ಈ ದಿನ ಶುಭಮುಂಜಾನೆ ಪರಮಪೂಜ್ಯ ಸ್ವಾಮೀಜಿಯವರು ಸಚಿವರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಭೇಟಿ. ಗುರುಗಳಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಪೂಜಾರಿ.
ಹಾವೇರಿಯಲ್ಲಿ ನಡೆದ ಆರ್ಯ ಈಡಿಗ ರಾಷ್ಟ್ರೀಯ ಮಂಡಳಿಯ ಆಯ್ದ ಪ್ರತಿನಿಧಿಗಳ ಸಭೆ ಯಲ್ಲಿ ತೆಗೆದುಕೊಂಡ ನಿರ್ಣಯದಂತೆನಮ್ಮ ಸಮಾಜಕ್ಕೆ( ಆರ್ಯ ಈಡಿಗ) ನಿಗಮ ಮಂಡಳಿ ಘೋಷಣೆ ಮತ್ತು ಕುಲಕಸುಬು ಕಳೆದುಕೊಂಡಿರುವ ನಮ್ಮ ಸಮಾಜದಸಂಕಷ್ಟಗಳಿಗೆ ಪರ್ಯಾಯ ವ್ಯವಸ್ಥೆ ಬಗ್ಗೆ ನಮ್ಮ ಸಮುದಾಯದ 7 ಶಾಸಕರು 2 ಮಂತ್ರಿಗಳಿಗೆ ಕಡೆಯ ಮನವಿ ಸಲ್ಲಿಸುವನಿರ್ಣಯದಂತೆ ಇಂದು ಪೂಜ್ಯ ಸ್ವಾಮೀಜಿಯವರು ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬೇಟಿ ಮಾಡಿ ಮನವಿಸಲ್ಲಿಸಿ ಚರ್ಚೆ ನಡೆಸಲಾಯಿತು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಪೂಜ್ಯರಿಗೆ ತಮ್ಮ ಪ್ರಯತ್ನಕ್ಕೆ ಪ್ರತಿಫಲ ಅತಿ ಶೀಘ್ರದಲ್ಲಿ ಸಿಗುವುದಾಗಿ ಮತ್ತು ಎಲ್ಲ ವಿಷಯಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಜೊತಗೆ ನಿನ್ನ ಸಂಜೆ ಚರ್ಚಿಸಲಾಗಿದ್ದು ಮತ್ತು ಅತಿ ಶೀಘ್ರದಲ್ಲಿ ಸಿಹಿ ಸುದ್ದಿಕೇಳಿದರೆಂದು ಗುರುಗಳಿಗೆ ಸಚಿವರು ತಿಳಿಸಿದರು.
ಈ ಸಮಯದಲ್ಲಿ ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ರಾಷ್ಟ್ರೀಯ ಕಾರ್ಯದರ್ಶಿಯಾದ ಶ್ರೀ ಬಿ. ಎಚ್ ಮಂಚೇಗೌಡಾರ್ಶ್ರೀಗಳಿಗೆ ಸಾಥ್ ನೀಡಿದರು.