ಜೀವನದ ಬಹುಪಾಲು ಸಮಯ ಇರ್ವತ್ತೂರು ಮಾಗಣೆ ಮುಟ್ಟಿಕಲ್ಲು ತಾನ ಗರಡಿ ಕುಕ್ಕಜೆ ಇಲ್ಲಿ ಬೈದರ್ಕಳ ಪಾತ್ರಿಯಾಗಿ ಕೋಟಿ ಚೆನ್ನಯ್ಯರ ಸೇವೆಯನ್ನು ಮಾಡುತ್ತಿದ್ದ , ಇತಿಹಾಸ ಪುರುಷರಾದ ಕೋಟಿ ಚೆನ್ನಯ್ಯರ ಬಗ್ಗೆ ಅಪಾರವಾದ ಭಕ್ತಿ, ಜ್ಞಾನ ಹಾಗೂ ನಂಬಿಕೆಯನ್ನು ಹೊಂದಿದ್ದ ನಮ್ಮೂರಿನ ಹೆಮ್ಮೆಯ ಶ್ರೀ ಬಚ್ಚ ಪೂಜಾರಿ ಯವರು ನಿನ್ನೆ ಅಲ್ಪ ಕಾಲದ ಅನಾರೋಗ್ಯದ ನಿಮಿತ್ತ ಧೈವಾಧೀನರಾಧರು ಎಂಬುದು ದುಃಖದ ವಿಷಯ.
*ತುಳುನಾಡಿನ ಕಲೆ, ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಇಂತಹ ಒಬ್ಬ ಹಿರಿಯ, ಅನುಭವಿ, ಮಾರ್ಗದರ್ಶಕರನ್ನು ಕಳೆದು ಕೊಂಡಿರುವುದು ಮುಂದಿನ ಪೀಳಿಗೆಗೆ ಅತಿ ದೊಡ್ಡ ನಷ್ಟ ಎಂದರೂ ತಪ್ಪಾಗಲಾರದು. ಇವರು ಪಕ್ಕದ ಗ್ರಾಮದ ನೇರಳೆ ಅಡಿಸ್ಥಾನ ಗರಡಿ, 41ನೇ ಶೀರೂರು ಹಾಗೂ ಕರಾವಳಿಯ ಹಲವಾರು ಗರಡಿಗಳಲ್ಲಿ ಸರಿಸುಮಾರು ಐವತ್ತು ವರುಷಗಳ ಕಾಲ ಸೇವೆ ಸಲ್ಲಿಸಿ,ಅದೆಷ್ಟೋ ಕಿರಿಯ ಪಾತ್ರಿಗಳಿಗೆ ಮಾರ್ಗದರ್ಶನ ಮಾಡಿ, ಬೆನ್ನು ತಟ್ಟುತ್ತಿದ್ದರು.
ಇವರನ್ನು ಇರ್ವತ್ತೂರು ಮುಟ್ಟಿಕಲ್ಲು ತಾನ ಗರಡಿಯಲ್ಲಿ ವಿಶೇಷ ಸಾರ್ವಜನಿಕ ಸನ್ಮಾನ ಹಾಗೂ ಉಡುಪಿ ಮಂಗಳೂರು ಜಿಲ್ಲೆಗಳಲ್ಲಿ ವಿಶೇಷವಾಗಿ ಸನ್ಮಾನಿಸಿ, ಜಾನಪದ ಅಕಾಡಮಿಯಲ್ಲೂ ಗೌರವಿಸಲಾಗಿತ್ತು ಎಂಬುದು ಅವಿಸ್ಮರಣೀಯ.
ಪೂಜ್ಯರ ಆತ್ಮಕ್ಕೆ ಅವರು ಆರಾಧಿಸಿಕೊಂಡು ಬಂದಿದ್ದ ದೈವ ದೇವರುಗಳು ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುವ, ಓಂ ಶಾಂತಿ