TOP STORIES:

ಬಿಲ್ಲವರೇ… ಕ್ಷಮಿಸಿ ಹೇಳಲೇಬೆಕಾದ ಅನಿವಾರ್ಯತೆ


ಹೇಳಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಇದರಿಂದ ಬಿಲ್ಲವ ಸಮಾಜದಲ್ಲಿನ ನಾಯಕರುಗಳ ಅಭಿಮಾನಿಗಳಿಗೆ ಇರುಸು ಮುರುಸಾಗಿ ಕೋಪ ಬರಲೂಬಹುದು ಆದರೆ ವಾಸ್ತವದ ಸತ್ಯವನ್ನು ಅರಗಿಸಿ ಪರಾಮರ್ಶೆ ಮಾಡಬೇಕಾಗಿದೆ..

ಕೇವಲ 3-4% ಇರೋ ಬ್ರಾಹ್ಮಣ ಸಮಾಜದ ಹೋರಾಟದ ಫಲದಿಂದ ಸೆನ್ಸಾರ್ ಬೋರ್ಡ್ ನಲ್ಲಿ ಆಕ್ಷೇಪಣೆ ಇಲ್ಲದೆ ಇದ್ದರೂ ಪೊಗರು ಚಿತ್ರದಿಂದ ಕೆಲ ಆಕ್ಷೇಪಾರ್ಹ ದೃಶ್ಯ ತುಣುಕುಗಳನ್ನು ತೆಗಿಸಿರೋದು ಅವರುಗಳ ನಾಯಕತ್ವ ಹಾಗೂ ಒಗ್ಗಟ್ಟಿಗೊಂದು ತಾಜಾ ಉದಾಹರಣೆ. ಮಗದೊಂದು ನಾಯಕತ್ವ ಹಾಗೂ ಒಗ್ಗಟ್ಟಿಗೆ ನಿದರ್ಶನ ಪಂಚಮಶಾಲಿಗಳ ಹೋರಾಟ. ಆದರೆ ಜಗದೀಶ ಅಧಿಕಾರಿಯ ಬೈದೇರುಗಳ ಬಗೆಗಿನ ಹೇಳಿಕೆ, ಕೋಟಿ ಚೆನ್ನಯ್ಯರ ಹೆಸರು ವಿಮಾನ ನಿಲ್ದಾಣಕ್ಕೆ ನಾಮಕರಣ, ಶಂಕರ ಶಾಂತಿಯವರ ಮೇಲಿನ ಹಲ್ಲೆ ಇವ್ಯಾವುದರ ಬಗ್ಗೆ ಚಕಾರ ಎತ್ತದಿರುವುದು ನಮ್ಮ ನಾಯಕರುಗಳ ವಿಫಲತೆಗೆ ನೂತನ ಉದಾಹರಣೆ.

