ಉಳ್ಳಾಲ ನಿವಾಸಿ ಪ್ರತಾಪ್ ಗುರುಸ್ವಾಮಿ ಇವರು ಕೆಲಸ ಮಾಡುತ್ತಿರುವಾಗ ಕಾಲು ಜಾರಿ 15 ಅಡಿ ಎತ್ತರದಿಂದ ಬಿದ್ದು ಎದೆಯಕೆಲಭಾಗದಲ್ಲಿ ಎಲುಬುಗಳಿಗೆ ಪೆಟ್ಟಾಗಿದ್ದು ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ತೀರಾ ಬಡಕುಟುಂಬ ಆಗಿರುವ ಇವರಿಗೆ,ಇವರಿಂದಲೇ ಜೀವನ ಸಾಗಬೇಕಾಗಿದ್ದರಿಂದ ಇವರು ನಮ್ಮ ತಂಡದ ಸಹಾಯಹಸ್ತಕ್ಕೆಮೊರೆಹೋಗಿರುತ್ತಾರೆ.ಇವರಿಗೆ ನಮ್ಮ ತಂಡದ ವತಿಯಿಂದ 20,000/- ಯನ್ನು ಧನ ಸಹಾಯವನ್ನು ನೀಡಲಾಯಿತು.ಧನಸಹಾಯಕ್ಕೆ ಸಹಕರಿಸಿದ ಎಲ್ಲಾ ಸೇವಾ ಮಾಣಿಕ್ಯರಿಗೆ ನಮ್ಮ ತಂಡದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು. ಈ ಸೇವಾಯೋಜನೆಯನ್ನು ಬಹುಮುಖ ಪ್ರತಿಭೆ ರಶ್ಮಿ ಸನಿಲ್ ದಂಪತಿಗಳು ಇವರ ಕೈಯಿಂದ ಈ ಬಡ ಕುಟುಂಬಕ್ಕೆ ಹಸ್ತಾಂತರಿಸಲಾಯಿತು
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಇದರ ಸಕ್ರಿಯ ಸದಸ್ಯರು ಆಗಿರುವ ಶರತ್ ಪದವಿನಂಗಡಿ ಹಾಗೂ ಸಂಗಡಿಗರುಹಾಗೂ ತಂಡದ ಉಪಾಧ್ಯಕ್ಷರು ಸಂತೋಷ್ ಹೊಕ್ಕಾಡಿಗೋಳಿ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಅಂಡಿಂಜೆ ಕೋಶಾಧಿಕಾರಿ ದೀಕ್ಷಿತ್ದೇವಾಡಿಗ, ಪ್ರಚಾರ ಪ್ರಮುಖ್ ನಾಗರಾಜ್ ಕುಲಾಲ್ ಹಾಗೂ ಸದಸ್ಯರು ಆದ ಕೃಷ್ಣ ಸುವರ್ಣ,ಶಿವರಾಜ್ ಬಿರ್ವ ಬಿ.ಸಿ ರೋಡ್, ವಿನಯ್ ಕುಲಾಲ್ ಮಡಂತ್ಯಾರ್, ಲೋಕೇಶ್ ಅಮೀನ್ ಬಿ.ಸಿ ರೋಡ್,ಇವರು ಭಾಗಿಯಾಗಿದ್ದರು
ಬಡವರ ಸೇವೆಯೇ ದೇವರ ಸೇವೆ