ಬಿರುವೆರ್ ಕುಡ್ಲ(ರಿ) ಬಂಟ್ವಾಳ ಘಟಕ
ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಗಳ ವೇದವಾಕ್ಯವಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಡಿಯಲ್ಲಿ ಅಶಕ್ತರ ಪಾಲಿನ ನಂದಾದೀಪವಾಗಿ ಸಮಾಜವನ್ನು ಸುಸ್ಥಿತಿಗೆ ತರುವ ಪಣವನ್ನು ತೊಟ್ಟಿರುವ ಶ್ರೀ ಉದಯ ಪೂಜಾರಿ ನೇತೃತ್ವದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಮಂಗಳೂರು ಕರ್ನಾಟಕ ಇದರ ಹೃದಯವಂತರು-2020 ಪ್ರಶಸ್ತಿ ಪುರಸ್ಕೃತ ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ(ರಿ) ಇದರ ಅಂಗ ಸಂಸ್ಥೆಯಾದ
ಬಿರುವೆರ್ ಕುಡ್ಲ (ರಿ) ಬಂಟ್ವಾಳ ಘಟಕ
10-03-2021 ಬುಧವಾರ ಸಂಭವಿಸಿದ ಬೈಕ್ ಅಪಘಾತದಲ್ಲಿ ವಿನಯ(24 ವರ್ಷ)ಇವರಿಗೆ ತಲೆಗೆ ಪೆಟ್ಟು ಬಿದ್ದ ಕಾರಣ ಪ್ರಜ್ಞೆ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ(KS Hegde Hospital)…
ಮನೆಯಲ್ಲಿ ತೀರಾ ಬಡತನ ಇರುವುದರಿಂದ ಚಿಕಿತ್ಸಾ ವೆಚ್ಚ ಬರಿಸುವುದು ತುಂಬಾ ಕಸ್ತವಾಗಿದ್ದು
ತಂದೆ ಅನಾರೋಗ್ಯದಿಂದ ಮನೆಯಲ್ಲಿಯೇ ಇದ್ದು ಇವರೇ ಮನೆಯ ಆಧಾರಸ್ಥಂಭ ಆಗಿರುವುದರಿಂದ ಚಿಕಿತ್ಸೆಗೆ ತುಂಬಾ ಖರ್ಚು ತಗುಲಿದ್ದು ಮನೆಯವರಿಗೆ ದಿಕ್ಕು ತೋಚದಂತಾಯಿತು .
ಈ ನಿಟ್ಟಿನಲ್ಲಿ ಬಿರುವೆರ್ ಕುಡ್ಲ ಬಂಟ್ವಾಳ ಘಟಕದ ಮಾಸಿಕ ಸಭೆಯನ್ನು ಬಿ.ಸಿ.ರೋಡಿನ ಯುವವಾಹಿನಿ ಭವನದಲ್ಲಿ ನಡೆಸಿ , ಮಾಸಿಕ ಸಭೆಯಲ್ಲಿ
ಈ ಮಾಸಿಕ ಸೇವಾ ಯೋಜನೆಯನ್ನು ಅಪಘಾತಕ್ಕೊಳಗಾದ ವಿನಯ್ ಅವರ ಕುಟುಂಬಸ್ಥರಿಗೆ ನೀಡುವುದಾಗಿ ನಿರ್ಧರಿಸಿ ಅವರ ಕುಟುಂಬಕ್ಕೆ ಸಮಯ ಹಸ್ತ ಮಾಡಲಾಯಿತು.