ಸರಿ ಸುಮಾರು 20 ಲಕ್ಷದಷ್ಟಿರುವ ಬಿಲ್ಲವ ಸಮಾಜ ಹಾಗೂ ಉಪ ಪಂಗಡಗಳು ಅಧಿಕಾರವಷ್ಟೇ ನಾಯಕರ ಬಳುವಳಿ ಎಂಬ ಭಾಷ್ಯ ಬರೆದ ನಮ್ಮವರು ಇನ್ನಾದರೂ ಚಿಂತನೆಗೊಳಪಡಬೇಕಾಗಿದೆ. ನಮ್ಮಲ್ಲಿ ನಾಯಕರು, ಯುವನಾಯಕರ ಸಂಘಟನೆಗಳಿಗೆ ಕಮ್ಮಿಯೇನಿಲ್ಲ. ಆದರೆ ಬಿಲ್ಲವ ಸಮಾಜದ ಆಗುಹೋಗುಗಳಿಗೆ ಪ್ರಸ್ತುತ ಸನ್ನಿವೇಶದಲ್ಲಿ ಯಾರಿಂದಾದರೂ ಗೌರವ ತರುವ ಕೆಲಸಗಳಾಗಿವೆಯೇ.!? ಬಿಲ್ಲವರ ಹಿತರಕ್ಷಣೆಗೆ ಒಕ್ಕೊರಲ ಕೂಗಾಗಿದ್ದಾರೆಯೇ.!? ನಮ್ಮಲ್ಲಿ ನಾಯಕರೆನಿಸಿಕೊಂಡಿರುವ ಬಹಳಷ್ಟು ಮಹನೀಯರುಗಳಾದ ರಾಜಶೇಖರ್ ಕೋಟ್ಯಾನ್, ಜಯಂತ್ ನಡುಬೈಲ್, ಉಮಾನಾಥ್ ಕೋಟ್ಯಾನ್, ಸುನಿಲ್ ಕುಮಾರ್, ವಿನಯಕುಮಾರ್ ಸೊರಕೆ,ಕೋಟ ಶ್ರೀನಿವಾಸ್ ಪೂಜಾರಿ , ಪ್ರತೀಭಾ ಕುಳಾಯಿ, ಪೂಣೆಯ ಬಿಲ್ಲವ ಸಂಘದ ಅಧ್ಯಕ್ಷರು ವಿಶ್ವನಾಥ್  ಕಡ್ತಲ,  ಹರಿಕೃಷ್ಣ ಬಂಟ್ವಾಲ್  , ಸುದರ್ಶನ್, ಶಂಕರ ಪೂಜಾರಿ ಇವರುಗಳೊಂದಿಗೆ ಭವಿಷ್ಯದ ಬಿಲ್ಲವ ನಾಯಕರಾಗಬೇಕಾದ ಎಲ್ಲಾ ಲಕ್ಷಣಗಳಿದ್ದ ಬಿರುವೆರ್ ಕುಡ್ಲದ ಉದಯ ಪೂಜಾರಿ, ಯುವ ನಾಯಕರುಗಳಾದ ಅಕ್ಷಿತ್ ಸುವರ್ಣ, ವಿಶ್ವ ಕೋಡಿಕೆರೆ ಹೀಗೆ ಪಟ್ಟಿ ಬೆಳೆಯುತ್ತಾ ಹೋದರೂ ಬಿಲ್ಲವರ ಗಟ್ಟಿ ಧ್ವನಿ ಯಾವತ್ತೂ ಆಗಲಿಲ್ಲ ಅನ್ನೋದು ದುರಾದೃಷ್ಟ.

ಮೇಲ್ದರ್ಜೆಯ ನಾಯಕರುಗಳು ಕೆಲವರು ತಮ್ಮ ಪಕ್ಷಕ್ಕೆ ಸಮಾಜದ ನಾಯಕರುಗಳಾದರೆ ಇನ್ನು ಜಯಂತ್ ನಡುಬೈಲ್ನಂತವರು ಕೇವಲ ಅಧಿಕಾರದ ಆಸೆಗಳಿಗೆ ನಾಯಕನ ಪಟ್ಟ ಅಲಂಕರಿಸಿಕೊಂಡದ್ದು ಜಗಜ್ಜಾಹೀರಾಗಿರುವುದು ಸಮಾಜದ ಮುಂದಿರುವ ಸತ್ಯ. ಇನ್ನು ಇವರುಗಳಿಂದ ಸಮಾಜಕ್ಕೆ ಏನೂ ಸಹಾಯವೇ ಆಗಿಲ್ಲ ಅನ್ನುವಂತಿಲ್ಲ ಆದರೆ ತಮ್ಮ ಸ್ವಾರ್ಥ ಸಾಧನೆಗಾಗಿ ಬಿಲ್ಲವ ಸಮಾಜದ ಹಿತಾಸಕ್ತಿಯನ್ನು ಬಲಿ ಕೊಟ್ಟಿರೋದಂತು ಸುಳ್ಳಲ್ಲ. ಕೇವಲ ಅಧಿಕಾರವೇ ಪರಮ ಗುರಿ ಅನ್ನುವ ಮನಸ್ಥಿತಿಯ ನಾಯಕರುಗಳು ಸದ್ಯಕ್ಕೆ ಗೆಜ್ಜೆಗಿರಿ ಕ್ಷೇತ್ರದ ಅಧಿಕಾರದ ದಾಹಕ್ಕೋಸ್ಕರ ಬಹಿರಂಗವಾಗಿಯೇ ಅಲೆದಾಡುತ್ತಿರುವುದು ನಮ್ಮ ಕಣ್ಣ ಮುಂದಿದೆ. ಅಲ್ಲಿರುವ ತಪ್ಪುಗಳು ಆಚರಣಾ ಲೋಪ ದೋಷಗಳ ಬಗ್ಗೆ ಚಿಂತೆಯನ್ನು ಬಿಟ್ಟು ಧರ್ಮ ಚಾವಡಿಯನ್ನು ಕಲಹದ ಚಾವಡಿಯನ್ನಾಗಿ ಬದಲಾಯಿಸಿ ಬಿಲ್ಲವರಲ್ಲಿಯೇ ಎರಡೂ ಪಂಗಡಗಳನ್ನಾಗಿ ಮಾಡಿರುವುದು ಸದ್ಯದ ಅವರ ಸಾಧನೆ. ಬಿಲ್ಲವ ಸಂಘದಲ್ಲಿಯೇ ಬಣ ಸೃಷ್ಟಿಸಿದ ಇವರುಗಳಿಗೆ ಇದೇನು ದೊಡ್ಡದಲ್ಲ ಬಿಡಿ. ಮುಂದೊಂದು ದಿನ ಇತಿಹಾಸ ಖಂಡಿತವಾಗಿಯೂ ಇದನ್ನು ಪ್ರಶ್ನೆ ಮಾಡದೆ ಇರಲಾರದು.

