋಗಲುಒತ್ತಾಯಿಸಿದರು. ನಾನು ಬೇಡವೆಂದು ಹೇಳಿ ಮತ್ತೆ ಅಮೇರಿಕಾ ತಂಡವನ್ನು ಭೇಟಿ ಮಾಡುವ ನೆಪಕೊಟ್ಟು ಹೊರಡಲು ಬಯಸಿದೆ.

ಸರಿ ಪೂಜಾರಿಯವರು ಸಮ್ಮತಿಸಿದರು. ನಾನಿನ್ನು ಬರ್ತ್ತೇನೆ ಎಂದು ಕೈಮುಗಿದೆ. ‘ಇಲ್ಲಾ ಇಲ್ಲಾ ಬನ್ನಿಎನ್ನುತ್ತಾ ನನ್ನೊಂದಿಗೆ ಗೇಟ್ವರೆಗೂ ಬರಲು ಸಜ್ಜಾದರು. ನಾನುಬೇಡ ಸಾರ್ ನಾನು ಹೊಗ್ತೇನೆಎಂದರು ಕೇಳಲಿಲ್ಲ. ‘ನೀವು ನನ್ನ ಗೆಸ್ಟ್ ಬನ್ನಿಎನ್ನುತ್ತಾನಡೆದುಕೊಂಡು ಬಂದು ಅವರೇ ಗೇಟ್ ತೆಗೆದು ಟ್ಯಾಕ್ಸಿ ತನಕ ಬಂದು ನನ್ನ ಟ್ಯಾಕ್ಸಿ ಅಲ್ಲಿಂದ ಹೊರಟ ಮೇಲೆ ಗೇಟ್ ಹಾಕಿಕೊಂಡರು.

ಒಬ್ಬ ಕೇಂದ್ರ ಸಚಿವರಾಗಿದ್ದವರು ಹೇಗೆ ನಡೆದುಕೊಂಡರು ಎನ್ನುವುದನ್ನು ತಿಳಿಸಲು ಇಷ್ಟೆಲ್ಲಾ ಹೇಳಬೇಕಾಯಿತು. ಪೂಜಾರಿಯವರುಮುಂಗೋಪಿ, ಸಿಡುಕಿನವರು ಎನ್ನುವ ಅಭಿಪ್ರಾಯ ಎಷ್ಟು ಸಹಜ ಮತ್ತು ಎಷ್ಟು ಸುಳ್ಳು ಎನ್ನುವುದೇ ನನಗೆ ಅರ್ಥವಾಗಲಿಲ್ಲ. ಸಿಡುಕಿನ ವ್ಯಕ್ತಿಯಲ್ಲೂ ಎಂಥ ಗುಣಗಳಿರುತ್ತವೆ, ಎಷ್ಟು ಮನುಷ್ಯತ್ವ ಇರುತ್ತದೆ ಅಂದುಕೊಂಡೆ. ನನ್ನನ್ನು ಮನೆಯಿಂದ ಬೀಳ್ಕೊಟ್ಟಾಗನನ್ನೊಂದಿಗೆ ಬಂದ ಬಿ.ಜನಾರ್ಧನ ಪೂಜಾರಿಯವರಲ್ಲೂ ಇಷ್ಟೊಂದು ಸೌಜನ್ಯವಿದೆಯಲ್ಲ ಎಂದುಕೊಂಡೆ.

ಚಿದಂಬರ ಬೈಕಂಪಾಡಿ


Related Posts

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »