ಹಿಂದುಳಿದವರು ರಾಜಕೀಯವಾಗಿ ಪ್ರಬಲವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆಶಯ
ಬಿಲ್ಲವ ಯುವಹಬ್ಬ, ಬೆಂಗಳೂರು ಬಿಲ್ಲವ ಅಸೋಸಿಯೇಶನ್ 45ನೇ ವಾರ್ಷಿಕೋತ್ಸವ
ಬೆಂಗಳೂರು: ಇಲ್ಲಿನ ಬಿಲ್ಲವ ಅಸೋಸಿಯೇಶನ್ 45ನೇ ವಾರ್ಷಿಕೋತ್ಸವ ಮತ್ತು ಬಿಲ್ಲವ ಯುವಹಬ್ಬ ಭಾನುವಾರ ಬನ್ನೇರುಘಟ್ಟರಸ್ತೆಯಲ್ಲಿರುವ ಬಿಲ್ಲವ ಭವನದಲ್ಲಿ ನಡೆಯಿತು.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಸುಲಭವಾಗಿಮೇಲೆ ಬರಲು ಸಾಧ್ಯವಿಲ್ಲ. ರಾಜಕೀಯವಾಗಿ ಪ್ರಬಲರಾದರೆ ಮಾತ್ರ ಸಾಧ್ಯ ಎಂದರು.
ಎಲ್ಲರಲ್ಲೂ ಪ್ರತಿಭೆ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ಬೆಳೆಸಬೇಕು. ಇಂತಹ ಪ್ರತಿಭೆಗಳನ್ನು ಗುರುತಿಸುವಲ್ಲಿ ಬೆಂಗಳೂರುಬಿಲ್ಲವ ಅಸೋಸಿಯೇಶನ್ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಅಸೋಸಿಯೇಶನ್ ಅಧ್ಯಕ್ಷ ಎಂ.ವೇದಕುಮಾರ್ ಮಾತನಾಡಿ, ಈಗಾಗಲೇ ಬಿಲ್ಲವ ಹುಡುಗರಿಗೆ ಉಚಿತ ವಿದ್ಯಾರ್ಥಿನಿಲಯ ಇದ್ದು, ಹುಡುಗಿಯರಿಗೆ ಹಾಸ್ಟೆಲ್ ಪ್ರಾರಂಭಿಸಿರುವ ಯೋಜನೆ ಇದೆ ಎಂದರು.
ವೈದ್ಯ ಡಾ.ಸ್ನೇಹಲ್ ಸುಧಾಕರ್ ಬಿ. ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ವಕೀಲ ತಾರಾನಾಥ ಪೂಜಾರಿ, ಉಡುಪಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗೋಪಾಲ್ ಸಿ.ಬಂಗೇರ ಅವರನ್ನು ಗೌರವಿಸಲಾಯಿತು.
ಅಸೋಸಿಯೇಶನ್ ಗೌರವಾಧ್ಯಕ್ಷ ಭಾಸ್ಕರ ಸಿ.ಅಮೀನ್, ಹಿರಿಯ ಉಪಾಧ್ಯಕ್ಷ ಕೇಶವ ಪೂಜಾರಿ, ಉಪಾಧ್ಯಕ್ಷಬಿ.ಎಂ.ಉದಯಕುಮಾರ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಜಂಟಿ ಕಾರ್ಯದರ್ಶಿ ರಾಜೇಶ್ ಕುಮಾರ್, ಕೋಶಾಧಿಕಾರಿವಿ.ಗೋಪಾಲ್, ಸಂಘಟನಾ ಕಾರ್ಯದರ್ಶಿ ಜೆ.ನಾರಾಯಣ ಪೂಜಾರಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಜಾ ಜಯರಾಂ, ಸಹ ಅಧ್ಯಕ್ಷೆಜಯಂತಿ ವಿಜಯಕೃಷ್ಣ ಉಪಸ್ಥಿತರಿದ್ದರು. ಸಂಪತ್ ಕುಮಾರ್ ಡಿ.ಎಸ್, ದೇವಿಪ್ರಸಾದ್, ಸುಪ್ರಿಯಾ ಮಧುಸೂದನ್‌ಕಾರ್ಯಕ್ರಮನಿರೂಪಿಸಿದರು. ವಿದ್ಯಾ ಕೆ.ಟಿ.ಪೂಜಾರಿ ಪ್ರಾರ್ಥಿಸಿದರು. ಸದಸ್ಯರು ಹಾಗು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
—ಪೋಟೋ—–
ಬೆಂಗಳೂರು ಬಿಲ್ಲವ ಅಸೋಸಿಯೇಶನ್ 45ನೇ ವಾರ್ಷಿಕೋತ್ಸವ ಮತ್ತು ಬಿಲ್ಲವ ಯುವ ಹಬ್ಬವನ್ನು ಭಾನುವಾರ ವಿಧಾನ ಪರಿಷತ್ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸಿದರು. ವೈದ್ಯ ಡಾ.ಸ್ನೇಹಲ್ ಸುಧಾಕರ್ ಬಿ., ಅಸೋಸಿಯೇಶನ್ ಅಧ್ಯಕ್ಷಎಂ.ವೇದಕುಮಾರ್, ೌರವಾಧ್ಯಕ್ಷ ಭಾಸ್ಕರ ಸಿ.ಅಮೀನ್, ಹಿರಿಯ ಉಪಾಧ್ಯಕ್ಷ ಕೇಶವ ಪೂಜಾರಿ, ಉಪಾಧ್ಯಕ್ಷಬಿ.ಎಂ.ಉದಯಕುಮಾರ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಜಂಟಿ ಕಾರ್ಯದರ್ಶಿ ರಾಜೇಶ್ ಕುಮಾರ್ಮೊದಲಾದವರಿದ್ದರು.