ಇನ್ನು ಉಮಾನಾಥ್ ಕೋಟ್ಯಾನ್, ಸುದರ್ಶನ್, ಸುನಿಲ್ ಕುಮಾರ್ ಇವರುಗಳು ಜಗದೀಶ್ ಅಧಿಕಾರಿಯ ವಿಷಯದಲ್ಲಿ ತಮ್ಮ ಪಕ್ಷಕ್ಕಾಗಿ ತೋರಿಸಿದ ಮೃದು ಧೋರಣೆ, ನಾವುಗಳು ಅವರುಗಳ ಮೇಲಿಟ್ಟಿದ್ದ ನಂಬಿಕೆ ಕಳಚಿ ಹೋಗುವಂತೆ ಮಾಡಿರುವುದು ಸುಳ್ಳಲ್ಲ. ಸಿನಿಮಾ ವಿಷಯಕ್ಕೆ ಬ್ರಾಹ್ಮಣ ಸಮಾಜ ತೋರಿದ ಧೈರ್ಯ ಹಾಗೂ ಹಿಂದೂ ಧರ್ಮಕ್ಕೆ ಆದ ಅವಮಾನವೆಂಬಂತೆ ತೋರಿಸಿದ ಕಾಳಜಿಯೆದುರು ಇವರುಗಳು ಹಿಂದೂ ನಾಯಕರೆನಿಸಿ ಬೈದೇರುಗಳ ಹಾಗೂ ಬಿಲ್ಲವ ಸಮಾಜದೆದುರು ನಗಣ್ಯರೆನಿಸಿದ್ದು ಹಳಸಿದ ಸತ್ಯ. ಇನ್ನು ವಿನಯಕುಮಾರ್ ಸೊರಕೆಯವರು ಚುನಾವಣೆಯಲ್ಲಿ ಸೋತ ನಂತರ ಯಾಕೋ ಹಿನ್ನೆಲೆಗೆ ಹೋದಂತೆ ಕಾಣುತ್ತಿದೆ. ಹರಿಕೃಷ್ಣ ಬಂಟ್ವಾಳ್ ಅವರ ಬಗ್ಗೆ ಮಾತನಾಡದೆ ಇರೋದು ಒಳಿತು ಕಾರಣ ಅವರಿಗೆ ತಮ್ಮ ರಾಜಕೀಯ ಭವಿಷ್ಯಕ್ಕೆ ಸಮಾಜದ ಪ್ರೀತಿಯನ್ನೇ ಮಾರಿದಂತಹ ಮಹಾನ್ ಪುರುಷ. ರಾಜಶೇಖರ್ ಕೋಟ್ಯಾನ್ ಕೇವಲ ಮುಂಬೈ ಬಿಲ್ಲವರಿಗೆ ಪರಿಚಿತರದಾರೆ ಹೊರತು ಸಮಸ್ತ ಬಿಲ್ಲವರನ್ನು ತಲುಪುವಲ್ಲಿ ವಿಫಲರಾದವರು. ಕಾರಣ ಬಿಲ್ಲವರಿಗೆ ಅನ್ಯಾಯವಾದಾಗ ಮುಂಚೂಣಿಯಲ್ಲಿ ನಿಲ್ಲುವ ಧೈರ್ಯ ತೋರಲಿಲ್ಲ. ಅಲ್ಲಲ್ಲಿ ಚೂರು ಚೂರಾದ ಬಿಲ್ಲವ ಸಮಾಜವನ್ನು ಒಗ್ಗೂಡಿಸುವಲ್ಲಿ ಯಾಕೋ ಒಂದು ಹೆಜ್ಜೆ ಹಿಂದಕ್ಕೆ ಇಟ್ಟರೆನ್ನಲಡ್ಡಿಯಿಲ್ಲ. ಜನಾರ್ಧನ ಪೂಜಾರಿಯವರಿಗೆ ತನ್ನದೇ ಪಕ್ಷದ ಕಾರ್ಯಕರ್ತ ಜೀವ ಬೆದರಿಕೆ ಹಾಕಿದ ಸಮಯದಲ್ಲೂ ಇವರ ಮೌನ ಪ್ರಶ್ನಾರ್ಹ !

