ದಿನಾಂಕ 27-11-2022 ರಂದು ಭಾನುವಾರ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಅತೀ ವಿಜ್ರಂಭಣೆಯಿಂದ ಜರುಗುವ ಶ್ರೀ ಗೆಜ್ಜೆಗಿರಿ ನೂತನಮೇಳದ ಉದ್ಘಾಟನೆ ಹಾಗೂ ಪ್ರಥಮ ದೇವರ ಸೇವೆ ಆಟದ ಆಮಂತ್ರಣ ಪತ್ರಿಕೆ ಯನ್ನು ದಿನಾಂಕ 2-11-2022 ಇಂದು ಗೆಜ್ಜೆಗಿರಿಕ್ಷೇತ್ರದಲ್ಲಿ ಮಧ್ಯಾಹ್ನ ಮಹಾ ಪೂಜೆಯ ನಂತರ ಶ್ರೀ ಕ್ಷೇತ್ರದ ಶಕ್ತಿ ಸಾನಿಧ್ಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಬಿಡುಗಡೆಸಮಾರಂಭದ ದೀಪ ಪ್ರಜ್ವಲಣೆಯನ್ನು ಶ್ರೀ ಸತೀಶ್ ಕುಮಾರ್ ಬಜಾಲ್ ಅವರು ನೆರವೇರಿಸಿದರು. ಆಮಂತ್ರಣ ಪತ್ರಿಕೆಯನ್ನು ಶ್ರೀ ಕೆ. ಚಿತ್ತರಂಜನ್ ಮತ್ತು ಅವರ ಧರ್ಮ ಪತ್ನಿ ಸುಲೋಚನ ಅಮ್ಮ ಅವರ ದಿವ್ಯ ಹಸ್ತದಲ್ಲಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಶ್ರೀ ಪೀತಾಂಬರ ಹೆರಾಜೆ, ಗೌರವಾಧ್ಯಕ್ಷ ಜಯಂತ ನಡುಬೈಲ್, ಪ್ರಧಾನಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಗುರುಪುರ, ಕ್ಷೇತ್ರದ ಶ್ರೀಧರ ಪೂಜಾರಿ, ಶ್ರೀ ಗೆಜ್ಜೆಗಿರಿಯಕ್ಷಗಾನ ಮಂಡಳಿಯ ಸಂಚಾಲಕರಾದ ನವೀನ್ ಸುವರ್ಣ ಸಜೀಪ, ಶ್ರೀ ನವೀನ್ ಅಮೀನ್ ಶಂಕರಪುರ, ಮೇಳದ ನಿತಿನ್ ತೆಂಕಕಾರಂದೂರು, ಕಲಾವಿದ ಶಶಿಕಿರಣ್ ಕಾವು, ಚಂದ್ರಶೇಖರ ಸುಳ್ಯ ಪದವು ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ, ಜನಾರ್ದನಪಡುಮಲೆ, ಪ್ರಕಾಶ್ ನಾರವಿ ಡೊಂಕಬೆಟ್ಟು, ವಿಶ್ವನಾಥ್ ಪೂಜಾರಿ ಮೂಲೆಮನೆ, ಸತೀಶ್ ಪೂಜಾರಿ, ನಾರಾಯಣ ಮಚ್ಚಿನ, ನೀಲಯ್ಯ ಪೂಜಾರಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ಧರು.
ಅಧ್ಯಕ್ಷರು, ಸರ್ವ ಸದಸ್ಯರು ಶ್ರೀ ಕ್ಷೇತ್ರ ಗೆಜ್ಜೆಗಿರಿ ಮತ್ತು ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