ನೀರು ಕುಡಿದಷ್ಟು ಉತ್ತಮ ಆರೋಗ್ಯ ನಮ್ಮದಾಗುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಉಗುರು ಬೆಚ್ಚಗಿನ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ದೊರಕುವ ಲಾಭಗಳು ಹೇರಳ. ಅವುಗಳು ಯಾವುವೆಂದು ತಿಳಿಯೋಣ.
* ಮುಂಜಾನೆ ಎದ್ದೊಡನೆಯೇ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯ ಕಾರ್ಯವೈಖರಿ ಉತ್ತಮಗೊಳ್ಳುತ್ತದೆ.
ಅಲ್ಲದೆ ದೇಹದಲ್ಲಿ ಸೇರ್ಪಡೆ ಆಗಿರುವ ಅನಗತ್ಯ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಬಯಸುವವರು ಈ ನೀರಿನ ಬಳಕೆ ಮಾಡಬೇಕು.
* ಹೊಟ್ಟೆನೋವು, ತಲೆನೋವಿನ ತೊಂದರೆ ಎದುರಿಸುತ್ತಿರುವವರು ಒಂದು ಲೋಟದಷ್ಟು ಉಗುರು ಬೆಚ್ಚಗಿನ ನೀರನ್ನು ಸೇವಿಸಿದರೆ ತಕ್ಷಣವೇ ಉಪಶಮನ ಹೊಂದಬಹುದು.
* ನೆಗಡಿ, ಗಂಟಲು ನೋವು ಇದ್ದಾಗ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು.
* ಕೂದಲು ಆರೋಗ್ಯವಾಗಿ ಬೆಳೆಯಬೇಕೆಂದರೆ ಉಗುರು ಬೆಚ್ಚಗಿನ ನೀರಿನ ಸೇವನೆಗಿಂತ ಉತ್ತಮ ಪರಿಹಾರ ಮತ್ತೊಂದಿಲ್ಲ.
* ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
* ಮುಟ್ಟಾದಾಗ ಎದುರಾಗುವ ಕಿಬ್ಬೊಟ್ಟೆಯ ನೋವನ್ನು ಉಗುರು ಬೆಚ್ಚಗಿನ ನೀರು ಉಪಶಮನ ಗೊಳಿಸುತ್ತದೆ.
* ಸ್ವಲ್ಪ ಬಿಸಿಯಾಗಿರುವ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಬೆವರು ಹೆಚ್ಚಿನ ಪ್ರಮಾಣದಲ್ಲಿ ಹೊರಬರುತ್ತದೆ. ಇದರಿಂದ ಬ್ಯಾಕ್ಟೀರಿಯಾ ಅಧಿಕ ಪ್ರಮಾಣದಲ್ಲಿ ಬೆವರಿನ ಮೂಲಕ ಹೊರಬರುತ್ತದೆ.
* ನಿರಂತರವಾಗಿ ಉಗುರು ಬೆಚ್ಚಗಿನ ನೀರನ್ನು ಸೇವಿಸುವುದರಿಂದ ತ್ವಚೆಯು ಸಹ ಆರೋಗ್ಯದಿಂದ ಇರುತ್ತದೆ. ವೃದ್ಧಾಪ್ಯವು ಸಹ ಶೀಘ್ರವಾಗಿ ಆವರಿಸದು.