ಇವರುಗಳ ಮೇಲಿದ್ದ ಅಸಹನೆಯ ಬೇಗೆಯಲ್ಲಿ ಆಶಾದೀಪವಾಗಿ ಕಂಡಿದ್ದು ಬಿರುವೆರ್ ಕುಡ್ಲದ ಉದಯ ಪೂಜಾರಿಯವರು. ತನ್ನ ಸಂಘಟನೆ ಮೂಲಕ ಬಡವರ ಕಣ್ಣೀರು ಒರೆಸಿ ಶ್ಲಾಘನೀಯರೆನಿಸಿದರೂ ಪ್ರಸ್ತುತ ಅವರ ಸಂಘಟನೆಯ ಕೆಲ ವರ್ತನೆಗಳಿಂದ ಯುವ ಸಮೂಹ ಅಂತರ ಕಾಯುತ್ತಿರುವ ವಿಷಯ ಸುಳ್ಳೇನು ಅಲ್ಲ. ಕಾವ್ಯ ಕೊಲೆ ಪ್ರಕರಣದಿಂದ ಒಮ್ಮೆಲೆ ಮುನ್ನೆಲೆಗೆ ಬಂದ ಸಂಘಟನೆ ಪ್ರಸ್ತುತ ಬಿಲ್ಲವ ಸಮಾಜದಲ್ಲಿನ ಅಪಮಾನ, ಹಲ್ಲೆ ಪ್ರಕರಣಗಳಿಗೆ ಧ್ವನಿ ಆಗಲೇ ಇಲ್ಲ. ಜಗದೀಶ ಅಧಿಕಾರಿಯ ವರ್ತನೆಗೆ ಖಂಡಿಸದೆ ಮೌನವಾಗಿದಿದ್ದು, ಕೋಟಿ ಚೆನ್ನಯರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವ ವಿಷಯದಲ್ಲಿ ಅವರಲ್ಲಿನ ಘಟಕ ಹಾಗೂ ಅದಕ್ಕೆ ಸಂಬಂಧಪಟ್ಟವರು ಕುರುಡುತನ ಪ್ರದರ್ಶಿಸಿದ್ದು, ಬ್ರಹ್ಮಾವರದಲ್ಲಿ ಶಂಕರ ಶಾಂತಿಯವರ ಹಲ್ಲೆ ಪ್ರಕರಣದಲ್ಲಿ ಮೌನ ತೋರಿಸಿ, ದಿನನಿತ್ಯ ಪೊಲೀಸ್ ಇಲಾಖೆಯಲ್ಲಿನ ಅವ್ಯವಹಾರದ ಪೋಸ್ಟ್ ನ್ನು ಮಾತ್ರ ಚಾಚೂ ತಪ್ಪದೆ ಹಾಕುತ್ತಿರುವ ಸಂಘಟನೆಯ ಪೇಜ್ ನ್ನು ಹಿಂಬಾಲಿಸುತ್ತಿರುವ ಕೆಲ ಯುವ ಸಮೂಹ ಕೂಡ ಒಂದು ಪಕ್ಷಕ್ಕೆ ಮಾತ್ರ ಸೀಮಿತರಾಗಿದ್ದಾರೆಯೇ ಅನ್ನುವ ಅನುಮಾನ ಬಿಲ್ಲವ ಯುವ ಸಮುದಾಯವನ್ನು ಕಾಡುತ್ತಿದೆ.

