ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಮೂಲಕ 1325Kg ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗೆ ವಿತರಣೆ..
ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶವನ್ನು ಮುಂದಿಟ್ಟುಕೊಂಡು ಯುವ ಸಮುದಾಯವನ್ನು ಜಾತಿ ಮತಬೇಧ ಮರೆತು ಸಂಘಟನೆಯಲ್ಲಿ ತೊಡಗಿಸಿಕೊಂಡು ಅಸಹಾಯಕರ ಸೇವೆ ಮಾಡುವಂತೆ ಸಂಘಟಿತರನ್ನಾಗಿ ಮಾಡುತ್ತಿರುವ ರಾಕೇಶ್ ಪೂಜಾರಿ ಅಧ್ಯಕ್ಷೆತೆಯ “ಬಿರುವೆರ್ ಕುಡ್ಲ(ರಿ)” ಸಂಘಟನೆಯ ಸ್ಥಾಪಕಾಧ್ಯಕ್ಷರಾದ, ಯುವ ನಾಯಕ “ಉದಯ್ ಪೂಜಾರಿ”ಯವರ ಜನುಮ ದಿನದಂದು(01/06/2020) “ಬೆದ್ರ ಘಟಕ”ದ ಸಂಕಲ್ಪದಂತೆ ಅಸಹಾಯಕರ ಹಸಿವನ್ನು ನೀಗಿಸುವ ಉದ್ದೇಶದಂತೆ ಮರೋಡಿಯ ಚಂದಪ್ಪ ಪೂಜಾರಿಯವರ ಹಡಿಲು ಇದ್ದ ಸುಮಾರು 4 ಎಕ್ರೆಯಷ್ಟು ಗದ್ದೆಯನ್ನು ಘಟಕದ ಉಪಾಧ್ಯಕ್ಷರಾದ “ಕೃಷ್ಣಪ್ಪ ಪೂಜಾರಿ”ಯವರ ನೇತೃತ್ವದಲ್ಲಿ ಘಟಕದ ಸದಸ್ಯರೆಲ್ಲರ ಸಹಕಾರದೊಂದಿಗೆ ಎರಡು ಹಂತಗಳಲ್ಲಿ ಸಾಗುವಳಿ ಮಾಡಿ, ಅದರಲ್ಲಿ ದೊರೆತಂತಹ ಅಕ್ಕಿಯನ್ನು ಇಂದು 53 ಫಲಾನುಭವಿಗಳನ್ನು ಗುರುತಿಸಿ ತಲಾ 25 kg ಯಂತೆ ಒಟ್ಟು 1325 KG ಅಕ್ಕಿಯನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಜಾತಿ ಮತಭೇದ ಮರೆತು ಈ ದಿನ ಸರಳವಾಗಿ ಮೂಡಬಿದ್ರೆಯ ಸಮಾಜಮಂದಿರದಲ್ಲಿ ವಿತರಿಸಲಾಯಿತು..
ಈ ನಮ್ಮ ಕಾರ್ಯವನ್ನು ಕಂಡು ಸಮಾಜಮಂದಿರದ ಆಡಳಿತ ಮಂಡಲಿಯವರು ಉಚಿತವಾಗಿ ಸಭಾಂಗಣವನ್ನು ನೀಡುವ ಮೂಲಕ ಸಹಕರಿಸಿದರು..
ನಮ್ಮ ಆಶಯದಂತೆ ಈ ಗದ್ದೆಯಲ್ಲಿ ಸಾಗುವಳಿ ಮಾಡಿ ದೊರೆತಿರುವಂತಹ ಅಕ್ಕಿಯನ್ನು ಅಸಹಾಯಕ ಕುಟುಂಬಗಳಿಗಷ್ಟೇ ಅಲ್ಲದೇ ಮೂಕ ಪ್ರಾಣಿಗಳಾದ “ಬೀದಿ ನಾಯಿಗಳಿ”ಗೆ ಪ್ರತಿನಿತ್ಯ ಅನ್ನ ನೀಡುತ್ತಿರುವ ಮಂಗಳೂರಿನ ಶ್ರೀಮತಿ “ರಜನಿ ಶೆಟ್ಟಿ” ಯವರಿಗೂ 50kg ಅಕ್ಕಿಯನ್ನು ಇತ್ತೀಚೆಗೆ ಘಟಕದ ಪರವಾಗಿ ನೀಡಿರುತ್ತೇವೆ..
ಜೊತೆಗೆ ಈ ಸಾಗುವಳಿ ಕಾರ್ಯದಲ್ಲಿ ದೊರೆತಂತಹ ಬೈ ಹುಲ್ಲನ್ನು ವೇಣೂರಿನ ಗೋಶಾಲೆ ಹಾಗೂ ಕೆಂಜಾರುವಿನ ಕಪಿಲಾ ಗೋಶಾಲೆಗಳ ಗೋವುಗಳ ಮೇವಿಗಾಗಿ ಉಚಿತವಾಗಿ ಈ ಮೊದಲೇ ನೀಡಿರುತ್ತೇವೆ..
ಈ ಕೃಷಿಕಾರ್ಯಕ್ಕೆ ಮುಂದಾದ ದಿನದಿಂದ ಇವತ್ತಿನವೆರೆಗೂ ನಮ್ಮೊಂದಿಗೆ ಕೈಜೋಡಿಸಿ ವಿವಿಧ ರೀತಿಯಲ್ಲಿ ನೆರವಾದವರೆಲ್ಲರಿಗೂ ಬಿರುವೆರ್ ಕುಡ್ಲ(ರಿ) ಬೆದ್ರ ಘಟಕದ ಪರವಾಗಿ ಮನದಾಳದ ಕೃತಜ್ಞತೆಗಳು..
ಬಿರುವೆರ್ ಕುಡ್ಲ(ರಿ) ಬೆದ್ರ ಘಟಕ
www.billavaswarriors.com