ಬೆಳ್ತಂಗಡಿ ಘಟಕದಿಂದ ಚಿಣ್ಣರ ಸೇವೆ
ಬಿರುವೆರ್ ಕುಡ್ಲ (ರಿ), ಬೆಳ್ತಂಗಡಿ ಘಟಕದ 39ನೇ ವಿಶೇಷ ಸೇವಾ ಯೋಜನೆಯ ಅಂಗವಾಗಿ, ಬೆಳ್ತಂಗಡಿ ತಾಲೂಕಿನಮೇಲಂತಬೆಟ್ಟು ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಯ ಗೋಡೆಯ ಮೇಲೆ ಚಿಣ್ಣರಿಗಾಗಿ ವಿಶೇಷವಾದ ಹಾಗೂಆಕರ್ಷಣೀಯ ಚಿತ್ರ ಚಿತ್ತಾರ ಬಿಡಿಸಿಕೊಡುವ ಮೂಲಕ ಸೇವಾ ಯೋಜನೆಯನ್ನು ಅರ್ಪಿಸಲಾಯಿತು.
ಪುಟ್ಟ ಮಕ್ಕಳ ವಿಧ್ಯಾಭ್ಯಾಸಕ್ಕೆ ಪೂರಕವಾಗಿ ಭದ್ರ ಬುನಾದಿ
‘ಅಂಗನವಾಡಿ ಕೇಂದ್ರ‘ ಇದರ ಅಂದವನ್ನು ಹೆಚ್ಚಿಸಿ ವಿಶೇಷ ಮಾದರಿ ಯೋಜನೆಯನ್ನು ಮಾಡಲಾಯಿತು ಹಾಗೂ ಅಂಗನವಾಡಿಯಚಿಣ್ಣರ ಜೊತೆ ಸ್ವಲ್ಪ ಸಮಯವನ್ನು ಕಳೆಯಲಾಯಿತು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ(ರಿ).ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಕೋಶಾಧಿಕಾರಿ ಹರೀಶ್ಕೋಟ್ಯಾನ್,ಕಾರ್ಯದರ್ಶಿಯಾದ ಅರುಣ್ ಕುಮಾರ್ ಕುಕ್ಕಾವು ಸಂಚಾಲಕರಾದ ಸುರೇಂದ್ರ ಕೋಟ್ಯಾನ್,ಸಂದೇಶ್ಅನಿಲ,ದೀಕ್ಷಿತ್ ವರಕಬೆ, ಲಕ್ಷ್ಮಿಶ್ ಪೆಲತಾಡಿ, ಉಪಸ್ಥಿತರಿದ್ದರು.
✍️ ಬಿರುವೆರ್ ಕುಡ್ಲ (ರಿ).ಬೆಳ್ತಂಗಡಿ ಘಟಕ
ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