ಬಿರುವೆರ್ ಕುಡ್ಲ(ರಿ) ಬಜಪೆ ಘಟಕ
ಸ್ಪಂದನ 54 ನೇ ಸೇವಾ ಯೋಜನೆ
ಬ್ರಹಶ್ರೀ ನಾರಾಯಣಗುರು ಸ್ವಾಮಿಗಳ ವೇದವಾಕ್ಯವಾದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದಡಿಯಲ್ಲಿ ಅಶಕ್ತರ ಪಾಲಿನ ನಂದಾದೀಪವಾಗಿ ಸಮಾಜವನ್ನು ಸುಸ್ಥಿತಿಗೆ ತರುವ ಪಣವನ್ನು ತೊಟ್ಟಿರುವ ಶ್ರೀ ಉದಯ ಪೂಜಾರಿ ನೇತ್ರತ್ವದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಮಂಗಳೂರು ಕರ್ನಾಟಕ ಇದರ ಹೃದಯವಂತರು-2020 ಪ್ರಶಸ್ತಿ ಪುರಸ್ಕೃತ ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ(ರಿ) ಇದರ ಅಂಗ ಸಂಸ್ಥೆಯಾದ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ 54ನೇ ಸೇವಾಯೋಜನೆಯಡಿಯಲ್ಲಿ ಸಹಾಯಧನವನ್ನು ದಿನಾಂಕ: 04.02.2021ನೇ ಗುರುವಾರದಂದು ಶಿಬರೂರು ನಿವಾಸಿ ಪೂವಪ್ಪ ಪೂಜಾರಿ ಇವರಿಗೆ ವೈದ್ಯಕೀಯ ನೆರವಿಗಾಗಿ ನೀಡಲಾಯಿತು.
ಪೂವಪ್ಪ ಪೂಜಾರಿ ಇವರು ಶಿಬರೂರಿನ ರಾಜೀವ ನಗರದ ನಿವಾಸಿಯಾಗಿದ್ದು, ಜನವರಿ 4ನೇ ತಾರೀಕಿನಂದು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಬಸ್ ಡಿಕ್ಕಿ ಹೊಡೆದು ತಲೆಗೆ ಗಂಭೀರ ಗಾಯಗೊಂಡು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಇವರ ಆರ್ಥಿಕ ಪರಿಸ್ಥಿತಿ ತುಂಬಾ ಸಂಕಷ್ಟದಲ್ಲಿ ಇದೆ. ಇವರ ಕುಟುಂಬ ಅತಿ ಕಡುಬಡತನದಲ್ಲಿ ಇದ್ದು ಮುಂದಿನ ಚಿಕಿತ್ಸೆಗಾಗಿ ಹಣದ ಕೊರತೆಯಿರುವುದರಿಂದ ಬಿರುವೆರ್ ಕುಡ್ಲ ಬಜಪೆ ಘಟಕಕ್ಕೆ ಸಹಾಯ ಕೋರಿ ಮನವಿ ಸಲ್ಲಿಸಿದ್ದರು. ಇವರ ಪರಿಸ್ಥಿತಿಯನ್ನು ಗಮನಿಸಿ ತಕ್ಷಣವೇ ಬಿರುವೆರ್ ಕುಡ್ಲ ಬಜಪೆ ಘಟಕದ ಸ್ಪಂದನ ತಂಡದ ಮುಖಾಂತರ ಇವರಿಗೆ ಆಸ್ಪತ್ರೆಯ ಖರ್ಚಿಗೆ ಧನಸಹಾಯ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರು ಪ್ರಶಾಂತ್ ಕುಮಾರ್ ಕೆಂಜಾರು ಕಾನ, ಕೀರ್ತನ್ ಅಮೀನ್ ಪೆರ್ಮುದೆ, ನಿರಂಜನ್ ಕರ್ಕೇರ ಪೋರ್ಕೊಡಿ, ಸಂದೇಶ್ ಶೆಟ್ಟಿ ಜೋಕಟ್ಟೆ, ಪ್ರಸಾದ್ ಬೈದ್ಯ, ಜೀವನ್ ಪೆರ್ಮುದೆ, ರಮಾನಂದ ಪೂಜಾರಿ ಕಟೀಲು, ಅಖಿಲೇಶ್ ಅಮೀನ್ ಜೋಕಟ್ಟೆ, ಮನೀಶ್ ಪೂಜಾರಿ ಜೋಕಟ್ಟೆ ಉಪಸ್ಥಿತರಿದ್ದರು.