ಇನ್ನು ಅಕ್ಷಿತ್ ಸುವರ್ಣ ಇದ್ದಾರೋ ಇಲ್ಲವೋ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ.ತಡವಾದರೂ ಅಲ್ಲೊಂದು ಇಲ್ಲೊಂದು ಬಿಲ್ಲವಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರ ಹೋರಾಟದ ಧ್ಯೇಯ ಬಿಲ್ಲವ ಸಮಾಜಕ್ಕಿರಲಿ ಅನ್ನೋದು ನಮ್ಮ ಭಾವನೆ. ಮುಂದೆ ನೀವು ಕೂಡ ಮೇಲ್ಪಂಕ್ತಿಯ ನಾಯಕರುಗಳ ಹಾದಿ ಹಿಡಿಯದಿದ್ದಲ್ಲಿ ನಿಮ್ಮಲ್ಲೊಂದು ಆಶಾಭಾವನೆ ಮೂಡಬಹುದು. ದಯವಿಟ್ಟು ಭ್ರಮನಿರಶನ ಮಾಡದಿರಿ. ಬಿಲ್ಲವ ಸಮಾಜದಲ್ಲಿ ಜನಸಂಖ್ಯೆ ಒಂದನ್ನು ಬಿಟ್ಟು ಇನ್ನ್ಯಾವುದು ಸರಿ ಇಲ್ಲ ಅನ್ನೋದು ಜಗಜ್ಜಾಹೀರಾಗಿದೆ. ಸದ್ಯಕ್ಕೆ ಹಿಂದೂ ಪರ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಕೆಲ ಬಿಲ್ಲವ ಪರ ಹೋರಾಟಗಳಿಂದ ಕಿಂಚಿತ್ತು ಆಸೆ ಹುಟ್ಟಿ ಹಾಕಿದರಾದರೂ ಮುಂದೆ ಕಾದು ನೋಡಬೇಕಿದೆ. ಹಾಗೇನೆ ಶಂಕರ ಶಾಂತಿಯವರ ಹಲ್ಲೆ ಪ್ರಕರಣಕ್ಕೆ ತಾರ್ಕಿಕ ನ್ಯಾಯ ಒದಗಿಸುವಲ್ಲಿ ಬಿಲ್ಲವ ಸಮಾಜ ಹಾಗೂ ನಾಯಕರೆಲ್ಲರು ಮೌನ ತಪಸ್ಸು ಆಚರಿಸುತ್ತಿರೋದರಿಂದ ಕಡೆಯ ಆಶಾಭಾವನೆಯಾಗಿ ಸತ್ಯಜಿತ್ ಅವರನ್ನು ಬಿಲ್ಲವ ಸಮಾಜ ಎದುರು ನೋಡುತಿದೆ.
ಇಷ್ಟೆಲ್ಲ ಸಮಸ್ಯೆಗಳ ಮುಂದೆ ನಮ್ಮ ನಾಯಕರೆನಿಸಿಕೊಂಡವರಲ್ಲಿ ಹೆಚ್ಚಿನವರು ತಮ್ಮ ಇರುವಿಕೆ ತೋರ್ಪಡಿಸಲು ಬಿಲ್ಲವ ಸಮಾಜ ಹಾಗೇನೆ ನಾರಾಯಣ ಗುರು ಹಾಗೂ ಕೋಟಿ ಚೆನ್ನಯರನ್ನು ಲೋಗೋ ಆಗಿ ಉಪಯೋಗಿಸಿಕ್ಕೊಳುವ ಕೆಟ್ಟ ಚಾಳಿಯನ್ನು ಇನ್ನೂ ಉಳಿಸಿಕೊಂಡಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ.

ಇನ್ನಾದರೂ ಸುಧಾರಿಸಿಕ್ಕೊಳ್ಳುವಿರೇನೋ ಅನ್ನುವ ಆಶಾಭಾವನೆಯೊಂದಿಗೆ…
ಬೇಸತ್ತಿರುವ ಬಿಲ್ಲವ ಸಮಾಜ.

ಬರಹ :- Wake Up Billavas

Copyrights@wake_up_billavas

Billavaswarriors.com


Related Posts

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »